Advertisement

ಕುಣಿಗಲ್ : ನೊಂದ ಜೀವಗಳಿಗೆ ಡಿವೈಎಸ್‌ಪಿ ಜಿ.ಆರ್.ರಮೇಶ್ ಸಾಂತ್ವನ ನುಡಿ : ನ್ಯಾಯದ ಭರವಸೆ

05:28 PM Jun 16, 2022 | Team Udayavani |

ಕುಣಿಗಲ್ : ಸ್ವಾಮಿ ನನ್ನ ಚೈನ್ ಕಳವಾಗಿದೆ ಹುಡಿಕೊಡಿ ವೃದ್ದೆಯ ಅಳಲು, ಸರ್ ನನ್ನ ತಂದೆಯ ಕೊಲೆ ಮಾಡಿದವರಿಂದ ನನಗೆ ಬೆದರಿಕೆ ಹಾಕುತ್ತಿದ್ದಾರೆ ನನಗೆ ರಕ್ಷಣೆ ಕೊಡಿ ಎಂದು ಅಪ್ರಾಪ್ತ ಬಾಲಕಿಯ ಕಣ್ಣೀರು, ನನ್ನ ತಂದೆ ಕಾಣಿಯಾಗಿದ್ದಾರೆ ಪತ್ತೆ ಮಾಡಿಕೊಡಿ ಸ್ವಾಮಿ ಎಂದು ಮಗನ ಕಣ್ಣೀರು…

Advertisement

ಇದು ಕುಣಿಗಲ್ ಪೋಲಿಸ್ ಠಾಣಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಣಿಗಲ್ ಉಪ ವಿಭಾಗದ ನೊಂದವರ ದಿನಾಚರಣೆ ಕಾರ್ಯಕ್ರಮದಲ್ಲಿ ನೊಂದವರು ಪೋಲಿಸರ ಮಂದೆ ತೋಡಿಕೊಂಡ ನೋವಿನ ಕಥೆಗಳು. ನೊಂದವರ ಈ ನೋವನ್ನು ಕೇಳಿದ ಪೋಲಿಸರು ಸಾಂತ್ವನದ ನುಡಿಗಳ ಜೊತೆಗೆ ನ್ಯಾಯ ಹೊದಗಿಸಿಕೊಂಡುವ ಭರವಸೆಯ ಮಾತುಗಳಿಂದ ನೊಂದ ಹೃದಯಗಳ ಭಾರ ಕಡಿಮೆ ಮಾಡಿದ ಅಪರೂಪದ ಕಾರ್ಯಕ್ರಮ ಠಾಣೆಯಲ್ಲಿ ನಡೆಯಿತು.

ನಿಜಕ್ಕೂ ಪೋಲಿಸ್ ಇಲಾಖೆಯ ಈ ನೊಂದವರ ಕಾರ್ಯಕ್ರಮ ಶ್ಲಾಘನೀಯ. ಪೋಲಿಸರು ಅಂದರೇ ಕಡಿಣವಾಗಿ ನಡೆದುಕೊಳ್ಳುವರು. ಬೈಯುವುದು ದೂರು ಕೊಟ್ಟವರಿಗೆ ನ್ಯಾಯ ಹೊದಗಿಸದೇ ಅಲೆಸುವರು ಎಂಬದು ಪ್ರಸ್ತುತ ಜನಮಾನಸ ಮನೆ ಮಾಡಿದರುವ ದೃಶ್ಯ ಆದರೆ ಇಲ್ಲಿ ಪೋಲಿಸರು ಕೂಡ ನಮ್ಮಂತೆ ಮನುಷ್ಯರೇ ಅವರಿಗೆ ಭಾವನೆಗಳಿವೆ. ನೊಂದವರ ಕಷ್ಟುವೂ ಅವರಿಗೆ ತಿಳಿದೆ ಎಂಬುದು ಈ ಕಾರ್ಯಕ್ರಮದಲ್ಲಿ ನೊಂದವರಿಗೆ ಹೇಳಿದ ಶಾಂತ್ವಾದ ನುಡಿಗಳಿಂದ ತಿಳಿದು ಬಂತು.

