Advertisement

ಕುಂಟಾರು ಜಾತ್ರೆ ಸಮಾರೋಪ; ಯಕ್ಷಗಾನ, ಸಮ್ಮಾನ 

04:35 PM Apr 02, 2017 | Team Udayavani |

ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಮಹೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಕಾರ್ಯಕ್ರಮದ ಅಂಗವಾಗಿ ಗಣಪತಿಹೋಮ, ಭಜನೆ, ಕೃಷ್ಣ ಕಿಶೋರ ಪೆರ್ಮಖ ಇವರಿಂದ ಶಾಸ್ತ್ರೀಯ ಸಂಗೀತ, 6.30ರಿಂದ ಶ್ರೀ ಸಂಗೀತ ಕಲಾ ಶಾಲೆ ಕುಂಟಾರು ಇವರಿಂದ ಗಾನ ವೈವಿಧ್ಯ, ಶ್ರೀ ದೇವರ ಭೂತಬಲಿ ಉತ್ಸವ, ಕಟ್ಟೆ ಪೂಜೆ, ಸಿಡಿಮದ್ದು ಪ್ರದರ್ಶನ, ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಕುಂಟಾರು ಶ್ರೀ ಶಾರದಾ ಸಂಗೀತ ಕಲಾ ಶಾಲೆಯವರಿಂದ ಭಜನಾಮೃತ, ಸ್ವಾಮಿ ವಿವೇಕಾನಂದ ನಾಟ್ಯ ನಿಲಯ ಕುಂಟಾರು ಇದರ ದೀಪಾ ಅವರ ಶಿಷ್ಯರಿಂದ ನƒತ್ಯ ವೈವಿಧ್ಯ, ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾ ಸಂಘದವರಿಂದ ಯಕ್ಷಗಾನ ತಾಳ ಮದ್ದಳೆ ವಾಲಿ ಮೋಕ್ಷ ನಡೆಯಿತು. 

ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕೊಲ್ಲಂಗಾನ ಇವರಿಂದ ಯಕ್ಷಗಾನ ಬಯಲಾಟ ಶ್ರೀ ಕಟೀಲು ಕ್ಷೇತ್ರ ಮಹಾತೆ¾, ಕುಂಟಾರು ಚಾಮುಂಡಿ ದೈವದ  ನೇಮ, ಪಡೈ ಚಾಮುಂಡಿ ದೈವದ ನೇಮ, ರಂಗಪೂಜೆ  ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್‌ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಆಶೀರ್ವಚನ ನೀಡಿದರು. ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ| ಕಮಲಾಕ್ಷ, ಹಿರಿಯ ಅಭಿವೃದ್ಧಿ ಅಧಿಕಾರಿ ಎಲ್‌ಐಸಿ ವಿನೀತ್‌ ಕುಮಾರ್‌ ಚಿಕ್ಕಮಗಳೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಭಾರದ್ವಾಜ್‌, ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ನಾರಾಯಣ ಮಾಟೆ, ಏಷ್ಯನ್‌ ವನಿತಾ ತ್ರೋಬಾಲ್‌ ಪ್ರಶಸ್ತಿ ಪಡೆದ ಭಾರತ ತಂಡದ ಸದಸ್ಯೆ ಯಶ್ಮಿತಾ ಮಿತ್ತಜಾಲು ಬೆಳ್ಳೂರು ಅವರನ್ನು ಸಮ್ಮಾನಿಸಲಾಯಿತು.

ನಾರಾಯಣ ಪ್ರಸಾದ್‌, ಮಾಧವ ರಾವ್‌ ಮತ್ತು ಪೂರ್ಣಶ್ರೀ ಸಮ್ಮಾನ ಪತ್ರ ವಾಚಿಸಿದರು. ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾದ ವಿ.ಪ್ರಣವ್‌, ಗುರುಕಿರಣ್‌, ಶ್ಯಾಮಿನಿ ಯು.ಕೆ., ದೀûಾ ಕೆ. ಅವರನ್ನು ಅಭಿನಂದಿಸಲಾಯಿತು. ಕುಂಟಾರು ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಸುಪ್ರೀತಾ ಪಿ.ಎಸ್‌. ಅವರಿಗೆ ದಿ| ಯು.ಪಿ. ಕುಣಿಕುಳ್ಳಾಯ ಅವರ ಸ್ಮರಣಾರ್ಥವಾಗಿ ಸುಶೀಲಮ್ಮ ಮತ್ತು ವಿನೀತ್‌ ಕುಮಾರ್‌ ಚಿಕ್ಕಮಗಳೂರು ಅಭಿನಂದಿಸಿದರು.
ಬ್ರಹ್ಮಶ್ರೀ ರವೀಶ ತಂತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಕಾಶ್‌ ಮಾಸ್ತರ್‌ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಭಟ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next