Advertisement

ವಸತಿ ಗೃಹದಲ್ಲಿ ನರಕ ಜೀವನ

01:12 PM Apr 29, 2019 | Naveen |

ಕುರುಗೋಡು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ಗೃಹಗಳಿಗೆ ಸೂಕ್ತ ಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. 17 ವರ್ಷಗಳಿಂದ ದುರಸ್ತಿ ಕಾಣದಿರುವ ಈ ಗೃಹಗಳಲ್ಲಿ ವಾಸಿಸುವ ಶುಶ್ರೂಷಕಿಯರು ನಿತ್ಯ ನರಕ ಜೀವನ ನಡೆಸುತ್ತಿದ್ದಾರೆ. ಇವುಗಳ ದುರಸ್ತಿ ಕಾರ್ಯ ಕಾಣದಿರುವುದು ವೈದ್ಯಾಧಿಕಾರಿಗಳ ಮತ್ತು ಪುರಸಭೆ ಹಾಗೂ ಜಿಲ್ಲಾಡಳಿತ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ.

Advertisement

ಸಮಸ್ಯೆಗಳ ಗೂಡು: 6 ಡಿ ಗ್ರೂಪ್‌ ಹಾಗೂ 6 ಸ್ಟಾಫ್‌ ನರ್ಸ್‌ಗಳಿಗೆ ಅಶ್ರಯವಾಗಿರುವ ವಸತಿ ಕಟ್ಟಡಗಳು 2001ರಲ್ಲಿ ನಿರ್ಮಾಣಗೊಂಡಿದ್ದವು. ಅಂದಿನ ಜಿಪಂ ಅಧಿಕಾರಿ ಅರವಿಂದ ಶ್ರೀವಾಸ್ತವ್‌ ಕಾಮಗಾರಿಗೆ ಚಾಲನೆ ನೀಡಿದ್ದರು. ಕಟ್ಟಡ ಕಾಮಗಾರಿ ಸುಮಾರು 35 ಲಕ್ಷ ರೂ. ಅನುದಾನದಡಿಯಲ್ಲಿ ಮಂಜೂರಾಗಿದ್ದವು. ಕಾಮಗಾರಿ ಮುಗಿದ ಒಂದೇ ವರ್ಷದಲ್ಲಿ ಕಟ್ಟಡ ಬಿರುಕು ಬಿಟ್ಟು ನೀರು ಸರಬರಾಜು ಅಗುವ ಕೊಳವೆಗಳು ಜಂಕ್‌ಗೊಂಡಿದ್ದಾವೆ. ಶೌಚಾಲಯ ಪಿಟ್ ಕಿರಿಕಿರಿ ಆಗುತ್ತಿದ್ದು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ದುರಸ್ತಿ ಅಗದ ಕಾರಣ ಸಮಸ್ಯೆಗಳಿಗೆ ಇನ್ನಷ್ಟು ಉಲ್ಬಣಗೊಂಡು ವಸತಿ ಗೃಹಗಳು ಸಮಸ್ಯೆಗಳ ಗೂಡಾಗಿದೆ.

ನರಕದ ಜೀವನ: ವಸತಿ ಗೃಹಗಳ ಕಿಟಕಿಗಳ ಗಾಜು ಒಡೆದು ಹೋಗಿವೆ. ನೆಲದ ಹಾಸುಬಂಡೆ ಹೊರ ಬರುತ್ತಿವೆ. ವಿದ್ಯುತ್‌ ಸ್ವಿಚ್ ಬೋರ್ಡ್‌ ಗಾಳಿಗೆ ಅಲ್ಲಾಡುತ್ತಿವೆ. ಮಳೆ ಬಂದರೆ ಮೇಲ್ಛಾವಣಿ ಸೋರುತ್ತವೆ. ರಾತ್ರಿ ಪಾಳೆ ಮುಗಿಸಿ ವಿಶ್ರಾಂತಿ ಪಡೆಯಲು ಸಿಬ್ಬಂದಿ ಪರದಾಡಬೇಕಿದೆ.

ನೀರಿನ ಪರದಾಟ: ವಸತಿ ಗೃಹಕ್ಕೆ ಕುಡಿಯುವ ನೀರು ಲಭ್ಯವಿಲ್ಲ. ಪ್ರತಿದಿನ ನಿವಾಸಿಗಳು ಪಟ್ಟಣದ ಓಣಿ ಓಣಿ ತಿರುಗಿ ನೀರು ಸಂಗ್ರಹಿಸಿಕೊಳ್ಳುತ್ತಾರೆ. ಬಳಕೆ ನೀರು ಸುಮಾರು 12 ವರ್ಷದ ಹಿಂದೆ ಪಂಪ್‌ ಹೌಸ್‌ ನಿರ್ಮಿಸಲಾಗಿದೆ. ಗೃಹಗಳಿಗೆ ನೀರು ಸರಬರಾಜುಗುತ್ತಿಲ್ಲ. ನೀರು ಸಂಗ್ರಹಿಸಲು ಮೋಟರ್‌ ಆಳವಡಿಸಿಕೊಳ್ಳಬೇಕಿದೆ. ಮೊದಲಿಗೆ ಅಳವಡಿಸಿದ್ದ ನೀರು ಸಂಗ್ರಹ ಸಿಂಟೆಕ್ಸ್‌ಗಳು ಮಾಯವಾಗಿದೆ. ನೀರು ತುಂಬಿಸಲು ಕನಿಷ್ಟ 2ಗಂಟೆ ಕಾಲ ಬೇಕಿದೆ.

ಕಟ್ಟಡದಲ್ಲಿ ವಾಸಿಸುವ ಸಿಬ್ಬಂದಿ ಗೃಹದ ದುಸ್ಥಿತಿ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗೆ ಮನವಿ ನೀಡಿದ್ದಾರೆ. ಕೇವಲ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಏನಾದರೂ ಅದರ ಬಗ್ಗೆ ಪದೇ ಪದೇ ದ್ವನಿ ಎತ್ತಿದರೆ ನಿಮ್ಮ ಮನೆ ನೀವೇ ದುರಸ್ತಿ ಮಾಡಿಕೊಳ್ಳಿ ಎಂಬುದು ಅಧಿಕಾರಿಗಳು ಉತ್ತರಿಸುತ್ತಾರೆ.

Advertisement

ನೀರಿನ ಸಮಸ್ಯೆ ಮತ್ತು ಸ್ವಚ್ಛತೆ ಮಾತ್ರ ಕಲ್ಪಿಸಿಕೊಡುತ್ತೇವೆ. ಇನ್ನುಳಿದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್‌ ಕಳಿಸಲಾಗುವುದು.
•ಫಿರೋಜ್‌ಖಾನ್‌,
ಮುಖ್ಯಾಧಿಕಾರಿ, ಪುರಸಭೆ.

ವಸತಿ ಗೃಹಗಳ ದುರಸ್ತಿ ಬಗ್ಗೆ ಗಮನಕ್ಕೆ ಬಂದಿಲ್ಲ, ಅದನ್ನು ಟಿಎಚ್ಒ ಅಧಿಕಾರಿ ಹತ್ತಿರ ಮಾತನಾಡಿ ಸಮಸ್ಯೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.
•ಶಿವರಾಜ್‌ ಹೆಡೆ,
ಜಿಲ್ಲಾ ಆರೋಗ್ಯ ಅಧಿಕಾರಿ.

ಸುಧಾಕರ

Advertisement

Udayavani is now on Telegram. Click here to join our channel and stay updated with the latest news.

Next