Advertisement

ಧಾರಾಕಾರ ಮಳೆಗೆ ಜಮೀನು, ಶಾಲೆಗಳು ಜಾಲವೃತ : ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತ!

02:38 PM Aug 02, 2022 | Team Udayavani |

ಕುರುಗೋಡು : ಸೋಮವಾರ ರಾತ್ರಿಯಿಡಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಟ್ಟಣ್ಣದ ಸುತ್ತ ಮುತ್ತ ಮನೆಗಳು ಕುಸಿದು ರೈತರ ಜಮೀನು ಗಳಿಗೆ ಮತ್ತು ಸರಕಾರಿ ಶಾಲೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣ ದಲ್ಲಿ ಹಾನಿ ಉಂಟಾಗಿದೆ.

Advertisement

ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆ 9 ಗಂಟೆ ತನಕ ಸುರಿದ ಮಳೆಯಿಂದ ಕಲ್ಲುಕಂಬ ಗ್ರಾಮದ ರೈತರಾದ ಯಂಕಣ್ಣ, ನಾಯಕರ ದಿವಾಕರಪ್ಪ ಸೇರಿ 2 ಮನೆಯ ಗೋಡೆಗಳು ಸಂಪೂರ್ಣ ಕುಸಿದು ಬಿದ್ದಿವೆ ಯಾವುದೇ ಅಪಾಯ ಸಂಭವಿಸಿಲ್ಲ, ಇನ್ನೂ ಬಾದನಹಟ್ಟಿ ಮತ್ತು ಏರಂಗಳ್ಳಿ ಗ್ರಾಮಗಳ ಮಧ್ಯದಲ್ಲಿರುವ ಹಳ್ಳದ ಸೇತುವೆ ಮುಳುಗಡೆಯಾಗಿ ಅದರ ಪಕ್ಕದಲ್ಲಿ ನೂರಾರು ರೈತರು ಭತ್ತ ನಾಟಿ ಮಾಡಲು ಜಮೀನುಗಳನ್ನು ಹದಗೋಳಿಸಿದ್ದು, ಅವುಗಳು ನೀರು ನುಗ್ಗಿ ಹರಿಯುತ್ತಿವೆ. ಇದರಿಂದ ಕಾಲುವೆಗಳಿಗೆ ನೀರು ಬಂದರೆ ಸಾಕು ಭತ್ತ ನಾಟಿ ಮಾಡೋಕೆ ಅಂತ ಕಾದು ಕೂತಿದ್ದ ರೈತರಿಗೆ ಈ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಸಿದ್ದಮ್ಮನಹಳ್ಳಿ ಗ್ರಾಮದ ಹಳ್ಳದ ಸೇತುವೆ ಸಂಪೂರ್ಣ ಮುಳುಗಡೆ ಯಾಗಿ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಕುಡುತೀನಿ, ಬಳ್ಳಾರಿ, ಸಂಡೂರು, ತೋರಣಗಲ್ಲು ಸೇರಿದಂತೆ ವಿವಿಧ ತಾಲೂಕು ಮತ್ತು ಗ್ರಾಮಗಳಿಗೆ ತೆರಳುವ ಜನರು ಪರದಾಡುವಂತಾಗಿದೆ.

ಇನ್ನೂ ಎಚ್. ವಿರಾಪುರ, ಸಿದ್ದಮ್ಮನಹಳ್ಳಿ ಸೇರಿದಂತೆ ಬಹುತೇಕ ಸರಕಾರಿ ಶಾಲೆಗಳಿಗೆ ಮಳೆಯ ನೀರು ನುಗ್ಗಿದ ಪರಿಣಾಮ ಸಿಮಿಂಗ್ ಫುಲ್ ನಂತೆ ಕಾಣುತ್ತಿವೆ ಇದರಿಂದ ಮಕ್ಕಳಿಗೆ ತುಂಬಾ ತೊದ್ರೆ ಯಾಗಿದೆ.

ಕುಸಿದ ಮನೆಗಳಿಗೆ ಹಾಗೂ ಜಾಲವೃತ ಗೊಂಡ ರೈತರ ಜಮೀನುಗಳಿಗೆ ತಹಸೀಲ್ದಾರ್ ರಾಘವೇಂದ್ರ ರಾವ್, ಗ್ರೇಡ್ ತಹಸೀಲ್ದಾರ್ ಮಲ್ಲೇಶಪ್ಪ, ಗ್ರಾಮಲೆಕ್ಕಿಧಿಕಾರಿಗಳು ಸ್ಥಳಕ್ಕೆ ಭೇಟಿ ಪ್ರಾಥಮಿಕ ವರದಿಯನ್ನು ಸಂಗ್ರಹಿಸಿದ್ದು ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಾ ನಂತರ ಸರಕಾರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ವಿರಕ್ತಮಠ, ಶಿವಾನಂದಪ್ಪಗೆ ‘ಸಿಎನ್ಆರ್ ರಾವ್ ಜೀವಮಾನ ಸಾಧನೆ’ ಪ್ರಶಸ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next