Advertisement

Kuppepadav: ಅಶಕ್ತರ ನೆರವಿಗೆ ವೇಷ ಹಾಕಿದ ಯುವಕರು

02:45 PM Oct 07, 2024 | Team Udayavani |

ಕುಪ್ಪೆಪದವು: ನವರಾತ್ರಿ ಸಂದರ್ಭದಲ್ಲಿ ತಮ್ಮ ಸಂತೋಷಕ್ಕಾಗಿ ವೇಷ ಹಾಕುವವರ ನಡುವೆ ಕಷ್ಟ ದಲ್ಲಿರುವವರ ನೆರವಿಗಾಗಿ ವೇಷ ಹಾಕಿ ಕುಣಿಯು ವವರೂ ಸಾಕ ಷ್ಟಿದ್ದಾರೆ. ಕುಪ್ಪೆಪದವಿನ ರಾಮ್‌ ಸೇನಾ ವಾಯುಪುತ್ರ ಘಟಕವು ‘ಭವತಿ ಭಿಕ್ಷಾಂದೇಹಿ’ ಎಂಬ ಕಾರ್ಯ ಕ್ರಮ ರೂಪಿಸಿದ್ದು, ಅದರಲ್ಲಿ ಸಂಗ್ರಹವಾದ 1.3 ಲಕ್ಷ ರೂ.ಯನ್ನು ನಾಲ್ವರು ಅಶಕ್ತರ ಕುಟುಂಬಗಳಿಗೆ ನೀಡಲಿದೆ.

Advertisement

ರಾಮ್‌ ಸೇನಾ ವಾಯುಪುತ್ರ ತಂಡವು ನವರಾತ್ರಿಯ ಹಲವು ವೇಷಗಳನ್ನು ಧರಿಸಿ ಕುಪ್ಪೆಪದವಿನಿಂದ ಬಜಪೆವರೆಗೆ ಸುಮಾರು 25 ಕಿ.ಮೀ. ಕಾಲ್ನಡಿಗೆ ನಡೆಸಿದೆ. ಈ ವೇಳೆ ತಂಡವು ಅಂಗಡಿ, ಮನೆಗಳಲ್ಲಿ ವೇಷ-ಕುಣಿತ, ಹಾಸ್ಯ ಪ್ರದರ್ಶನ ನೀಡಿದೆ.

ತಂಡವು ಅ. 3ರಂದು ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 8.30ಕ್ಕೆ ಗೊಂಬೆ ಹಾಗೂ ವಿಶೇಷ ವೇಷ ಧರಿಸಿ ಹೊರಟದೆ. ಕುಪ್ಪೆಪದವು ಪೇಟೆ, ಎಡಪದವು ಪೇಟೆ, ಗಂಜಿಮಠ, ಕೈಕಂಬ ಪೇಟೆ, ಪೆರಾರ, ಸುಂಕದಕಟ್ಟೆ ಮೂಲಕ ಬಜಪೆ ಪೇಟೆಗೆ ಆಗಮಿಸಿದೆ. ಬಳಿಕ ಅಲ್ಲಿಂದ ಕೈಕಂಬ ಪೇಟೆಗೆ ಕಾಲ್ನಡಿಗೆಯಲ್ಲಿ ಸಾಗಿದೆ. ಒಟ್ಟು ಸುಮಾರು 25 ಕಿ.ಮೀ. ದೂರ ಕ್ರಮಿಸಿದೆ. ತಂಡದಲ್ಲಿ ಒಟ್ಟು 30 ಮಂದಿ ಯುವಕರಿದ್ದು, ಕೆಲವರು ವೇಷ ಹಾಕಿದರೆ ಕೆಲವರು ವೇಷದೊಂದಿಗೆ ಹೋಗಿ, ಅಂಗಡಿ -ಮನೆಗಳಿಂದ ಹಣ ಸಂಗ್ರಹ ನಡೆಸಿದೆ.

3ನೇ ವರ್ಷದ ಕಾರ್ಯಕ್ರಮ
ರಾಮ್‌ ಸೇನಾ ವಾಯುಪುತ್ರ ಘಟಕದ ಅಧ್ಯಕ್ಷ ಸಂದೇಶ್‌ ಮತ್ತು ಇತರರ ನೇತೃತ್ವದಲ್ಲಿ ನಡೆಯುತ್ತಿರುವ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮ ಈ ವರ್ಷ ಮೂರನೇಯದು. ಸದಸ್ಯರು ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಅವರ ಜತೆಗೆ ಒಂದು ಪಿಕಪ್‌ ವಾಹನವೂ ಇದ್ದು, ಅದರಲ್ಲಿರುವ ದಲ್ಲಿ ಧ್ವನಿವರ್ಧಕ ಬಳಸಿ ಉದ್ದೇಶವನ್ನು ತಿಳಿಸಿ ಹಣ ಸಂಗ್ರಹ ಮಾಡಲಾಗಿದೆ. ಒಂದೇ ದಿನದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಮೊತ್ತ ಸಂಗ್ರಹವಾಗಿದೆ ಎನ್ನಲಾಗಿದೆ.

Advertisement

ಮೊದಲ ವರ್ಷ 1 ಲಕ್ಷ ರೂ. ಸಂಗ್ರಹವಾಗಿದ್ದು, ಅದನ್ನು ಆರು ಮಂದಿ ಅಶಕ್ತರಿಗೆ ಹಂಚಲಾಗಿದೆ. ಕಳೆದ ಬಾರಿ 90 ಸಾವಿರ ರೂಪಾಯಿ ಸಂಗ್ರಹದ ಹಣ 5 ಮಂದಿಗೆ ನೀಡಲಾಗಿದೆ. ಈ ಬಾರಿ ಐವರಿಗೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next