ಇದನ್ನೂ ಓದಿ : ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಳ ಎಫೆಕ್ಟ್;ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,045 ಅಂಕ ಕುಸಿತ

ಕುಣಿಗಲ್ ಉಪವಿಭಾಗದ ಡಿವೈಎಸ್‌ಪಿ ಜಿ.ಆರ್.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನೊಂದವರ ದಿನಾಚರಣೆ ಸಭೆಯನ್ನು ಏರ್ಪಡಿಸಿದ್ದರೂ ಸಭೆಗೆ ಕುಣಿಗಲ್ ಹಾಗೂ ತುರುವೇಕರೆ ತಾಲೂಕಿನಿಂದ ನೊಂದವರು ಬಂದಿದ್ದರು. ಕುಣಿಗಲ್ ತಾಲೂಕಿನ ಕಿತ್ನಾಂಮಂಗಲ ಗ್ರಾಮದ ವೃದ್ದೆ ಲಕ್ಷ್ಮಮ್ಮ ನನ್ನ ಚೈನ್ ಕಳುವಾಗಿ ತುಂಬಾ ತಿಂಗಳೂಗಳೇ ಆಗಿದೆ ಹುಡಿಕಿಕೊಡಿ ಸ್ವಾಮಿ ಎಂದು ಕಣ್ಣಿರು ಹಾಕಿಕೊಂಡು ಮನವಿ ಮಾಡಿತು. ಇದಕ್ಕೆ ಉತ್ತರಿಸಿದ ಡಿವೈಎಸ್‌ಪಿ ರಮೇಶ್ ವೃದ್ದೆಗೆ ಶಾಂತ್ವಾನದ ಮಾತುಗಳನ್ನು ಹೇಳಿ ಇನ್ನೂ ಮೂರು ನಾಲ್ಕು ದಿನಗಳಲ್ಲಿ ನಿನ್ನ ಚೈನ್ ನಿನ್ನ ಕೈ ಸೇರುತ್ತದೆ ಎಂದು ಹೇಳುವ ಜೊತೆಗೆ ವೃದ್ದೆಯ ಚೈನ್ ಕಳವು ಮಾಡಿದ ಆರೋಪಿಗಳನ್ನು ಬಂದಿಸಲು ಪೋಲಿಸರು ಪಟ್ಟ ಕಷ್ಟವನ್ನು ಸಭೆಗೆ ತಿಳಿಸಿದರು. ಉತ್ತರ ಪ್ರದೇಶದಿಂದ ಬಂದ ಸರಗಳ್ಳರಯ ತುಮಕೂರಿನಲ್ಲಿ ಬೈಕ್ ಕಳವು ಮಾಡಿ ಕುಣಿಗಲ್ ಕಿತ್ನಾಮಂಗಲದ ಬಳಿ ಈ ವೃದ್ದೆಯ ಸರ ಕಳ್ಳತನ ಮಾಡಿಕೊಂಡು ಕುಣಿಗಲ್ ಸಮೀಪದ ಚಿಕ್ಕಮರಳವಾಡಿ ಬಳಿ ಬೈಕ್ ಬಿಟ್ಟು ಉತ್ತರ ಪ್ರದೇಶಕ್ಕೆ ಹೋಗಿ ಚೈನ್ ಮಾರಾಟ ಮಾಡಿದ್ದಾರೆ. ಈಗ ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನು ನಮ್ಮ ಪೋಲಿಸರು ಬಂದಿಸಿದ್ದಾರೆ. ಸಿಪಿಐ ಗುರುಪ್ರಸಾದ್ ವಿಮಾನದಲ್ಲಿ ಉತ್ತರ ಪ್ರದೇಶಕ್ಕೆ ತೆರಳಲಿದ್ದಾರೆ ಆರೋಪಿಗಳನ್ನು ಕರೆ ತಂದು ವಿಚಾರಣೆ ನಡೆಸಿ ಸರವನ್ನು ವೃದ್ದೆ ಕಡುತ್ತೇವೆ. ವೃದ್ದೆಯ ಒಂದೇ ಸರಕ್ಕೆ ಉತ್ತರ ಪ್ರದೇಶಕ್ಕೆ ಪೋಲಿಸರು ತೆರಳಿ ಬಂದಿಸಿರುವ ಕಷ್ಟದ ಹಿಂದೆ 100 ಸಿಸಿ ಟಿವಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೇ ಮಾಡಿರುವ ಸಿಪಿಐ ಗುರುಪ್ರಸಾದ್ ಅವರ ತಂಡಕ್ಕೆ ಅಭಿನಂದನೆಯನು ಡಿವೈಎಸ್‌ಪಿ ರಮೇಶ್ ತಿಳಿಸಿದರು.

