Advertisement

ಕುಣಿಗಲ್‌: ಗುಡುಗು ಸಹಿತ ಭಾರಿ ಮಳೆ; ಅಡಿಕೆ, ತೆಂಗಿನ ತೋಟಗಳು ಜಲಾವೃತ

11:54 AM Oct 14, 2022 | Team Udayavani |

ಕುಣಿಗಲ್: ಕಳೆದ ರಾತ್ರಿ ಗುಡುಗು ಸಹಿತ ಸುರಿದ ಭಾರಿ ಮಳೆಯಿಂದಾಗಿ ಅಡಿಕೆ, ತೆಂಗು, ಬಾಳೇ ತೋಟಗಳು ಜಾಲಾವೃತಗೊಂಡಿವೆ.

Advertisement

ನಾಗಿನಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ರಾತ್ರಿಯಿಡಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ನೀರು ಪಾಲಾಗಿದೆ. ಅಲ್ಲಿನ ಜನರು ರಾತ್ರಿಯಿಡಿ ನಿದ್ದೆ ಇಲ್ಲದೆ ಮನೆಯೊಳಗಿನ ನೀರು ಹೊರ ಹಾಕುವ ಕೆಲಸ ನಿರಂತರಾಗಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ಗುರುವಾರ ರಾತ್ರಿ ಸುಮಾರು 9.30ಕ್ಕೆ ಸಿಡಿಲಿನೊಂದಿಗೆ ಪ್ರಾರಂಭವಾದ ಮಳೆ ಬೆಳಗಿನ ಜಾವ 3 ಗಂಟೆಯವರೆಗೂ ಧಾರಾಕಾರವಾಗಿ ಸುರಿದಿದೆ. ಭಾರಿ ಮಳೆಯಿಂದಾಗಿ ಕಸಬಾ ಹೋಬಳಿ ಬೋರಲಿಂಗನಪಾಳ್ಯ ಗ್ರಾಮದ ಚಂದ್ರ ನಾಯ್ಕ್ ಅವರ ಮನೆಗೆ ನೀರು ನುಗ್ಗಿ, ಮನೆಯಲ್ಲಿದ್ದ ಎಂಟು ಚೀಲ ರಾಗಿ ಸೇರಿದಂತೆ ಇತರ ದವಸ ಧಾನ್ಯಗಳು ನೀರು ಪಾಲಾಗಿದೆ.

ಕುಂಭದ್ರೋಣ ಮಳೆ; ಜಲಾವೃತಗೊಂಡ ತೋಟ: ನಿನ್ನೆ ರಾತ್ರಿ ಸುರಿದ ಕುಂಭದ್ರೋಣ ಮಳೆ ಹಾಗೂ ಹೇಮಾವತಿ ನೀರು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿರುವ ಹಿನ್ನಲೆ ಕುಣಿಗಲ್ ದೊಡ್ಡಕೆರೆ ತುಂಬಿ ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರು ಬಿಡಲಾಗುತ್ತಿದೆ. ಇದರಿಂದಾಗಿ ದೊಡ್ಡಕೆರೆಯ ಅಚ್ಚುಕಟ್ಟು ಪ್ರದೇಶದ ಅಕ್ಕಪಕ್ಕದ ಜಮೀನಿಗಳು ಹಾಗೂ ತೋಟಗಳು ಜಲಾವೃತಗೊಂಡು ಅಡಿಕೆ, ತೆಂಗು, ಬಾಳೆ ಮೊದಲಾದ ವಾಣಿಜ್ಯ ಬೆಳೆಗಳು ಹಾನಿಯಾಗಿವೆ. ನಾಗಿನಿ ನದಿ ಮೈ ದುಂಬಿ ಹರಿಯುತ್ತಿದೆ. ಮಲ್ಲಿಪಾಳ್ಯ ಹಾಗೂ ಬೋರಲಿಂಗನಪಾಳ್ಯ ಗ್ರಾಮದ ಸ್ಮಶಾಣಗಳು ನೀರಿನಿಂದ ಜಲಾವೃತಗೊಂಡಿದೆ.

