ಕುರುಗೋಡು: ಕುರುಗೋಡು ಪಟ್ಟಣದಲ್ಲಿ ಕೋಳೂರು ಮತ್ತು ಕುರುಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕೇಂದ್ರ ಸರಕಾರದ ಇಡಿ ಇಲಾಖೆ ದುರುಪಯೋಗ ಖಂಡಿಸಿ ಮತ್ತು ರೋಹಿತ್ ಚಕ್ರತೀರ್ಥ ಪಠ್ಯ ಮರು ಪರಿಷ್ಕರಣಾ ಸಮಿತಿ ರದ್ದತಿಗೆ ಅಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರಾರಂಭದಲ್ಲಿ ಶಾಸಕರ ಗೃಹ ಕಚೇರಿಯಿಂದ ಬಸ್ ನಿಲ್ದಾಣದ ವರೆಗೆ ಬೈಕ್ ರ್ಯಲಿ ಮೂಲಕ ಬಂದು ಅಲ್ಲಿಂದ ಇಡಿ ವಿರುದ್ದ ಘೋಷಣೆ ಕೂಗುತ್ತಾ ಮುಖ್ಯ ವೃತ್ತಕ್ಕೆ ಸಾಗಿ ನಂತರ ತಾಲೂಕು ಕಚೇರಿಗೆ ಸಮಾವೇಶಗೊಂಡು ಕೆಲ ನಿಮಿಷಗಳ ಕಾಲ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಗಾಂಧಿ ಮನೆತನವನ್ನು ಗುರಿಯಾಗಿಸಿಕೊಂಡು ಇ.ಡಿ, ಐ.ಟಿ ಮುಂತಾದ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮೇಲೆ ಎಫ್‌ಐಆರ್ ದಾಖಲು ಮಾಡಿರುವುದು, ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ರಾಹುಲ್ ಗಾಂಧಿ ಅವರ ಪ್ರಭಾವ ದೇಶದಲ್ಲಿ ಹೆಚ್ಚಾಗುತ್ತಿರುವುದನ್ನು ಸಹಿಸಲಾರದೆ ಪ್ರಧಾನಿ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದೇಶದಲ್ಲಿ ವಿರೋಧ ಪಕ್ಷದಗಳ ಸಾಮರ್ಥ್ಯ ಕುಗ್ಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದೊಂದು ಭ್ರಷ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ದೇಶದ ರೈತರಿಗೆ ಅನುಕೂಲ ಇಲ್ಲದ ಕೃಷಿ ಕಾಯ್ದೆಗಳನ್ನು ಏಕಾ ಏಕಿ ಜಾರಿ ಮಾಡಿದರು.ದೇಶ ವ್ಯಾಪಿ ರೈತರು ಪ್ರತಿಭಟನೆ ಮಾಡಿದ ಮೇಲೆ ಕಾಯ್ದೆ ಗಳನ್ನು ಹಿಂಪಡೆದರು. ಇನ್ನೂ ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡುವುದಾಗಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದೆ ಇದೆಲ್ಲವದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇ.ಡಿ.ಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಇದೇ ವೇಳೆ ಆಕ್ರೋಶ ಹೊರಹಾಕಿದರು.
ಕೊನೆಯದಲ್ಲಿ ತಹಶೀಲ್ದಾರ್ ಕೆ. ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಗಿ ಮಲ್ಲಯ್ಯ, ಚಾನಾಳ್ ಚನ್ನಬಸವರಾಜ್, ಪುರಸಭೆ ಸದಸ್ಯ ಎನ್. ನಾಗರಾಜ್. ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖಂಡರಾದ ವೆಂಕಟೇಶ್ ಗೌಡ, ಜೋಗಿ ಸುಂಕಪ್ಪ, ಹಡ್ಲಿಗಿ ಕಾಳಪ್ಪ, ಬಾದನಹಟ್ಟಿ ಮಂಜು, ಗಂಗಣ್ಣ, ಕಗ್ಗಲ್ ಶಂಕ್ರಪ್ಪ, ಸೇರಿದಂತೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಮತ್ತು ಮುಖಂಡರು ಪಾಲ್ಗೊಂಡಿದ್ದರು.