Advertisement

ಕೀಲಾರ ಗ್ರಾಮದ ನಿಂಗೇಗೌಡ ಎಂಬವರ ಕೊಲೆಯಾಗಿರುತ್ತದೆ. ಕೊಲೆಯಾದ ನಿಂಗೇಗೌಡ ಅವರ ಮಗಳು ನಿಷಾ ಸಭೆಯಲ್ಲಿ ಕೊಲೆ ಮಾಡಿದ ಕಡೆಯವರು ನನಗೆ ಕೊಲೆ ಬೇದರಿಕೆ ಹಾಕುತ್ತಿದ್ದಾರೆ ಸರ್ ನನಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಾಳೆ. ನನ್ನ ತಾಯಿಯನ್ನು ಕೊಲೆ ಕೇಸ್‌ನಲ್ಲಿ ಬಂದಸಲಾಗಿದೆ ಉಳಿದ ನಾಲ್ವರು ಆರೋಪಿಗಳು ಸಿಕಿಲ್ಲ ನನ್ನ ಚಿಕ್ಕಮ್ಮ ಸೇರಿಕೊಂಡು ನನಗೆ ಬೆಧರಿಕೆ ಹಾಕುತ್ತಿದ್ದಾರೆ ಎಂದು ಬಾಲಕಿ ನಿಷಾ ತನ್ನ ಅತಂಕವನ್ನು ಹೇಳಿಕೊಂಡಲು ಇದಕ್ಕೆ ಪ್ರತಿಕ್ರೀಯಿಸಿದ ಡಿವೈಎಸ್‌ಪಿ ರಮೇಶ್ ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿ ಉಳಿದ ಕೊಲೆ ಆರೋಪಿಗಳನ್ನು ಬಂದಿಸುವುದಾಗಿ ತಿಳಿಸಿದರು.

ಇದನ್ನೂ ಓದಿ : ವಿಶ್ವ ಟೆಸ್ಟ್‌ ಕ್ರಿಕೆಟ್‌ ನ ನಂ.1 ಬ್ಯಾಟರ್‌ ಜೋ ರೂಟ್‌ ಫೋಟೋ ಗ್ಯಾಲರಿ

ಕುಣಿಗಲ್- ಹುಲಿಯೂರುದುರ್ಗ ಕೆಶಿಫ್ ರಸ್ತೆಯನ್ನು ಅವೈಜ್ಙಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಈ ಸಂಬಂದ ಅಪಘಾತಗಳು ಹೆಚ್ಚಾಗಿ ಜನ ಸಾಯುತ್ತರಿದ್ದಾರೆ. ಕೆಶಿಪ್ ಅಧಿಕಾರೊಂದಿಗೆ ಚರ್ಚಿಸಿ ಪಾದಚಾರಿ ರಸ್ತೆ ನಿರ್ಮಾಣ ಮಾಡಿ ಜನರ ಜೀವ ಉಳಿಸುವ ಕೆಲಸ ಮಾಡಿ ಸರ್ ಎಂದು ಸಮಾಜಿಕ ಹೋರಾಟಗಾರ ಜಿ.ಕೆ.ನಾಗಣ್ಣ ಪೋಲಿಸರಲ್ಲಿ ಮನವಿ ಮಾಡಿದರು. ಅಗತ್ಯ ಕ್ರಮಕೈಗೊಳ್ಳುವ ಭರವಸೆಯನ್ನು ಪೋಲಿಸರು ನೀಡಿದರು.

ತುರುವೇಕೆರೆ ಪ್ರೋಪೆಷನಲ್ ಡಿವೈಎಸ್‌ಪಿ ಅನುರಾದ, ಸಿಪಿಐಗಳಾದ ಗುರುಪ್ರಸಾದ್, ಅರುಣ್ ಸಾಲುಂಕಿ, ಗೋಪಾಲನಾಯ್ಕ್, ಪಿಎಸ್‌ಗಳಾದ ಚೇತನ್ ಕುಮಾರ್, ಕೇಶವ ಮೂರ್ತಿ, ನಾಗರತ್ನಮ್ಮ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next