ಕುಣಿಗಲ್: ಕ್ಷೇತ್ರದ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರಿಗೆ ಕೋವಿಡ್ 19 ಸೋಂಕು ತಗಲಿದ್ದು ತಾಲೂಕಿನ ಜನತೆ, ಕಾಂಗ್ರೆಸ್ ಕಾರ್ಯ ಕರ್ತರ ಹಾಗೂ ಅವರ ಅಭಿಮಾನಿ ಗಳ ಆತಂಕಕ್ಕೆ ಕಾರಣವಾಗಿದೆ. ಡಾ. ರಂಗನಾಥ್ ಪ್ರತಿ 15 ದಿನ ಕೊಮ್ಮೆ ಕೋವಿಡ್ 19 ಪರೀಕ್ಷೆಗೆ ಒಳ ಗಾಗುತ್ತಿದ್ದರು, ಆದರೆ ಜು.6 ರಂದು ಸೋಂಕು ತಗುಲಿರುವುದು ದೃಢ ಪಟ್ಟಿದೆ.
ತಾಲೂಕಿನ ಅಧಿಕಾರಿ ಗಳೊಂದಿಗೆ ಸಭೆ ನಡೆಸಿರುವ ವೇಳೆ ಅಥವಾ ಸೋಂಕಿತನ ಶವ ಸಂಸ್ಕಾರ ದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸೋಂಕು ತಗಲಿರಬಹುದೆಂದು ಎಂದು ಅಂದಾಜಿಸಲಾಗಿದೆ. ಶಾಸಕರು ಬೆಂಗಳೂರಿನ ಮಹಾಲಕ್ಷಿ ಲೇಔಟ್‌ನ ಅವರ ಮನೆಯಲ್ಲಿ ಕಳೆದ ರಾತ್ರಿ ಹೋಂ ಕ್ವಾರಂಟೈನಲ್ಲಿದ್ದು, ಸೋಮವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಆತಂಕ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಯಾಗಿರುವ ಡಾ.ರಂಗನಾಥ್ ಡಿಕೆಶಿ ಪದಗ್ರಹಣ ಕಾರ್ಯಕ್ರಮದಲ್ಲಿ ಮುಂಚೂಣಿ ಯಲ್ಲಿ ನಿಂತು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು. ಈಗ ಅವರಿಗೆ ಸೋಂಕು ತಗಲಿರುವುದು ಪಕ್ಷದ ನಾಯಕರ ಆತಂಕಕ್ಕೆ ಕಾರಣವಾಗಿದೆ.
ಆಡಳಿತ ಯಂತ್ರ ಸ್ಥಗಿತ: ತಾಪಂ ಸಭಾಂಗಣದಲ್ಲಿ ಶಾಸಕರು ಅಧಿಕಾರಿ, ವರ್ತಕರ ಹಾಗೂ ಪಿಡಿಒಗಳ ಸಭೆ ನಡೆಸಿದರು. ಈ ವೇಳೆ ತಹಶೀಲ್ದಾರ್, ತಾಪಂ ಇಒ, ಶಾಸಕರ ಅಕ್ಕ ಪಕ್ಕದಲ್ಲಿ ಕುಳಿತಿದ್ದರು, ಈಗ ಅವರು ಕೂಡ ಹೋಂ ಕ್ವಾರಂಟೈನ್‌ಗೆ ಒಳಗಾಗಿರುವುದು ತಾಲೂಕು ಆಡಳಿತ ಯಂತ್ರ ಸ್ಥಗಿತಗೊಂಡಿದೆ.
15 ದಿನಗಳ ಕಾಲ ಸಂಪರ್ಕ ಸಾಧ್ಯವಿಲ್ಲ. ಆದರೆ ದೂರವಾಣಿ ಮೂಲಕ ಸಂಪರ್ಕಕ್ಕೆ ಸಿಗಲಿದ್ದೇನೆ. ಎಲ್ಲರೂ ಜಾಗೃತರಾಗಿ ಕೋವಿಡ್ 19 ಸೋಂಕು ಬಾರದಂತೆ ಎಚ್ಚರ ವಹಿಸಿ.
-ಡಾ.ರಂಗನಾಥ್, ಶಾಸಕ
ಶಾಸಕರು ಮತ್ತು ತಾ. ಮಟ್ಟದ ಅಧಿಕಾರಿಗಳು ಕಾರ್ಯಚಟುವಟಿಕೆಯಲ್ಲಿ ಇರು ವರು, ಹೋಂ ಕ್ವಾರಂಟೈನಲ್ಲಿ ಇದ್ದುಕೊಂಡು ಜನತೆಯ ಕೆಲಸ ಮಾಡುತ್ತಿದ್ದೇವೆ.
-ವಿ.ಆರ್.ವಿಶ್ವನಾಥ್, ತಹಶೀಲ್ದಾರ್