Advertisement

ಮದ್ಯದಂಗಡಿಯಲ್ಲಿ ಕಳ್ಳತನ: 70 ಸಾವಿರ ಮೌಲ್ಯದ ಮದ್ಯ, ನಗದು ದೋಚಿ ಪರಾರಿ

08:05 AM Oct 13, 2022 | Team Udayavani |

ಕುಣಿಗಲ್ : ಮದ್ಯದಂಗಡಿಯ ಶಟರ್ ಅನ್ನು ಮೀಟಿ, ಸಿ.ಸಿ ಕ್ಯಾಮರಾಕ್ಕೆ ಹಾನಿಗೊಳಿಸಿ ಒಳ ನುಗ್ಗಿದ ಕಳ್ಳರು ನಗದು ಸೇರಿದಂತೆ ಸುಮಾರು 70 ಸಾವಿರ ಬೆಲೆ ಬಾಳುವ ಮದ್ಯ ದೋಚಿಕೊಂಡು ಪರಾರಿಯಾಗಿರುವ ಘಟನೆ ಹಳೆಯ ರಾಷ್ಟ್ರೀಯ ಹೆದ್ದಾರಿ 48 ಶ್ರೀನಿವಾಸ ಲಿಕ್ಕರ್ಸ್ ನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

Advertisement

ಬುಧವಾರ ರಾತ್ರಿ ಎಂದಿನಂತೆ, ಅಂಗಡಿ ಮಾಲೀಕರು, ಅಂಗಡಿಗೆ ಬೀಗ ಹಾಕೊಕೊಂಡು ಹೋಗಿದ್ದರು, ಹೊಂಚು ಹಾಕಿ ಕುಳಿತಿದ್ದ ಕಳ್ಳರು, ಕಬ್ಬಿಣದ ಸಲಾಕೆಯಿಂದ ಅಂಗಡಿಯ ಶೆಟರ್ ಮೀಟಿ ಒಳ ನುಗ್ಗಿ 70 ಸಾವಿರ ರೂ ಮೌಲ್ಯದ ವಿವಿಧ ಮಾದರಿಯ ಮದ್ಯ ಹಾಗೂ ಒಂದು ಸಾವಿರ ರೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಕಳ್ಳರ ಗುರುತು ಪತ್ತೆಯಾಗಬಾರದೆಂದು ಸಿಸಿ ಕ್ಯಾಮರವನ್ನು ಹಾನಿಗೊಳಿಸಿದ್ದಾರೆ, ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಭಾರತೀಯ ಸೇನೆಗೂ ಎಲೆಕ್ಟ್ರಿಕ್‌ ವಾಹನ; ಎಲೆಕ್ಟ್ರಿಕ್‌ ಬಸ್ಸುಗಳಿಗಾಗಿ ಶೀಘ್ರವೇ ಟೆಂಡರ್‌

Advertisement

Udayavani is now on Telegram. Click here to join our channel and stay updated with the latest news.

Next