Advertisement

ಇಬ್ಬರಿಗೆ ಸೋಂಕು: ಬೆಚ್ಚಿಬಿದ್ದ ಕುರುಗೋಡು ಜನ

07:05 PM Jun 29, 2020 | Naveen |

ಕುರುಗೋಡು: ಸಮೀಪದ ಚಾನಾಳ್‌ ಗ್ರಾಮದ 58 ವರ್ಷದ ವ್ಯಕ್ತಿಗೆ ಹಾಗೂ ಸೋಮಸಮುದ್ರ ಗ್ರಾಮದ 45 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ಇರುವುದು ಶನಿವಾರ ದೃಢಪಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Advertisement

ಚಾನಾಳ್‌ ಗ್ರಾಮದ ವ್ಯಕ್ತಿ ತನ್ನ ಕುಟುಂಬಸ್ಥರೊಂದಿಗೆ ತಲಮಾಮಡಿ ಎಂಬ ಗ್ರಾಮಕ್ಕೆ ಮದುವೆಗೆ ಹೋಗಿ ಬರುವಾಗ ಅಪಘಾತಕ್ಕೆ ಈಡಾಗಿ ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲಿ ರಕ್ತ ಪರೀಕ್ಷೆ ಮಾಡಿದಾಗ ಕೋವಿಡ್ ಸೋಂಕು ಇರುವುದು ಕಂಡುಬಂದಿದೆ. ಇನ್ನೂ 6 ಜನ ಕುಟುಂಬಸ್ಥರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸ್ಥಳಕ್ಕೆ ಪಿಡಿಒ ರುದ್ರಪ್ಪ, ಗ್ರಾಮಲೆಕ್ಕಾಧಿಕಾರಿ ಮಹೆಬೂಬ್‌ಬಾಷಾ, ಗ್ರಾಪಂ ಸಿಬ್ಬಂದಿ ತಿಪ್ಪಮ್ಮ, ಮಲ್ಲಿಕಾರ್ಜುನ, ಮಲ್ಲೇಪ್ಪ, ಅಳ್ಳಪ್ಪ, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಗ್ರಾಮವನ್ನು ಕಂಟೇನ್ಮೆಂಟ್‌ ಪ್ರದೇಶವನ್ನಾಗಿಸಿ ಬ್ಯಾರಿಕೇಡ್‌ ಅಳವಡಿಸಿ ಸ್ಯಾನಿಟೈಸ್‌ ಮಾಡಿಸಿದ್ದಾರೆ.

ಸೋಮಸಮುದ್ರ ಗ್ರಾಮದ 45 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು ಇರುವುದು ದೃಢವಾಗಿದ್ದು, ಸುಮಾರು ದಿನಗಳಿಂದ ದಮ್ಮು, ಕೆಮ್ಮುನಿಂದ ಆನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ಹೋದಾಗ ಕೊರೊನಾ ಸೋಂಕು ಇರುವುದು ಕಂಡುಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next