Advertisement
ಮಾರ್ಕೋನಹಳ್ಳಿ ಜಲಾಶಯದ ಸಮೀಪ ಇರುವ ಪ್ರವಾಸಿ ಮಂದಿರದಲ್ಲಿ ಗುರುವಾರ ತುಮಕೂರು ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಪ್ರಾರಂಭವಾಗುತ್ತಿದಂತೆ ಶಾಸಕ ಡಾ.ರಂಗನಾಥ್ ಮಾತನಾಡಿ ರೈತರಿಗೆ ನೀರು ಹರಿಸಲು ಬದ್ದವಾಗಿದ್ದು ನೀರಿನ ಲಭ್ಯತೆ ಹಾಗೂ ಯಾವ ಬೆಳೆಯನ್ನು ಬೆಳೆಯಲು ಅವಕಾಶ ಇದೆ ಎಂದು ಅಧಿಕಾರಿಗಳಿಂದ ರೈತರಿಗೆ ಮಾಹಿತಿ ನೀಡಲು ಸೂಚಿಸಿದರು.
88 ಅಡಿ ನೀರು ಸಂಗ್ರಹ ಸಾಮರ್ಥ್ಯ ಇದೆ. ಆದರೆ ಈಗ 87.20 ಅಡಿ ನೀರು ಲಭ್ಯವಿದ್ದು. ಕುಡಿಯುವ ನೀರಿಗೆ
100 ಎಂಟಿಎಫ್‌ಸಿ ನೀರು ಮೀಸಲಿಡಲಾಗಿದೆ. ಉಳಿಕೆ 1.8 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟು12 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕ ನೀರು ಹರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಕೃಷಿ ಸಹಾಯಕ ನಿರ್ದೇಶಕ ರಂಗನಾಥ್ ಮಾತನಾಡಿ ರಾಗಿ ಬೆಳೆ ಬೆಳೆಯಲು ನೀರು ಹರಿಸಿಕೊಳ್ಳಬಹುದಾಗಿದೆ. ಅಲ್ಪಾವಧಿ ರಾಗಿ ಹಿಂಡಾಫ್ ತಳಿಯ ರಾಗಿಯನ್ನು ಬೆಳೆದರೇ ಮೂರು ತಿಂಗಳಲ್ಲಿ ಬೆಳೆಯ ಬೆಳೆಯಬಹುದೆಂದು ರೈತರಿಗೆ ಮಾಹಿತಿ ನೀಡಿದರು. ರೈತರು ರಾಗಿ ಬೆಳೆಯಲು ಒಪ್ಪಿಕೊಂಡು.
Related Articles
Advertisement
ಕೊನೆಯ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ನೀರು ಹರಿಸಲು ಕ್ರಮಕೈಗೊಳ್ಳಬೇಕು ಕೊನೆಯ ಹಂತಕ್ಕೆ ನೀರು ತಲುಪಿದ ದಿನದಿಂದ ದಿನಗಳನ್ನು ಲೆಕ್ಕ ಹಾಕಿಕೊಂಡು ನೀರು ಹರಿಸುವಂತೆ ಶಾಸಕ ಡಾ.ರಂಗನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಕುಣಿಗಲ್-ನಾಗಮಂಗಲ ರೈತರ ನಡುವೆ ಜಟಾಪಟಿನಾಗಮಂಗಲ ತಾಲೂಕಿನ ರೈತನೊಬ್ಬ ಸಭೆಯಲ್ಲಿ ನಾವು ಕೊನೆ ಭಾಗದ ರೈತರು ಎರಡು ಕೆರೆಗಳು ತುಂಬ ನಂತರ ನಮಗೆ ನೀರು ಹರಿಯಬೇಕು ನಮಗೆ ಅನ್ಯಾಯ ಮಾಡದಂತೆ ನೀರು ಹರಿಸಿ ಎಂದು ಕೇಳಿಕೊಂಡಾಗ ಶಾಸಕ ಡಾ.