Advertisement

ಕುಪ್ಪೆಟ್ಟಿ: ಬಿಎಸ್ಸೆನ್ನೆಲ್ ಸಿಬಂದಿಗೆ ದಿಗ್ಬಂಧನ

11:24 PM Aug 08, 2019 | Team Udayavani |

ಉಪ್ಪಿನಂಗಡಿ: ಬಿಎಸ್ಸೆನ್ನೆಲ್ನ ಅಸಮರ್ಪಕ ಸೇವೆಯಿಂದಾಗಿ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಸೌಲಭ್ಯ ತಟಸ್ಥವಾಗಿದೆ ಎಂದು ಕೋಪಗೊಂಡ ಗ್ರಾಹಕರೊಬ್ಬರು ಬಿಎಸ್ಸೆನ್ನೆಲ್ ಕಚೇರಿಗೆ ಚಿಲಕ ಹಾಕಿ ಸಿಬಂದಿಗೆ ದಿಗ್ಬಂಧನ ವಿಧಿಸಿದ ಘಟನೆ ಗುರುವಾರ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಎಂಬಲ್ಲಿ ನಡೆದಿದೆ.

Advertisement

ಸತತ ದೂರು ನೀಡಿದರೂ ದೂರವಾಣಿ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸದ ಬಿಎಸ್ಸೆನ್ನೆಲ್ ಸಿಬಂದಿ ವಿರುದ್ಧ ಕೆಂಡಾಮಂಡಲರಾದ ಹಲೇಜಿ ಮೂಲದ ಗ್ರಾಹಕರೊಬ್ಬರು ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಿಎಸ್ಸೆನ್ನೆಲ್ ಲೈನ್‌ಮ್ಯಾನ್‌ ಬೊಮ್ಮಣ್ಣ ಗೌಡ ಕಚೇರಿಯಲ್ಲಿದ್ದ ಸಂದರ್ಭದಲ್ಲಿ ಅವರನ್ನು ಕಚೇರಿಯೊಳಗಿಟ್ಟು, ಬಾಗಿಲಿಗೆ ಚಿಲಕ ಜಡಿದರು.

ಗ್ರಾಹಕರ ಈ ವರ್ತನೆಯಿಂದ ಕಂಗೆಟ್ಟ ಬಿಎಸ್ಸೆನ್ನೆಲ್ ಸಿಬಂದಿ ತನ್ನ ಮೇಲಧಿಕಾರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದರು. ಅಧಿಕಾರಿಗಳು ಚಿಲಕ ಹಾಕಿದ ಗ್ರಾಹಕನನ್ನು ಸಂಪರ್ಕಿಸಿ, ಚಿಲಕ ತೆಗೆದು ಸಿಬಂದಿಯನ್ನು ಬಿಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರು. ಬಳಿಕ ಆ ಗ್ರಾಹಕ ಸಿಬಂದಿಯನ್ನು ಮುಕ್ತಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next