ಭರತ್ ಕುರ್ನೆಯನ್ನು 10 ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ವಶಕ್ಕೆ ನೀಡಿ 3ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ.
Advertisement
ಆರೋಪಿ ಗೌರಿ ಹತ್ಯೆಯ ಆರೋಪಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದಲ್ಲದೆ, ತನ್ನ ತೋಟದಲ್ಲೇ ಹಂತಕರಿಗೆ ಬಂದೂಕು ತರಬೇತಿ ನೀಡಿದ್ದಾನೆ. ಓಡಾಡಲು ಕಾರು ಕೊಟ್ಟಿದ್ದ. ಹೀಗಾಗಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬೆಳಗಾವಿ, ಪೂನಾ, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಕರೆದೊಯ್ಯಬೇಕಿದೆ ಎಂದು ಎಸ್‌ಐಟಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಆ.23ರವರೆಗೆ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ.
ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಹೊಂದಿದೆ. ಕೆಲ ದಿನಗಳ ಹಿಂದಷ್ಟೇ ಎನ್ ಐಎ ಅಧಿಕಾರಿಗಳು ವೈಭವ್ ರಾವತ್ ಹಾಗೂ ಈತನ ಇಬ್ಬರು ಸಹಚರರನ್ನು ಬಂಧಿಸಿ, 10ಕ್ಕೂ ಹೆಚ್ಚು ಬಾಂಬ್‌ಗಳು, ಆರ್‌ಡಿಎಕ್ಸ್ ಮತ್ತು ನಾಡ ಪಿಸ್ತೂಲ್‌ಗಳನ್ನು ವಶಪಡಿಸಿ ಕೊಂಡಿದೆ. ಈತ ಭರತ್ ಕುರ್ನೆ ಜತೆ ಸಂಪರ್ಕದಲ್ಲಿದ್ದ ಎಂಬ ಶಂಕೆಯಿದೆ. ಅಲ್ಲದೆ, ಗೌರಿ ಹತ್ಯೆಗೆ ಮಹಾರಾಷ್ಟ್ರದಿಂದಲೇ ಪಿಸ್ತೂಲ್ ತರಲಾಗಿತ್ತು ಎಂಬ ಮಾಹಿತಿಯಿದೆ. ಹೀಗಾಗಿ ವೈಭವ್ ಬಳಿ ಸಿಕ್ಕ ಪಿಸ್ತೂಲ್‌ಗಳ ಪರಿಶೀಲನೆ ನಡೆಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಹಲವರು ವಶಕ್ಕೆ: ಭರತ್ ಕುರ್ನೆ ಬಂಧನದ ಬಳಿಕ ಇತರೆ ಐದಾರುಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಪೈಕಿ ಪಡುಬಿದ್ರೆಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಇವರ ಪಾತ್ರ ಇಲ್ಲ ಎಂಬುದು ಖಚಿತವಾದ ಬಳಿಕ ಬಿಟ್ಟು ಕಳುಹಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.