Advertisement

ಕುಂಟಕೋಣ ಮೂಕಜಾಣ ನಾಟಕ ಚಿತ್ರವಾಯ್ತು

11:49 AM Oct 01, 2018 | |

ಕನ್ನಡದಲ್ಲಿ ಹಲವು ಕಥೆಗಳು, ನಾಟಕಗಳು ಚಿತ್ರವಾಗಿವೆ. ಆ ಸಾಲಿಗೆ ಈಗ “ಕುಂಟ ಕೋಣ ಮೂಕ ಜಾಣ’ ನಾಟಕ ಹೊಸ ಸೇರ್ಪಡೆ. ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತ ರಾಜು ಜೇವರ್ಗಿ ಅವರ “ಕುಂಟ ಕೋಣ ಮೂಕ ಜಾಣ’ ಎಂಬ ಹಾಸ್ಯ ನಾಟಕ ಇದೀಗ ಚಿತ್ರವಾಗಿದೆ. ಅಷ್ಟೇ ಅಲ್ಲ, ಚಿತ್ರೀಕರಣ ಪೂರ್ಣಗೊಂಡು ಡಿಸೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

Advertisement

ಅಂದಹಾಗೆ, ಆ ಚಿತ್ರಕ್ಕೆ “ಕುರುಡ ಮೂಗ ಕುಂಟ’ ಎಂದು ಹೆಸರಿಡಲಾಗಿದೆ. “ಕುಂಟ ಕೋಣ ಮೂಕ ಜಾಣ’ ಹಾಸ್ಯ ನಾಟಕ ಮೈಸೂರು, ಹುಬ್ಬಳ್ಳಿ, ದಾರವಾಡ, ಶಿವಮೊಗ್ಗ, ದಾವಣಗೆರೆ, ಗುಲ್ಬರ್ಗ, ಹಾವೇರಿ, ಶಿರಸಿ, ಕಾರವಾರ ಸೇರಿದಂತೆ ಹಲವು ನಗರಗಳಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಜನಪ್ರಿಯ ನಾಟಕವನ್ನು ವೈಭವ್‌ ಬಸವರಾಜ್‌ ಸಿನಿಮಾ ಮಾಡುವ ಮನಸ್ಸು ಮಾಡಿ ನಿರ್ಮಾಣ ಮಾಡಿದ್ದಾರೆ. ಇವರಿಗೆ ಬಳಿಗಾರ್‌ ಹಾಗು ದಯಾನಂದ್‌ ರಾಯ್ಕರ್‌ ಸಾಥ್‌ ನೀಡಿರುವುದು ವಿಶೇಷ.

ರಾಜು ಜೇವರ್ಗಿ ಮತ್ತು ಬಸವರಾಜ್‌ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರಂಗಭೂಮಿ ಕಲಾವಿದರಾದ ದಯಾನಂದ್‌, ಹರೀಶ್‌, ಮಾರುತಿ, ಪ್ರಿಯಾ, ಶ್ವೇತಾ ಬಿಳಗಿ, ರಾಕ್‌ಲ್‌ನ್‌ ಸುಧಾಕರ್‌, ಸತ್ಯಜಿತ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. “ಕುರುಡ  ಮೂಗ ಕುಂಟ’ ಎಂಬ ವಿಕಲಚೇತನರ ನಡುವೆ ಸಿಕ್ಕ ರಂಗಿಯ ಪಾಡೇನು ಎಂಬುದು ಚಿತ್ರ ಕಥೆ. ಪಕ್ಕಾ ಹಾಸ್ಯಮಯ ಚಿತ್ರವಾಗಿದ್ದು, ಆದಷ್ಟು ಬೇಗ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ತಯಾರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next