ಕುಣಿಗಲ್ : ಸಂಪ್ಗೆ ನೀರು ತುಂಬಿಸಲು ಮೋಟರ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹೇರೂರು ಗ್ರಾಮದ ಲಕ್ಷ್ಮಿ ನಾರಾಯಣ್ (35) (ಜೂನಿಯರ್ ರವಿಚಂದ್ರನ್) ಮೃತ ದುರ್ದೈವಿ.
ಜೂನಿಯರ್ ರವಿಚಂದ್ರನ್ ಎಂದೇ ಪ್ರಖ್ಯಾತಗೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿಧ ಲಕ್ಷ್ಮಿ ನಾರಾಯಣ ಮಂಗಳವಾರ ತಮ್ಮ ಮನೆಯ ಸಂಪ್ಗೆ ನೀರು ತುಂಬಿಸಲೆಂದು ಮೋಟರ್ ಸ್ವಿಚ್ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಲಕ್ಷ್ಮಿ ನಾರಾಯಣ ರಾಜ್ಯದ ವಿವಿಧ ಜಿಲ್ಲಾ, ತಾಲೂಕು ಸೇರಿದಂತೆ ವಿವಿದೆಡೆ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾಡು ಹೇಳುವುದರ ಜೋತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹೋಲುತ್ತಿದ್ದ ಅವರು ರವಿಚಂದ್ರನ್ ಅವರ ಅಭಿನಯವನ್ನು ಸೊಗಸಾಗಿ ಅಭಿನಯಿಸುವ ಮೂಲಕ ಜನರ ಮನೆ ಮಾತಾಗಿದ್ದರು.
Related Articles
ಇದನ್ನೂ ಓದಿ : ಗುಂಡ್ಲುಪೇಟೆ : ಕಾರು-ಬೈಕ್ ಮುಖಾಮುಖಿ ಢಿಕ್ಕಿ: ತಂದೆ,ಮಗ ಸ್ಥಳದಲ್ಲೇ ಸಾವು ; ಇಬ್ಬರು ಗಂಭೀರ