Advertisement
ಮಂಗಳವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಸಾಮಾನ್ಯ ಹೆರಿಗೆಯಾಗುತ್ತಿದ್ದರು, ಕೆಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆ ಆಗುತ್ತಿಲ್ಲ ಶಸ್ತ್ರಚಿಕಿತ್ಸೆ ಹೆಚ್ಚಾಗಿ ಮಾಡುತ್ತಿರುವುದರ ವಿರುದ್ಧ ವ್ಯಾಪಕವಾಗಿ ದೂರು ಕೇಳಿಬರುತ್ತಿದೆ ಇದರ ಬಗ್ಗೆ ಏನು ಕ್ರಮಕೈಗೊಂಡಿದ್ದೀರ ಎಂದು ಟಿಹೆಚ್‌ಓ ಜಗದೀಶ್ ಅವರನ್ನು ಪ್ರಶ್ನಿಸಿದರು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ಕರೆದು ಚರ್ಚಿಸಿ ಇದಕ್ಕೆ ಕಡಿವಾಣ ಹಾಕುವಂತೆ ಹಾಗೂ ತಾಯಿ ಮಗು ಮರಣವಾಗದಂತೆ ಎಚ್ಚರಿಕೆಯಿಂದ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಟಿಹೆಚ್‌ಓಗೆ ತಾಕೀತು ಪಡಿಸಿದರು.
Related Articles
Advertisement
ಶಿಸ್ತು ಕ್ರಮಕ್ಕೆ ಶಿಪಾರಸ್ಸು : ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಶಾಲಾ ಕಟ್ಟಡಗಳ ಪರಿಸ್ಥಿತಿ ಹಾಗೂ 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಸಂಬಂಧ ಮಾಹಿತಿ ನೀಡಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಳೆಯಿಂದ ಆಗಿರುವ ಹಾನಿ ಸಂಬಂಧ ವರದಿ ನೀಡಬೇಕಾಗಿರುವ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುರೇಶ್ ಸಭೆಗೆ ಭಾರದಿರುವುದರ ಬಗ್ಗೆ ಕೆಂಡಾಮಂಡಲರಾದ ಆಡಳಿತಾಧಿಕಾರಿ ಅತೀಕ್‌ಪಾಷ ಬಿಇಓ ತಿಮ್ಮರಾಜು, ಪಿಆರ್‌ಇಡಿ ಇಲಾಖೆ ಎಇಇ ಸುರೇಶ್ ಅವರ ವಿರುದ್ದ ಶಿಸ್ತುಕ್ರಮಕ್ಕೆ ಶಿಪಾರಸ್ಸ್ ಮಾಡುವಂತೆ ತಾ.ಪಂ ಇಓ ಜೋಸೆಫ್‌ಗೆ ಸೂಚಿಸಿದರು,
ಸಿಡಿಪಿಓ, ಟಿಹೆಚ್‌ಓಗೆ ತರಾಟೆ : ಸಭೆ ಬೆಳಗ್ಗೆ 11 ಗಂಟೆ ನಿಗಧಿ ಪಡಿಸಿದರು, ಸಮಯ 11-30 ಆದರೂ ಸಭೆಗೆ ಆಗಮಿಸದ ಸಿಡಿಪಿಓ ಅನುಷಾ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್ ಅವರನ್ನು ಅಡಳಿತಾಧಿಕಾರಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು, ಸಭೆಯನ್ನು ಕಾಟಾಚಾರಕ್ಕೆ ಮಾಡುತ್ತಿಲ್ಲ, ತಾಲೂಕಿನ ಉನ್ನತ ಅಧಿಕಾರಿಗಳಾಗಿ ನೀವೆ ಸಭೆಗೆ ತಡವಾಗಿ ಬಂದರೇ ಸಭೆ ಘನತೆ ಗೌರವವನ್ನು ಕಾಪಾಡುವವರು ಯಾರು ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು, ನಿಮ್ಮ ಸಬೂಬು ಬೇಕಿಲ್ಲ ಸರ್ಕಾರಿ ಕೆಲಸವನ್ನು ಸರಿಯಾಗಿ ಮಾಡಬೇಕು ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂಧಿಸಿ ಕೆಲಸ ಮಾಡಬೇಕು ಎಂದರು, ಗೃಹ ಪ್ರವೇಶಕ್ಕೆ ಕಚೇರಿ ಸಿಬ್ಬಂದಿಗಳನ್ನು ಕರೆದುಕೊಂಡು ಹೊದರೇ ಕಚೇರಿಯಲ್ಲಿ ಕೆಲಸ ಮಾಡುವವರು ಯಾರು ಎಂದು ಸಿಡಿಪಿಓ ಅನುಷಾ ಅವರನ್ನು ಪ್ರಶ್ನಿಸಿದರು, ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ನರೇಗಾ ಸಹಾಯಕ ನಿರ್ದೇಶಕ ಸುರೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ, ತೋಟಗಾರಿಕೆ ಇಲಾಖೆಯ ಸಹಾಯ ನಿರ್ದೇಶಕ ನಾಗರಾಜು, ಬಿಸಿಎಂ ಇಲಾಖೆಯ ವಿಸ್ತಿರಣಾಧಿಕಾರಿ ಪಾರ್ವತವ್ವ, ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್‌ಬಾಬು ಮತ್ತಿತರರು ಇದ್ದರು.