Advertisement

ಕುರುಗೋಡು ಪೊಲೀಸರ ಕಾರ್ಯಾಚರಣೆ : 1350 ಗ್ರಾಂ. ಗಾಂಜಾ ವಶ, ಮೂವರ ಬಂಧನ

02:41 PM Mar 12, 2022 | Team Udayavani |

ಕುರುಗೋಡು : ಕುರುಗೋಡು ಮತ್ತು ಸಿಂದಿಗೇರಿ ರಸ್ತೆ ಮಧ್ಯೆ ಎಚ್. ಆರ್. ಗವಿಯಪ್ಪ ಜಮೀನಿನ ಅತ್ತಿರ 1350 ಗ್ರಾಂ ಗಾಂಜಾ ಅಂದಾಜು 15000 ಬೆಲೆಯ ವಶಪಡಿಸಿಕೊಂಡು 3 ಆರೋಪಿಗಳನ್ನು ಬಂದಿಸುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಆರೋಪಿಗಳು ಚಂದ್ರಶೇಖರ್ ಬೆಂಗಳೂರು (36). ಮಲ್ಲಿಕಾರ್ಜುನ ಕೋಳೂರು (48). ಈಡಿಗೀರ್ ಗಂಗಾಧರ್ ಸಿಂದಿಗೇರಿ ಇವರನ್ನು ಬಂಧಿಸಿ ನಗದು ಹಣ 250 ನ್ನು ವಶಪಡಿಸಿಕೊಂಡು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಕರಾಗೃಹಕ್ಕೆ ಕಳಿಸಿದ್ದಾರೆ.

ಗಾಂಜಾವನ್ನು ಆಕ್ರಮವಾಗಿ ಸ್ವಾದಿನ ಹೊಂದಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಕುರುಗೋಡು ಪೊಲೀಸರು ಜಿಲ್ಲಾಕ್ಕೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರ ಒಂದು ಕಾರ್ಯವನ್ನು ನೋಡಿ ಸೂಕ್ತ ಬಹುಮಾನ ವನ್ನು ಘೋಷಿಸಿದ್ದಾರೆ.

ಸಿ. ಪಿ. ಐ. ಚಂದನ್ ಗೋಪಾಲ್, ಪಿಎಸ್ಐ ಮೌನೇಶ್ ರಾಥೋಡ್ ನೇತೃತ್ವದಲ್ಲಿ ವಿಶೇಷ ತಂಡ ಚುರುಕುಗೊಂಡು ಆರೋಪಿಗಳನ್ನು ದಸ್ತಿಗಿರಿ ಮಾಡುವಲ್ಲಿ ಯಶಸ್ವಿ ಕಂಡಿದ್ದಾರೆ.

Advertisement

ಇದನ್ನೂ ಓದಿ : ಗುಲಾಲಿ ಚೆಂಡಿನ ಟೆಸ್ಟ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ

Advertisement

Udayavani is now on Telegram. Click here to join our channel and stay updated with the latest news.

Next