Advertisement

ಕುಂತಿ ದ ಸೇವಿಯರ್‌ ಆಫ್‌ದಿ ಡಾರ್ಕ್‌ ಏಜ್‌ ಕೃತಿ ಬಿಡುಗಡೆ

07:43 PM May 21, 2019 | sudhir |

ಕುಂಬಳೆ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ತಲ್ಲೀನರಾಗಿರುವ ಮಧ್ಯೆ ಯೂ ಮೊಬೈಲ್‌ಗೆ ಶರಣಾಗದೆ ಉತ್ತಮ ಚಿಂತನೆಯೊಂದಿಗೆ ಹದಿ ನಾಲ್ಕರ ಹರೆಯದ ಪ್ರತಿಭಾವಂತ ಬಾಲಕಿ ಸಿಂಚನಾ ಸಿ.ಕಾಮತ್‌ ಕುಂತಿ ಎಂಬ ಕೃತಿ ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಕರ್ನಾಟಕ ಬ್ಯಾಂಕಿನ ನಿವೃತ್ತ ಅಧಿಕಾರಿ ಉಪೇಂದ್ರ ಪ್ರಭು ಹೇಳಿದರು.

Advertisement

ಬೆಂಗಳೂರಿನಲ್ಲಿ ವಾಸವಾಗಿರುವ ಚೇವಾರು ನಿವಾಸಿ ಸಿಂಚನಾಸಿ.ಕಾಮತ್‌ ಬರೆದ ಕುಂತಿ ದ ಸೇವಿಯರ್‌ ಆಫ್‌ದಿ ಡಾರ್ಕ್‌ ಏಜ್‌ ಆಂಗ್ಲ ಕೃತಿಯ ಪ್ರಥಮ ಭಾಗದ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು ಬೆಳೆಯ ಸಿರಿ ಮೊಳಕೆಯಲ್ಲೇ ಎಂಬಂತೆ ಸಾಹಿತ್ಯ, ವಾಚನ,ಚಿತ್ರಕಲೆ,ಯಕ್ಷಗಾನ ನೃತ್ಯ ಮುಂತಾದ ಚಟುವಟಿಕೆಗಳಲ್ಲಿ ಎಳವೆ ಯಲ್ಲೇ ನಿರತರಾಗಿರುವ ಬಾಲಕಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಹಿಂದೂ ಯುವಸೇನೆಯ ಅಧ್ಯಕ್ಷ ಶಶಿಕಾಂತ್‌ ನಾಗ್ವೇಕರ್‌, ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್‌ ಕುಸುಮಾ, ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ,ಚೇವಾರು ಚಿದಾನಂದ ಕಾಮತ್‌ ಮತ್ತು ಡಾ|ಶ್ವೇತಾ ಸಿ ಕಾಮತ್‌ ಉಪಸ್ಥಿತರಿದ್ದರು.

ಸಿಂಚನಾ ಮಾತನಾಡಿ ತನ್ನ ಚೊಚ್ಚಲ ಕೃತಿ ರಚನೆಗೆ ಬೆಂಬಲಿಸಿದ ಮಾತಾಪಿತರನ್ನು, ವಿದ್ಯಾಲಯದ ಗುರುವರ್ಯರನ್ನು , ವಿದ್ಯಾರ್ಥಿ ಮಿತ್ರರನ್ನು ಮತ್ತು ಪುಸ್ತಕ ಪ್ರಕಾಶಕರನ್ನು ಸಮಾರಂಭದಲ್ಲಿ ಸ್ಮರಿಸಿದರು.ಮುಂದಿನ ದಿನಗಳಲ್ಲಿ ಕುಂತಿ ಕೃತಿಯ ದ್ವಿತೀಯ ಮತ್ತು ತೃತೀಯ ಭಾಗಗಳನ್ನು ಬರೆಯುವುದಾಗಿ ಹೇಳಿದರು. ಪ್ರಿತೇಶ್‌ ಅವಧಾನಿ, ಸಾತ್ವಿಕ್‌ ಸಿ.ಕಾಮತ್‌ ಉಪಸ್ಥಿತರಿದ್ದರು.ರೇಷ್ಮಾ ಶಿಂದೆ ನಿರೂಪಿಸಿ , ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next