Advertisement

ಕುವೆಂಪು ಜನ್ಮದಿನಕ್ಕೆ ವಿಶೇಷ ಗೂಗಲ್‌ ಡೂಡಲ್‌ 

09:13 AM Dec 29, 2017 | Team Udayavani |

ಬೆಂಗಳೂರು : ಇಂದು ಡಿಸೆಂಬರ್‌ 29  ರಾಷ್ಟ್ರಕವಿ  ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113 ನೇ ಜನ್ಮದಿನ. ವಿಶೇಷ ಸಂದರ್ಭದಲ್ಲಿ ವಿಶ್ವಮಾನವ ಸಂದೇಶ ಸಾರಿದ ಮಹಾನ್‌ ಕವಿಗೆ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ. 

Advertisement

ಕುವೆಂಪು ಅವರು ಮಲೆನಾಡಿನ ಮಡಿಲಲ್ಲಿ ಹಚ್ಚಹಸಿರಿನ ಪರಿಸರದಲ್ಲಿ ಬಂಡೆಯೊಂದರ ಮೇಲೆ ಕುಳಿತು ಸಾಹಿತ್ಯ ಲೋಕದಲ್ಲಿ ಮಗ್ನರಾಗಿರುವಂತಿರುವ ಅತ್ಯಾಕರ್ಷಕ ಚಿತ್ರದ ಮೂಲಕ ಕನ್ನಡದಲ್ಲೇ ಗೂಗಲ್‌ ಎಂದು ಬರೆದಿರುವುದು ವಿಶೇಷ. ಕುವೆಂಪು ಅವರ ನೆಚ್ಚಿನ ಕಾಜಾಣಾ ಹಕ್ಕಿಯನ್ನೂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. 

ಇಂದು ನಾಡಿನಾದ್ಯಂತ ಕುವೆಂಪು ಅವರ ಸ್ಮರಣೆ ನಡೆಸಲಾಗುತ್ತಿದ್ದು, ಸಾಹಿತ್ಯಾಸಕ್ತರು ವಿಶೇಷ ಕಾರ್ಯಕ್ರಮಗಳನ್ನು ಪ್ರತೀ ವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದಾರೆ. 

ರಾಮಾಯಣ ದರ್ಶನಂ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದ ಕುವೆಂಪು ಅವರು  1994  ನವೆಂಬರ್‌ 11 ರಂದು ವಿಧಿವಶರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next