ರಂಗನಾಥ್ ಅವರು ಯಾವ ಊರು ಎಂದು ಕೇಳಿದಾಗ ನಾಗಮಂಗಲ ತಾಲೂಕು ಎಂದಾಗ ಸುಮ್ಮನೆ ಕುತುಕೊಳ್ಳಯ್ಯ ಮೊದಲು ಕುಣಿಗಲ್ ರೈತರು ನನ್ನಗೆ ಮುಖ್ಯ, ನಂತರ ನಾಗಮಂಗಲ ತಾಲೂಕಿಗೆ ನೀರು ಹರಿಸಲಾಗುವುದು ಕುಣಿಗಲ್ ನಾಗಮಂಗಲ ಎಂಬ ತಾರತಮ್ಯ ನಮಗೆ ಇಲ್ಲ ಎಲ್ಲಾ ರೈತರು ನಮಗೆ ಒಂದೇ ಹಾಗಾಗಿ ನಿಮಗೆ ನೀರು ಬಿಡುವ ಸಂಬಂಧ ತಿರ್ಮಾನ ಮಾಡಿಕೋಣ ಎಂದು ಹೇಳಿದರು. ಕುಣಿಗಲ್ ತಾಲೂಕು ನಂತರ ನೀವು ಎಂದಾಗ ನಾಗಮಂಗಲ ತಾಲೂಕಿನ ರೈತರು ಹಾಗೂ ಕುಣಿಗಲ್ ರೈತರ ನಡುವೆ ಮಾತಿನಚಕಮಕಿ ನಡೆಯಿತು. ಪೋಲಿಸರು ಮಧ್ಯಪ್ರವೇಶ ಮಾಡಿ ರೈತರನ್ನು ಸಮಾಧಾನ ಪಡಿಸಿ ಸಭೆ ನಡೆಯಲು ಅನುವು ಮಾಡಿಕೊಟ್ಟರು. ಗಟ್ಟಿ ನಿರ್ಧಾರ ಮಾಡಿದ್ದೇನೆ
ಹವಾಮಾನ ವರದಿಯ ಪ್ರಕಾರ ಮುಂದಿನ ವರ್ಷ ನೀರುನ ಅಭಾವ ಸೃಷ್ಠಿಯಾಗಲಿ ಎಂದು ಹೇಳಲಾಗುತ್ತಿದೆ. ಜಾನುವಾರಗಳಿಗೆ ಕುಡಿಯುವ ನೀರು ಉಳಿಸಿಕೊಂಡು ಉಳಿಕೆ ನೀರಿನಲ್ಲಿ ರಾಗಿ ಬೆಳೆಗೆ ನೀರು ಹರಿಸಿ ನಮ್ಮ ರೈತರ ಋಣ ತೀರಸುವ ಕೆಲಸ ಮಾಡಬೇಕೆಂದು ಗಟ್ಟಿ ನಿರ್ದಾರ ಮಾಡಿದ್ದೇನೆ. ರೈತರು ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಕೆ ಮಾಡಿಕೊಂಡು ರಾಗಿ ಬೆಳೆ ಬೆಳೆಯಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ, ಡಿವೈಎಸ್‌ಪಿ ಲಕ್ಷ್ಮೀಕಾಂತ್, ತಹಸೀಲ್ದಾರ್ ಎಸ್. ವಿಶ್ವನಾಥ್, ಹೇಮಾವತಿ ನಾಲಾ ವಲಯದ ಇಇ ಶ್ರೀನಿವಾಸ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭಾಗ್ಯಲಕ್ಷ್ಮಿ ಮುಖಂಡರಾದ ಬೆನವಾರ ಶೇಷಣ್ಣ, ನಂಜೇಗೌಡ, ಎ.ಸಿ.ಹರೀಶ್, ಕೆ.ಶ್ರೀನಿವಾಸ್ ಇತರರು ಇದ್ದರು.