Advertisement

ಕುಪ್ಪೇಲೂರ್‌ ಲಖನೌ ಪೊಲೀಸರ ವಶಕ್ಕೆ

11:01 AM Nov 10, 2019 | Suhan S |

ಹುಬ್ಬಳ್ಳಿ: ಉತ್ತರ ಪ್ರದೇಶದ ಬಿಜೆಪಿ ಮುಖಂಡ ಅಖೀಲೇಶ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಹಳೇಹುಬ್ಬಳ್ಳಿ ಅರವಿಂದ ನಗರ ನಿವಾಸಿ ಮಹಮ್ಮದಜಾಫರಸಾದಿಕ್‌ ಕುಪ್ಪೇಲೂರ್‌ನನ್ನು ಶನಿವಾರ ಲಖನೌ ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆ ಲಖನೌಗೆ ಕರೆದೊಯ್ದಿದ್ದಾರೆ.

Advertisement

ಅಖೀಲೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೆ. 21ರಂದು ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ದವರು ವಶಕ್ಕೆ ಪಡೆದಿದ್ದರು. ಈಗ ಲಖನೌ ಪೊಲೀಸರು ಇದೇ ಪ್ರಕರಣಕ್ಕೆ ಸಂಬಂಧಿಸಿ ಮಹಮ್ಮದಜಾಫರಸಾದಿಕ್‌ನನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ರೈಲ್ವೆ ವರ್ಕ್‌ಶಾಪ್‌ನ ಎಲೆಕ್ಟ್ರಿಕಲ್‌ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಮ್ಮದಜಾಫರಸಾದಿಕ್‌ನನ್ನು ಸೆ. 21ರಂದು ಐಎಸ್‌ಡಿಯವರು ವಶಕ್ಕೆ ಪಡೆದು, ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದವರಿಗೆ ಒಪ್ಪಿಸಿದ್ದರು.

ಅವರು ಸೆ. 22ರಂದು ವಿಚಾರಣೆ ಮಾಡಿ ಕಳುಹಿಸಿದ್ದರು. ಈ ವೇಳೆ ಇದೇ ಅಖೀಲೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಗ್ಪುರದಲ್ಲಿ ಬಂಧನವಾಗಿರುವ ಪ್ರಮುಖ ಆರೋಪಿ ಸಯ್ಯದ್‌ ಆಸಿಂ ಅಲಿ ಜೊತೆ ಮಹಮ್ಮದಜಾಫರಸಾದಿಕ್‌ ನಿಕಟ ಸಂಪರ್ಕ ಹೊಂದಿದ್ದ ಮಾಹಿತಿ ತನಿಖಾ ತಂಡಕ್ಕೆ ದೊರೆಕಿತ್ತು. ಅಲ್ಲದೆ ಈತ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದನೆಂಬ ಅನುಮಾನದಡಿ ಲಖನೌ ಪೊಲೀಸರು ಮಹಮ್ಮದಜಾಫರಸಾದಿಕ್‌ನನ್ನು ಶನಿವಾರ ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿ, ವೈದ್ಯಕೀಯ ತಪಾಸಣೆಗೊಳಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಲಖನೌಗೆ ಕರೆದೊಯ್ದಿದ್ದಾರೆಂದು ತಿಳಿದುಬಂದಿದೆ. ರೈಲ್ವೆ ಇಲಾಖೆಯು ಮಹಮ್ಮದಜಾಫರಸಾದಿಕ್‌ನನ್ನು ಸೆ. 23ರಂದು ಸೇವೆಯಿಂದ ಅಮಾನತುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next