Advertisement

ಕುರ್ತಿ ಪತಾಕೆ

12:51 PM Nov 09, 2018 | |

ಶುಭ ಸಮಾರಂಭಗಳೇ ಇರಲಿ, ಕಾಲೇಜು ಕಾರ್ಯಕ್ರಮಗಳೇ ಇರಲಿ ಅಥವಾ ಪ್ರತಿನಿತ್ಯ ಧರಿಸುವುದಕ್ಕೇ ಆಗಲಿ, ಎಲ್ಲ ಸಂದರ್ಭಕ್ಕೂ ಹೊಂದಿಕೆಯಾಗುವ ದಿರಿಸು ಒಂದಿದ್ದರೆ ಅದು ಕುರ್ತಿ. ಕ್ರಿ.ಪೂ. 2ನೇ ಶತಮಾನದಲ್ಲಿ, ನಮ್ಮ ದೇಶದಲ್ಲೇ ರೂಪುಗೊಂಡ ಕುರ್ತಿ, ಈವರೆಗೂ ವಿವಿಧ ಪ್ರಯೋಗಗಳಿಗೆ ಒಳಗಾಗಿದೆ. ಸಾಮಾನ್ಯವಾಗಿ ಕುರ್ತಿಯನ್ನು ಜಾಕೆಟ್‌, ವೇಯಿಸ್ಟ್‌ ಕೋಟ್‌ನಂತೆ ತೊಡುವ ಪರಿಪಾಠವಿದೆ. ಇಂತಿಪ್ಪ ಕುರ್ತಿಯಲ್ಲಿ ಏನೇನು ಲೇಟೆಸ್ಟ್‌ ಬೆಳವಣಿಗೆಗಳಾಗಿವೆ ಗೊತ್ತಾ?

Advertisement

ನೆಲ ಮುಟ್ಟುವ ಕುರ್ತಿ
ಕುರ್ತಿ ಮತ್ತು ಲೆಹೆಂಗಾ ಕಾಂಬಿನೇಷನ್ನು ಹೇಳಿ ಮಾಡಿಸಿದ್ದು. ಶುಭ- ಸಮಾರಂಭಗಳು ಮತ್ತು ಸ್ಪೆಷಲ್‌ ಕಾರ್ಯಕ್ರಮಗಳಂದು ಇವೆರಡನ್ನೂ ಮ್ಯಾಚಿಂಗ್‌ ರೀತಿಯಲ್ಲಿ ಧರಿಸಿದರೆ, ಅದೇ ಕಾರಣದಿಂದ ಲುಕ್‌ ಹೆಚ್ಚುವುದರಲ್ಲಿ, ಒಟ್ಟು ಸೌಂದರ್ಯಕ್ಕೆ ವಿಶೇಷ ಮೆರುಗು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಫ್ರಾಕ್‌ ಸ್ಟೈಲ್‌
ಮಂಡಿಯಳತೆಗೆ ಬರುವ ಕುರ್ತಿಗಳು ಲೂಸ್‌ ಪ್ಯಾಂಟ್‌ ಮತ್ತು ಪಲಾಝೋಗಳ ಜೊತೆಗೆ ಹೊಂದುತ್ತವೆ. ನೀಳ ಕಾಯದವರಿಗೆ ಫ್ರಾಕ್‌ ಸ್ಟೈಲ್‌ ಕುರ್ತಿ ಬಹಳ ಚೆನ್ನಾಗಿ ಒಪ್ಪುತ್ತದೆ. ಎತ್ತರ ಕಮ್ಮಿಯಿರುವವರಿಗೆ ಈ ದಿರಿಸು ಒಪ್ಪುವುದಿಲ್ಲ. ಈ ದಿರಿಸಿನಿಂದ ಅವರು ಇನ್ನಷ್ಟು ಗಿಡ್ಡವಾಗಿ ಕಾಣುವ ಅಪಾಯವಿದೆ.

