ಕುರುಗೋಡು: ಕೆರೆಯಲ್ಲಿ ಬಿದ್ದ ಕುರಿಯನ್ನು ಕಾಪಾಡಲು ಹೋಗಿ ಕುರಿಗಾಹಿ ನಿರುಪಾಲು ಆಗಿರುವ ಘಟನೆ ಪಟ್ಟಣ ಸಮೀಪದ ದಾಸಪುರ ಗ್ರಾಮದಲ್ಲಿ ಜರುಗಿದೆ.
ಮೃತಪಟ್ಟಿರುವ ಕುರಿಗಾಹಿ ದಾಸಪುರ ಗ್ರಾಮದ ರುದ್ರೇಶ್ (21) ವರ್ಷ ಎನ್ನಲಾಗಿದೆ.ಹಲವು ದಿನಗಳಿಂದ ಕುರಿ ಗಾಹಿ ಕೆಲಸ ಮಾಡುತಿದ್ದು, ಎಂದಿನಂತೆ ಕುರಿ ಮೇಯಿಸಲು ಹೋಗಿದ್ದು, ಕುರಿ ಕೆರೆಗೆ ಬಿದ್ದ ವೇಳೆ ಅದನ್ನು ಕಾಪಾಡಲು ಹೋಗಿರುವ ಸಂದರ್ಭದಲ್ಲಿ ಈ ಘಟನೆ ಜರುಗಿದೆ ಎಂದು ಗ್ರಾಮದ ಮೂಲಗಳಿಂದ ತಿಳಿದು ಬಂದಿದೆ.
ಬೆಳಿಗ್ಗೆ ಕುರಿ ಕಾಯಲು ಹೋಗಿದ್ದ ಸಂದರ್ಭದಲ್ಲಿ ಸಿರಿಗೇರಿ, ಕೊಂಚಗೇರಿ, ದಾಸಪುರ, ಸಿದ್ದಾಪುರ ಗ್ರಾಮಗಳ ಜೀವನಾಡಿಯಾಗಿರುವ ಕುಡಿಯುವ ನೀರಿನ ಕೆರೆ ಗಡ್ಡೆಯಿಂದ ಕುರಿ ನುಗ್ಗಿದ ವೇಳೆ ಅವಘಡ ನಡೆದಿದೆ ಎಂದು ಹೇಳಲಾಗಿದೆ.
ರುದ್ರೇಶ್ ಮನೆಗೆ ಶಾಸಕ ಪುತ್ರ ಎಂ. ಎಸ್. ಸಿದ್ದಪ್ಪ, ನೀರಾವರಿ ಎಇಇ, ಗ್ರಾಪಂ ಪಿಡಿಓ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಬಡ ಕುಟುಂಬದ ಕುರಿ ಗಾಹಿ ಮೃತ ದುರ್ದೈವಿ ರುದ್ರೇಶ್ ಕುಟುಂಬಕ್ಕೆ ಯಾವುದೇ ಪರಿಹಾರ ನೀಡದೆ ಹೋಗಿರುವುದರಿಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.