Advertisement

Kunigal; ಭಾರಿ ಗಾಳಿ ಮಳೆ: ರಾಜ್ಯ ಹೆದ್ದಾರಿಗೆ ಬಿದ್ದ ಬೃಹತ್ ಮರ

09:00 PM Aug 16, 2024 | Team Udayavani |

ಕುಣಿಗಲ್ : ಭಾರಿ ಮಳೆ, ಬಿರುಗಾಳಿಗೆ ಬೃಹತ್ ಗಾತ್ರದ ಮರ ಒಂದು ರಾಜ್ಯ ಹೆದ್ದಾರಿ 33 ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡೆಚಣೆ ಉಂಟಾದ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಹೊನ್ನೇನಹಳ್ಳಿ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

Advertisement

ಶುಕ್ರವಾರ ಸಂಜೆಯಿಂದಲ್ಲೇ ಬಿಟ್ಟು ಬಿಟ್ಟು ಸುರಿಯುತ್ತಿರುವ ಗುಡುಗು, ಗಾಳಿ ಸಹಿತ ಮಳೆಗೆ ಬೃಹತ್ ಮರ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಸ್ಥಳಕ್ಕೆ 112 ಪೊಲೀಸ್ ಸಿಬಂದಿಗಳಾದ ಮಲ್ಲೇಶ್ ಹಾಗೂ ಚಂದ್ರೇಗೌಡ ಅವರು ದೌಡಾಯಿಸಿ ಗ್ರಾಮಸ್ಥರ ನೆರವಿನಿಂದ ಮರವನ್ನು ತೆರವುಗೊಳಿಸಿದ್ದಾರೆ.

ಮರ ಬೀಳುವ ವೇಳೆ ಯಾವುದಾದರೂ ವಾಹನ ಬಂದಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next