ಕಾಪು : ರಬ್ಬರ್ ತೋಟಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಬೆಳೆ ನಾಶ ಸಂಭವಿಸಿದ ಘಟನೆ ರವಿವಾರ ಮಧ್ಯಾಹ್ನ ಪಣಿಯೂರು ಸಮೀಪದ ಕುಂಜೂರಿನಲ್ಲಿ ನಡೆದಿದೆ.
ಕುಂಜೂರು ವ್ಯಾಸರಾಯರ ಮನೆ ಶ್ರೀವತ್ಸ ರಾವ್ ಅವರಿಗೆ ಸೇರಿದ ಸುಮಾರು 7 ಎಕರೆ ಜಮೀನಿನಲ್ಲಿ ಬೆಳೆಸಲಾಗಿದ್ದ 700ಕ್ಕೂ ಅಧಿಕ ರಬ್ಬರ್ ಗಿಡಗಳು ಬೆಂಕಿಯಲ್ಲಿ ಬೆಂದು ಹೋಗಿವೆ.
7 ವರ್ಷ ಪ್ರಾಯದ ರಬ್ಬರ್ ಗಿಡಗಳ ಮೌಲ್ಯ ಲಕ್ಷಾಂತರ ರೂ. ಗಳಾಗಿರಬೇಕೆಂದು ಸಂಶಯಿಸಲಾಗಿದ್ದು, ಉಡುಪಿ ಅಗ್ನಿ ಶಾಮಕದಳ ಮತ್ತು ಅದಾನಿ – ಯುಪಿಸಿಎಲ…ನ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿವೆ.
ಸ್ಪಂದಿಸಿದ ಸ್ಥಳೀಯರು ರಬ್ಬರ್ ತೋಟಕ್ಕೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಲೇ ಸ್ಥಳಕ್ಕ ಧಾವಿಸಿದ ಸ್ಥಳೀಯರು ಪುರುಷರು, ಮಕ್ಕಳು, ಮಹಿಳೆಯರೆನ್ನದೇ ಬೆಂಕಿ ನಂದಿಸಲು ಶ್ರಮಿಸಿದರು. ಸ್ಥಳೀಯ ಬಾವಿ, ಬೋರ್‌ವೆಲ… ಗಳಿಂದ ಪೈಪ್ ಮತ್ತು ಕೊಡಪಾನಗಳ ಮೂಲಕ ನೀರು ತಂದು ಸುರಿದು ಬೆಂಕಿ ಇತರ ಪ್ರದೇಶಗಳಿಗೆ ವ್ಯಾಪಿಸದಂತೆ ನೋಡಿಕೊಂಡರು.
ಎಲ್ಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯಶವಂತ್ ಶೆಟ್ಟಿ , ಗ್ರಾ.ಪಂ. ಸದಸ್ಯ ಸತೀಶ ಶೆಟ್ಟಿ ಗುಡ್ಡೆಚ್ಚಿ , ದಿನೇಶ್ ಕುಮಾರ್, ಭಾರ್ಗವ ಎಲ….ಕೆ., ಸಾಧು ಶೆಟ್ಟಿ ತೆಂಕರಲಾಕ್ಯಾರು, ಸುಂದರ್ ಶೆಟ್ಟಿ, ಜಯಕರ ಮೂಲ್ಯ ಸೇರಿದಂತೆ ಕುಂಜೂರು ದುರ್ಗಾ ಮಿತ್ರವೃಂದ, ಬಯಲು ಫ್ರೆಂಡ್ಸ್ ಮತ್ತು ಖಾನ ಶೈನಿಂಗ್ ಸ್ಟಾರ್ಸ್ ಸದಸ್ಯರು ಬೆಂಕಿ ನಂದಿಸಲು ಸಹಕರಿಸಿದರು.