ಫ್ರಂಟ್‌ ಸ್ಲಿಟ್‌
ಸಿನೆಮಾ ಸಮಾರಂಭಗಳಲ್ಲಿ ನೆಚ್ಚಿನ ತಾರೆಯರು ನೀಳವಾದ ಕೋಟ್‌ ಮಾದರಿಯ ಕುರ್ತಿ ಧರಿಸಿರುವುದನ್ನು ನೋಡಿರುತ್ತೀರಾ. ದಿರಿಸಿನ ಮುಂಭಾಗದಲ್ಲಿ ಸೀಳಿನ ವಿನ್ಯಾಸವಿರುವುದರಿಂದ ಈ ಕುರ್ತಿಯನ್ನು ಫ್ರಂಟ್‌ ಸ್ಲಿಟ್‌ ಕುರ್ತಿ ಎನ್ನುತ್ತಾರೆ. ಬೆಲ್‌ ಬಾಟಮ್‌ ಶೈಲಿಯ ಪ್ಯಾಂಟ್‌, ಪಲಾಝೋಗಳೊಂದಿಗೆ ಇದನ್ನೂ ಧರಿಸಿದರೆ ಸೌಂದರ್ಯ ಇಮ್ಮಡಿಸಿದಿಂತೆ ಕಾಣುತ್ತದೆ.

ಶಾರ್ಟ್‌ ಕುರ್ತಿ
ಪಲಾಝೋ ಮತ್ತು ಬೆಲ್‌ ಬಾಟಂ ಶೈಲಿಯ ಪ್ಯಾಂಟು ಇಷ್ಟಪಡುವವರಿಗೆಂದೇ ಶಾರ್ಟ್‌ ಕುರ್ತಿಗಳಿವೆ. ಶರ್ಟಿನ ಉದ್ದದಷ್ಟಿರುವ ಶಾರ್ಟ್‌ ಕುರ್ತಿಗಳು ಮಾಡರ್ನ್ಲು ಕ್ಕನ್ನು ನೀಡುವುದರಿಂದ ದೈನಂದಿನ ಬಳಕೆಗೂ ಇದು ಹೆಚ್ಚು ಸೂಕ್ತ.

Advertisement

ಜಾಕೆಟ್‌ ಕುರ್ತಿ
ಸಾಂಪ್ರದಾಯಿಕ ಕುರ್ತಾಗೆ ರಾಯಲ್‌ ಲುಕ್‌ ನೀಡುವ ಆಸೆಯಿದೆಯಾ? ಯಾರಿಗಿಲ್ಲ ಎಂದು ಮರುಪ್ರಶ್ನೆ ಹಾಕುತ್ತಿದ್ದೀರಾ? ರಾಯಲ್‌ ಲುಕ್‌ ಎಂದಾಕ್ಷಣ ಅದಕ್ಕೆ ಹೆಚ್ಚು ಹಣ ತಗಲುತ್ತದೆ ಎಂದುಕೊಳ್ಳಬೇಡಿ, ಅಲ್ಟರೇಷನ್‌ ಮಾಡುವ ಪ್ರಮೇಯವೂ ಬರುವುದಿಲ್ಲ. ಏಕೆಂದರೆ, ನೀವು ಮಾಡಬೇಕಾಗಿರುವುದಿಷ್ಟೆ. ಕುರ್ತಿಯ ಮೇಲೆ ಜಾಕೆಟ್‌ ತೊಟ್ಟರಾಯಿತು. ಜಾಕೆಟ್‌ ಮ್ಯಾಚ್‌ ಆಗುತ್ತಿದೆ ಎನ್ನುವುದನ್ನು ಖಾತರಿ ಪಡಿಸಿಕೊಂಡರೆ ಸಾಕು.

ಅಸಿಮ್ಮೆಟ್ರಿಕ್‌ ಕುರ್ತಿ
ಎಲ್ಲಾ ರೀತಿಯಿಂದಲೂ ಫಿಟ್‌ ಆದ, ಪಕ್ವ ವಿನ್ಯಾಸ ಮತ್ತು ಅಳತೆಯನ್ನು ಇಷ್ಟಪಡುವವರು ಒಂದು ಕಡೆಯಾದರೆ, ಅದೇ ರೀತಿ ಪಕ್ವವಾಗಿಲ್ಲದ ವಿನ್ಯಾಸಗಳು, ತಾಳ ಮೇಳವಿಲ್ಲದ ಅಳತೆಯ ಕುರ್ತಿಗಳನ್ನು ಇಷ್ಟಪಡುವವರೂ ಇದ್ದಾರೆ. ಇವುಗಳನ್ನು ಚೂಡಿದಾರ, ದೋತಿ ಪ್ಯಾಂಟ್‌ ಮತ್ತು ಉದ್ದದ ಸ್ಕರ್ಟ್‌ ಜತೆಗೂ ಮ್ಯಾಚ್‌ ಮಾಡಬಹುದು. 

Advertisement

Udayavani is now on Telegram. Click here to join our channel and stay updated with the latest news.

Next