Advertisement
ಕುಪ್ಪಳಿಯಲ್ಲಿನ ಕುವೆಂಪು ಮನೆಯ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು “ಬಾಣಂತಿ ಕೋಣೆ’ ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು, ಬಾಣಂತಿ ಮಂಚವೆಲ್ಲಾ ಕಂಡು ಇತ್ತೀಚೆಗಷ್ಟೇ ಬಾಣಂತನ ಮುಗಿಸಿಕೊಂಡವಳಿಗೆ ಎದೆತುಂಬಿ ಬಂತು.
ಕವಿ ಉಪಯೋಗಿಸಿದ ದಿವಾನದ ಮೇಲಿದ್ದ ಹಳೆಯ ಕಾಲದ ಟೆಲಿಫೋನ್ ನೋಡಿ ಉತ್ಸುಕಳಾಗಿ ಅದನ್ನೊಮ್ಮೆ ಮುಟ್ಟಿಯೇ ಬಿಟ್ಟೆ. ಯಾವುದನ್ನೂ ಯಾರೂ ಮುಟ್ಟಬಾರದೆಂಬ ಮೂಲ ನಿಯಮ ಆ ಹೊತ್ತಲ್ಲಿ ಅರಿವಿಗೈ ಬರಲಿಲ್ಲ. ಅನಂತರ ಒಳಕೋಣೆಯಲ್ಲಿ ಅಡಿಯಿಟ್ಟಾಗ ಸೆಳೆದದ್ದು “ಬಾಣಂತಿ ಕೋಣೆ’ ಎಂಬ ಹಣೆಪಟ್ಟಿ ಹೊತ್ತ ಕೋಣೆ. ಕಬ್ಬಿಣದ ತೊಟ್ಟಿಲು, ಮರದ ತೊಟ್ಟಿಲು, ಬಾಣಂತಿ ಮಂಚವೆಲ್ಲಾ ಕಂಡು ಇತ್ತೀಚೆಗಷ್ಟೇ ಬಾಣಂತನ ಮುಗಿಸಿಕೊಂಡವಳಿಗೆ ಎದೆತುಂಬಿ ಬಂತು. ಬಾಣಂತಿ ಕೋಣೆಯ ಪಕ್ಕದ ಕೋಣೆಯಲ್ಲಿ ಕವಿಯ ಕುಟುಂಬಸ್ಥರ ಅಪರೂಪದ ಸುಂದರ ಭಾವಚಿತ್ರಗಳೂ, ಅವರ “ಫ್ಯಾಮಿಲಿ ಟ್ರೀ’ ನಕ್ಷೆಯೂ ಇತ್ತು. ಅನಂತರದ ಅಡುಗೆ ಮನೆಯಲ್ಲಿ ಕೈಬಟ್ಟಲು, ಕಂಚಿನ ಲೋಟಗಳು, ಹಾಳೆಟೊಪ್ಪಿ, ಮಡಿಕೆಗಳು, ಚರಿಗೆ, ಕಡಗೋಲು ಮುಂತಾದ ಕವಿಮನೆಯ ಎಲ್ಲ ದಿನಬಳಕೆಯ ವಸ್ತುಗಳೇ ತುಂಬಿದ್ದವು. ಅಲ್ಲಿಂದ ಉಪ್ಪರಿಗೆ ಮೆಟ್ಟಿಲ ಹತ್ತಿ ಹೊರಟರೆ ಕಂಡದ್ದು ಸಣ್ಣ ಸಂಗ್ರಹಾಲಯ ಅವರು ಉಪಯೋಗಿಸಿದ ಪೆನ್ನು, ಕೋಟು, ಸ್ವೆಟರ್, ಚಪ್ಪಲಿ, ಕೂದಲುಗಳು, ಪಂಚೆ- ಹೀಗೆ ಕವಿ ಬಳಸಿದ್ದರೆನ್ನಲಾದ ವಸ್ತುಗಳ ಕಂಡೊಡನೆ ಪರವಶಳಾದೆ.ಅಲ್ಲಿಂದ ಉಪ್ಪರಿಗೆ ಮೆಟ್ಟಿಲೇರಿದರೆ, ಅಲ್ಲೊಂದು ಸಾರಸ್ವತ ಲೋಕವೇ ಧರೆಗಿಳಿದಂತಿತ್ತು. ಅವರು ಬರೆದ ಪುಸ್ತಕಗಳ ಭಂಡಾರವೇ ಅಲ್ಲಿತ್ತು. ಕವಿಯ ಮನೆಯನ್ನಯ ಸಂಪೂರ್ಣ ಕಣ್ತುಂಬಿ, ತವರನ್ನು ಬಿಟ್ಟು ಹೊರಟ ಮಗಳಂತೆ ಮತ್ತೆ ಮತ್ತೆ ಕವಿಮನೆಯನ್ನು ನೋಡುತ್ತಾ ಹಿಂತಿರುಗಿದೆ.
Related Articles
– ಮಂಗಳೂರುನಿಂದ ಶಿವಮೊಗ್ಗದಲ್ಲಿರುವ ಕವಿಶೈಲಕ್ಕೆ 3 ಗಂಟೆ 20 ನಿಮಿಷ ಇದೆ.143ಕಿ.ಮೀ .
-ಮಂಗಳೂರುನಿಂದ ತೆರಳಲು ಒಂದೇ ಮಾರ್ಗವಿರುವುದು. -ಮಂಗಳೂರು ನಿಂದ ಉಡುಪಿ- ಆಗುಂಬೆ-ತೀರ್ಥಹಳ್ಳಿ ಅಲ್ಲಿದ್ದ ಕುಪ್ಪಳಿಗೆ ತೆರಳಬೇಕು. ಸಾಕಾಷ್ಟು ಬಸ್ ವ್ಯವಸ್ಥೆ ಇದೆ.
Advertisement
ನೀವು ಇತ್ತೀಚೆಗೆ ಸ್ನೇಹಿತರು, ಬಂಧುಗಳೊಂದಿಗೆ ತೆರಳಿರುವ ಪ್ರವಾಸಿತಾಣಗಳಲ್ಲಿ ಕಂಡು ಬಂದ ಅದ್ಭುತ ವಿಚಾರಗಳ ಜತೆಗೆ ಅಲ್ಲಿ ನಿಮಗೇನು ಖುಷಿ ಕೊಟ್ಟಿತು ಎಂಬುದನ್ನು ಸೇರಿಸಿ ಇಲ್ಲಿ ನಿಮ್ಮ ಪ್ರವಾಸ ಕಥನಗಳನ್ನು ಬರೆಯಬಹುದು. ನಿಮ್ಮ ಅನುಭವ ಮತ್ತು ನೀವು ದಾಖಲಿಸಿದ ಮಾಹಿತಿಯೊಂದಿಗೆ ಒಳ್ಳೆಯ ಫೋಟೊ ಕೊಡಿ. ಪ್ರಕಟಿಸುತ್ತೇವೆ. ನಮ್ಮಇ-ಮೇಲ್ ವಿಳಾಸ:mlr.sudina@ udayavani.com ಶುಭಶ್ರೀ ಭಟ್ಟ