ಕುರುಗೋಡು: ಸಂಪರ್ಕ ಸೇತುವೆ ದಾಟಬೇಕೆಂದರೆ ಕಾಯಲೇಬೇಕು. ಎದುರು-ಬದುರು ವಾಹನ ಬಂದರಂತೂ ಟ್ರಾಫಿಕ್ ಜಾಮ್ ಗ್ಯಾರಂಟಿ. ಪಾದಚಾರಿಗಳು ದಾಟಲೂ ಕಿರಿ ಕಿರಿ. ಸಣ್ಣಪುಟ್ಟ ವಾಹನ ಚಾಲನೆಗೂ ಸಮಸ್ಯೆ.
Advertisement
ಹೌದು, ಇದು ಕುರುಗೋಡು, ಕಂಪ್ಲಿ, ಬಳ್ಳಾರಿ ಮಾರ್ಗವಾಗಿ ಸಂಚರಿಸುವ ಸಾವಿರಾರು ವಾಹನಗಳು ನಿತ್ಯ ಎದುರಿಸುತ್ತಿರುವ ಸಮಸ್ಯೆ.
Related Articles
Advertisement
ಮುಖ್ಯ ರಸ್ತೆ ಮೇಲೆ ಹಾದುಹೋಗಿರುವ ಸೋಮಲಾಪುರ ಕ್ರಾಸ್ ಕುರುಗೋಡು ಮಾರ್ಗದಲ್ಲಿ ಎಲ್ಎಲ್ಸಿ ಕಾಲುವೆ ಸೇತುವೆ ಇದ್ದು. ಇದು ಸುಮಾರು 1955-60ರಲ್ಲಿ ನಿರ್ಮಿಸಲಾಗಿದೆ. ಇತ್ತೀಚೆಗೆ ಈ ರಸ್ತೆಯನ್ನು ಎಸ್.ಎಚ್.132 ಆಗಿ ಮೇಲ್ದರ್ಜೆಗೇರಿಸಲಾಗಿದೆ.
ಇನ್ನೂ ಸೇತುವೆ ಭಾಗದ ತಡೆಗೋಡೆ ಸಿಮೆಂಟ್ ಪದರು ಉದುರುತ್ತಿದೆ. ಇದರ ಜತೆಗೆ ಸೇತುವೆಯ ಅಲ್ಲಲ್ಲಿ ತೆಗ್ಗು ಬಿದ್ದಿದ್ದು, ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವಾಗ ಏನಾಗುತ್ತೋ ಎಂದು ಭಯದಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ತುರ್ತು ಪರಿಸ್ಥಿತಿಗೆ ಧಕ್ಕೆ: ಸಾಮಾನ್ಯ ವಾಹನಗಳು ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸರಾಗವಾಗಿ ಸಾಗಲು ಕೆಲವೊಮ್ಮೆ ಸಮಸ್ಯೆಯಾದ ಸನ್ನಿವೇಶಗಳು ಈ ಮಾರ್ಗದಲ್ಲಿ ಪ್ರಯಾಣಿಸುವ ಚಾಲಕರು ಸ್ಮರಿಸಬಹುದು.
ಸೇತುವೆ ನಿರ್ಮಾಣಕ್ಕೆ ಒತ್ತಾಯ: ಕಳೆದ ಎರಡ್ಮೂರು ತಿಂಗಳಿಂದ ಕಾಲುವೆಯಲ್ಲಿ ನೀರಿಲ್ಲ. ಹಾಗಾಗಿ ಈ ಮಾರ್ಗದಲ್ಲಿ ಸಂಚಾರಕ್ಕೆ ತಾತ್ಕಾಲಿಕ ಅನುಕೂಲ ಒದಗಿಸಿ. ಹೊಸ ಸೇತುವೆ ನಿರ್ಮಿಸಿದರೆ ಮುಂದಾಗುವ ಅವಘಡಗಳು ತಪ್ಪಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಲಿಖೀತ ರೂಪದಲ್ಲಿ ಹಲವು ಬಾರಿ ಮನವರಿಕೆ ಮಾಡಿದರೂ ಇದುವರೆಗೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸೇತುವೆ ಚಿಕ್ಕದಾಗಿದ್ದು, ಸಂಚಾರಕ್ಕೆ ತೊಂದರೆ ಆಗಿದೆ. ಗ್ರಾಮಸ್ಥರು ಮತ್ತು ಚಾಲಕರು ಮೇಲಧಿಕಾರಿಗಳಿಗೆ ತಿಳಿಸುವಂತೆ ಕೂಡ ತಿಳಿಸಿಲ್ಲ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಸೇತುವೆಯ ದುರಸ್ತಿ ಬಗ್ಗೆ ಮಾತನಾಡುವೆ.•ಮಂಜುನಾಥ,
ಸಿಪಿಐ, ಕುರುಗೋಡು. ಈ ಮಾರ್ಗದ ರಸ್ತೆಗೆ ಬಂದರೆ ಸೇತುವೆ ಬಳಿ ಎದುರುಗಡೆ ಬರುವ ವಾಹನಗಳು ನೋಡಿದರೆ ಮೈ ಜುಮ್ಮೆನಿಸುತ್ತೆ. ಅದರಲ್ಲೂ ಸೇತುವೆ ದಾಟುವಾಗ ಯಾವಾಗ ದಾಟುತ್ತೇವೆಯೋ ಅನಿಸುತ್ತೆ. ಎದುರು ಬದುರು ವಾಹನ ಬಂದರೆ ಕೆಲ ನಿಮಿಷ ಕಾದು ಆನಂತರ ಹೋಗಬೇಕು. ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಯಾವಾಗ ಏನು ಆಗುತ್ತೆ ಗೊತ್ತಿಲ್ಲ.
•ಪರುಶುರಾಮ,
ಚಾಲಕರು.