ಅಡಿಕೆ, ತೆಂಗಿಗೂ ಪರಿಹಾರ ನೀಡಿ: ಸರ್ಕಾರ ಹೂ, ಹಣ್ಣು, ತರಕಾರಿ ಬೆಳೆಗಳಿಗೆ ಪರಿಹಾರ ನೀಡುತ್ತಿದೆ. ಆದರೆ ತೋಟಗಾರಿಕೆ ಬೆಳೆಯಾದ ತೆಂಗು ಹಾಗೂ ಅಡಿಕೆಗೆ ಪರಿಹಾರ ನೀಡುತ್ತಿಲ್ಲ, ಒಂದು ಚೀಲಗೊಬ್ಬರ 1200 ರೂ. ಆಗಿದೆ. 5-6 ಲಕ್ಷ ಖರ್ಚು ಮಾಡಿ ಅಡಿಕೆ-ತೆಂಗು ಬೆಳೆದಿದ್ದೇವೆ. 3-4 ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಅಡಿಕೆ ಬೆಳೆ ಹಾಳಾಗಿದೆ. ಈ ಬೆಳೆಗಳಿಗೂ ಸರ್ಕಾರ ಪರಿಹಾರ ನೀಡಿ ರೈತರನ್ನು ತೋಟಗಾರಿಕೆ ಬೆಳೆ ರೈತರನ್ನು ಉಳಿಸಬೇಕು ಎಂದು ಎಂದು ಪ್ರಗತಿ ಪರ ರೈತ ಕೃಷ್ಣಪ್ಪ(ಕಟ್ಟಿ) ನಿಂಗಪ್ಪ ಮನವಿ ಮಾಡಿಕೊಂಡರು.

Advertisement

ರೈತ ಬಿಳಿದೇವಾಲಯ ರವಿ ಮಾತನಾಡಿ, ತೊರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕಾರಣ ನಮ್ಮ ಜಮೀನಿಗುಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ ಎಂದು ತಮ್ಮ ನೋವನ್ನು ಹೇಳಿಕೊಂಡರು. ಈ ಸಂಬಂಧ ತಾಲೂಕು ಆಡಳಿತ ಕ್ರಮ ಕೈಗೊಂಡು ಒತ್ತುವರಿ ಜಾಗವನ್ನು ತೆರವುಗೊಳಿಸಬೇಕೆಂದು ಮತ್ತಬ್ಬ ರೈತ ಒತ್ತಾಯಿಸಿದರು.

ತಾಲೂಕಿನಾಧ್ಯಂತ ಒಂದೇ ದಿನದಲ್ಲಿ 282.22 ಮೀ.ಮೀ ಮಳೆ : ಕುಣಿಗಲ್ 92 ಮೀ.ಮೀ, ಸಂತೆಪೇಟೆ 49.06 ಮೀ.ಮೀ, ಮಾರ್ಕೋನಹಳ್ಳಿ 68.3 ಮೀ.ಮೀ, ಕೆ.ಹೊನ್ನಮಾಚನಹಳ್ಳಿ 16.2 ಮೀ.ಮೀ, ನಿಡಸಾಲೆ 23.4 ಮೀ.ಮೀ,  ಹುಲಿಯೂರುದುರ್ಗ 16.4 ಮೀ.ಮೀ, ಅಮೃತೂರು18.3 ಮೀ.ಮೀಯಷ್ಟು ಮಳೆಯಾಗಿದೆ ಎಂದು ವರದಿಯಾಗಿದೆ.

ಕಳೆದ ಹಲವು ತಿಂಗಳಿನಿಂದ ಬಿಟ್ಟು- ಬಿಟ್ಟು ಸುರಿಯುತ್ತಿರುವ ಭಾರಿ ಮಳೆಯಿಂದ ಕಾವೇರಿಯ ಹೇಮಾವತಿ ವ್ಯಾಪ್ತಿಯಲ್ಲಿನ ಕೆರೆಕಟ್ಟೆಗಳು ಸಂಪೂರ್ಣವಾಗಿ ಕೋಡಿ ಹೊಡೆದಿವೆ. ಆದರೆ ಯಾವುದೇ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿಲ್ಲ. ಮುನ್ನೆಚ್ಚರಿಕೆಯಾಗಿ ಎಲ್ಲಾ ರೀತಿಯಲ್ಲೂ ಕ್ರಮಕೈಗೊಳ್ಳಲಾಗಿದೆ. –ರವಿ, ಎಇಇ ಹೇಮಾವತಿ ಕುಣಿಗಲ್

Advertisement

Udayavani is now on Telegram. Click here to join our channel and stay updated with the latest news.

Next