Advertisement

ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲು ಸಿಕ್ಕೇ ಸಿಗುತ್ತೆ

06:21 PM Jan 20, 2021 | Team Udayavani |

ದಾವಣಗೆರೆ: ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ದೊರೆಯುವುದು ಕೂಡ ಅಷ್ಟೇ ಸತ್ಯ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

Advertisement

ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಎಸ್‌ಟಿ ಮೀಸಲಾತಿ ಹೋರಾಟ ಸಭೆಯನ್ನುದ್ದೇಶಿಸಿ ಶ್ರೀಗಳು ಮಾತನಾಡಿದರು. ಹಾಲುಮತವೆಂಬ ಜೇನುಗೂಡಿಗೆ ಕೆಲವರು ಕಲ್ಲು ಹೊಡೆದಿದ್ದಾರೆ. ಆದರೆ ನಾವೆಲ್ಲರೂ ಒಂದಾಗುತ್ತೇವೆ. ಮೀಸಲಾತಿ ಎಂಬ ಜೇನುತುಪ್ಪ ಸವಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾದಯಾತ್ರೆ ಯಾರ ವಿರುದ್ಧವೂ ಅಲ್ಲ. ಇದರಿಂದ ನಮಗೆ ಲಾಭ-ನಷ್ಟ ಇಲ್ಲ. ಒಂದೆರಡು ಕೆಜಿ ದೇಹದ ತೂಕ ಕಡಿಮೆಯಾಗಬಹುದು ಹಾಗಾಗಿ ಯಾರೂ ಗೊಂದಲ ಸೃಷ್ಟಿಸಬಾರದು. ಗೊಂದಲ ಸೃಷ್ಟಿಯಾದಲ್ಲಿ ನಿಮ್ಮ ಕಾಲ ಮೇಲೆ ಕಲ್ಲು ಬೀಳುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:ಮತದಾರರ ಅಂತಿಮ ಪಟ್ಟಿ ಪ್ರಕಟ: ಡಿಸಿ ಕವಿತಾ

ಈ ಹೋರಾಟದಿಂದ ಹಿಂದೆ ಸರಿಯಬೇಡಿ. ನಿಮ್ಮನ್ನು ಸಂಸದರನ್ನಾಗಿ ಮಾಡುತ್ತೇವೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾವು ಕಿಂಗ್‌ಮೇಕರ್‌ ಹೊರತು ಕಿಂಗ್‌ಅಲ್ಲ. ಅಲ್ಲದೆ ಬೇರೆಯವರ ಕಾಲಿಗೆ ಬೀಳುವ ಅನಿವಾರ್ಯತೆಯೂ ನಮಗಿಲ್ಲ ಎಂದರು. ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಹೋರಾಟಕ್ಕೂ ಪೂರ್ವದಲ್ಲಿ ಇಬ್ಬರು ಶ್ರೀಗಳು ಸಿದ್ದರಾಮಯ್ಯ ಮನೆಗೆ ಹೋಗಿ ಆಹ್ವಾನ ನೀಡಿದ್ದರು.

Advertisement

ಆದಾಗ್ಯೂ ತಮ್ಮನ್ನು ಯಾರೂ ಕರೆದಿಲ್ಲ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಕೈ ಮುಗಿದು ಕೇಳುವೆ. ದಯಮಾಡಿ ಗೊಂದಲದ ಹೇಳಿಕೆ ನೀಡಿ ಸಮಾಜಕ್ಕೆ ಅನ್ಯಾಯ ಮಾಡಬೇಡಿ. ಈ ಪಾದಯಾತ್ರೆಗೆ ಆರ್‌ಎಸ್‌ಎಸ್‌ ಹಣ ನೀಡಿದೆ ಎಂಬ ಸಿದ್ದರಾಮಯ್ಯನವರ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು. ಸಮಾವೇಶದಲ್ಲಿ ಈಶ್ವರಾನಂದಪುರಿ ಶ್ರೀ, ರಾಜನಹಳ್ಳಿ ಶಿವಕುಮಾರ್‌, ಜಿ.ಸಿ.ನಿಂಗಪ್ಪ, ಜೆ.ಎನ್‌. ಶ್ರೀನಿವಾಸ್‌, ಶ್ವೇತಾ ಶ್ರೀನಿವಾಸ್‌, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಆರ್‌. ಜಯಶೀಲ, ತುರ್ಚಗಟ್ಟದ ಎಸ್‌. ಬಸವರಾಜಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next