Advertisement
ಅಲ್ಲದೆ ಕಾರ್ಕಳದಿಂದ ಉಡುಪಿ ಸಂಪರ್ಕ ರಸ್ತೆ ಇದಾಗಿದ್ದು ಹೆಚ್ಚಿನ ವಾಹನಗಳು ಈ ಮಾರ್ಗವಾಗಿಯೇ ಸಂಚರಿಸುತ್ತಿವೆ. ಹಾಗೂ ಸಾರ್ವಜನಿಕ ರಸ್ತೆ ಬದಿ ಸಂಚರಿಸಲು ಭಯಪಡುವಂತಾಗಿದೆ. ಒಣಗಿದ ಮರದ ಕೊಂಬೆಗಳು ರಭಸವಾಗಿ ಬೀಸುವ ಗಾಳಿಗೆ ಮರಗಳು ವಿದ್ಯುತ್ ತಂತಿಗಳ ಮೇಲೆಯೇ ಮುರಿದು ಬೀಳುವ ಸಾಧ್ಯತೆ ಇದ್ದು ವಿದ್ಯುತ್ ವ್ಯತ್ಯಯ ಸಂಭವಿಸಬಹುದಾಗಿದೆ.
ಕುಂಟಾಡಿಯ ಕೈಕಂಬ ಬಳಿಯಿಂದ ಕುಂಟಾಡಿ ದೇವಸ್ಥಾನದವರೆಗೆ ರಸ್ತೆ ಬದಿ ಅಕೇಶಿಯಾ ಮರಗಳು ವಾಲಿಕೊಂಡಿದ್ದು ವಿದ್ಯುತ್ ತಂತಿಗಳ ಮೇಲಿನಿಂದಲೇ ಹಾದು ಹೋಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ತೆರವು ಕಾರ್ಯ ಕೈಗೊಳ್ಳದಿದ್ದಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಬಹುದಾಗಿದೆ.