Advertisement
ಸೈನಿಕರಿಗೆ ವ್ಯವಸಾಯ ಉದ್ದೇಶಗಳಿಗಾಗಿ ಭೂ ಮಂಜೂರಾತಿಯ ನಿಯಮಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ಈವರೆಗೂ ಅರ್ಜಿ ವಿಲೇವರಿ ಮಾಡದೇ ಸಬೂಬು ಹೇಳುತ್ತಿದೆ ಎಂದು ಆರೋಪಿಸಿ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಎನ್.ಕೆ.ಶಿವಣ್ಣ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಆಡಳಿತ ವಿರುದ್ದ ದಿಕ್ಕಾರ ಕೂಗಿದರು. ಪ್ರತಿಭಟನೆಗೆ ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್.ಬಲರಾಮ್, ಮುಖಂಡ ಹೆಚ್.ಡಿ.ರಾಜೇಶ್‌ಗೌಡ ಸಾಥ್ ನೀಡಿದರು.
Related Articles
Advertisement
ಸಬೂಬು : ತಾಲೂಕು ಭೂ ಮಂಜೂರಾತಿ ವಿಭಾಗದ ದಾಖಲೆಯಂತೆ ಜಮೀನಿಗಾಗಿ ಸುಮಾರು 90 ಸೈನಿಕ ಹಾಗೂ ಮಾಜಿ ಸೈನಿಕರು ಅರ್ಜಿ ಸಲ್ಲಿಸಿದ್ದಾರೆ, ಈ ಪೈಕಿ ಕೇವಲ 10 ಜನರಿಗೆ ಮಾತ್ರ ಜಮೀನು ಮಂಜೂರಾಗಿದೆ, ಉಳಿದ ಫಲಾನುಭವಿಗಳ ದಾಖಲೆಗಳು ಸಮರ್ಪಕವಾಗಿ ಇಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ, ತಮ್ಮ ಜೀವನದ ಅಂಗು ತೊರೆದು ದೇಶದ ರಕ್ಷಣೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರಿಗೆ ಸತಾಯಿಸುವ ಅಧಿಕಾರಿಗಳು ಸಾಮಾನ್ಯ ಜನರಿ ಗತಿಏನು ಎಂದು ಪ್ರಶ್ನಿಸಿದರು.
ಆಸ್ತಿಗಾಗಿ ನಖಲಿ ದಾಖಲೆ ಸೃಷ್ಠಿ : ಮಾಜಿ ಸೈನಿಕ ಪತ್ನಿ ಲೋಲಾಕ್ಷಮ್ಮ ಮಾತನಾಡಿ ತಾಲೂಕಿನ ಕಸಬಾ ಹೋಬಳಿ ಕೂತಾರಹಳ್ಳಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ದಾನವಾಗಿ ಬಂದಿರುವ 28 ಗುಂಟೆ ಜಮೀನನ್ನು ಶಿವರಾಮ ಎಂಬುವವನು ನಖಲಿ ದಾಖಲೆಗಳನ್ನು ಸೃಷ್ಠಿಸಿ, ಪೌತಿವಾರಸುದಾರರ ಮೇರೆಗೆ ಇನ್ನು ಬಧುಕಿರುವ ನನ್ನನು ಮೃತಪಟ್ಟಿದ್ದಾಳೆ ಎಂದು ನಖಲಿ ದಾಖಲೆ ಸೃಷ್ಠಿಸಿ ಆಸ್ತೆಯನ್ನೆಲ್ಲಾ ಶಿವರಾಮನ ಹೆಸರಿಗೆ ಮಾಡಿಕೊಂಡಿದ್ದಾನೆ, ಹೀಗಾಗಿ ನ್ಯಾಯ ದೊರಕಿಸಿಕೊಡುವಂತೆ ತಹಶೀಲ್ದಾರ್ ಅವರನ್ನು ಆಗ್ರಪಡಿಸಿದರು, ತಹಶೀಲ್ದಾರ್ ಮಹಬಲೇಶ್ವರ ಮಾತನಾಡಿ ಸರ್ಕಾರ ನಿಯಮದ ಪ್ರಕಾರ ಸರ್ಕಾರಿ ಖಾಲಿ ಜಮೀನನ್ನು ಗುರುತಿಸಿ ಶೇ 10 ಸೈನಿಕರಿಗೆ ಮೀಸಲಿಟ್ಟು ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು, ಕೆಲವೋಂದು ದಾಖಲೆಗಳು ನನ್ನ ಅವಧಿಯಲ್ಲಿ ಆಗಿರುವುದಲ್ಲ, ಹಿಂದೆ ಏನಾದರೂ ತಪ್ಪಾಗಿದ್ದರೇ ಅದನ್ನು ಸರಿಪಡಿಸಿ ನ್ಯಾಯದೊರಕಿಸಿಕೊಡುವುದ್ದಾಗಿ ಭರವಸೆ ನೀಡಿದರು, ಭರವಸೆ ಹಿನ್ನಲೆಯಲ್ಲಿ ಸೈನಿಕರು ಪ್ರತಿಭಟನೆಯನ್ನು ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಎ.ಆರ್.ರಮೇಶ್, ಕಾರ್ಯದರ್ಶಿ ನಾಗರಾಜು, ನಿವೃತ್ತ ಸೈನಿಕರಾದ ಮರಿಗೌಡ, ರಾಮ್‌ರಾವ್, ಸಂತೋಷ್, ಜಯಣ್ಣ, ಮೋಹನ್‌ರಾವ್, ವೇಣು, ವಾಸು, ಪ್ರಕಾಶ್ ಹಾಗೂ ಮೈಸೂರು, ಮಂಡ್ಯ, ನಾಗಮಂಗಲ, ಹಾಸನ, ತುಮಕೂರು ಮೊದಲಾದ ಜಿಲ್ಲೆಗಳಿಂದ ಮಾಜಿ ಸೈನಿಕರು ಭಾಗವಹಿಸಿದರು.