Advertisement

ಕುಣಿಗಲ್: ಬೆಂಕಿ ಹೊತ್ತಿಕೊಂಡು ಚಲಿಸುತ್ತಿದ್ದ ಟಿಟಿ ಕ್ಷಣಾರ್ಧದಲ್ಲಿ ಭಸ್ಮ

05:44 PM Nov 04, 2022 | Team Udayavani |

ಕುಣಿಗಲ್ : ಚಲಿಸುತ್ತಿದ್ದ ಟೆಂಪೋ ಟ್ರಾವಲರ್ ಇದ್ದಕಿದಂತೆ ಹೊಗೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಪಟ್ಟಣದ ಹೊರ ವಲಯದ ಬಿದನಗೆರೆ ಬೈ ಪಾಸ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶುಕ್ರವಾರ ಸಂಭವಿಸಿದೆ.

Advertisement

ಬೆಂಗಳೂರಿನ ವೈಟ್ ಫೀಲ್ಡ್ ವಾಸಿಗಳು ಹಾಸನದಲ್ಲಿ ಮದುವೆ ಮುಗುಸಿಕೊಂಡು ಟೆಂಪೋ ಟ್ರಾವಲ್ಸ್ ನಲ್ಲಿ ಬೆಂಗಳೂರಿಗೆ ಹಿದಿರುಗುತ್ತಿರಬೇಕಾದರೆ ರಾಷ್ಟ್ರೀಯ ಹೆದ್ದಾರಿ 75 ರ ಬಿದನಗೆರೆ ಸಮೀಪ ಶುಕ್ರವಾರ ಸಂಜೆ ಟಿಟಿ ವಾಹನದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣ ವಾಹನದಲ್ಲಿ ಇದ್ದವರು ಕೆಳಕ್ಕೆ ಇಳಿದರು. ಇಳಿದ ತಕ್ಷಣ ಬೆಂಕಿ ಕಾಣಿಕೊಂಡು ದಘ ದಘನೆ ಹೊತ್ತಿ ಉರಿಯಿತು. ತಕ್ಷಣ ಕುಣಿಗಲ್ ಪೊಲೀಸರು ಹಾಗೂ ಅಗ್ನಿಶಾಮಕ ದಳ ದವರು ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದರು.

ಟಿಟಿ ವಾಹನದಲ್ಲಿ ಮಹಿಳೆಯರು ಸೇರಿದಂತೆ ಎಂಟು ಪ್ರಯಾಣಿಕರು ಇದ್ದು, ಅದೃಷ್ಟ ವಷಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next