ಕುಣಿಗಲ್ : ತಾಲೂಕಿನ ಅಮೃತೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಗುರುಪ್ರಸಾದ್ ರೌಡಿಶೀಟರ್‌ಗಳಿಗೆ ಬಿಸಿ ಮುಟ್ಟಿಸಿದರು.
ಅಮೃತೂರು ಠಾಣಾ ಅವರಣದಲ್ಲಿ ಭಾನುವಾರ ಕರೆಯಲಾಗಿದ್ದ ರೌಡಿಪರೇಡ್‌ನಲ್ಲಿ ಕಾನೂನು ಮೀರಿ ನಡೆದುಕೊಂಡಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಹೀಗಾಗಿ ಕಾನೂನು ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಸುಮಾರು 22 ಕ್ಕೂ ಅಧಿಕ ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು,
ಗ್ರಾಮಗಳಲ್ಲಿ ಧಾರ್ಮಿಕ ಹಬ್ಬಗಳು ಸೇರಿದಂತೆ ಇತರೆ, ಸಾರ್ವಜನಿಕರ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು, ಶಾಂತಿಯಿಂದ ಇರಬೇಕು ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುವಾಗ ರೌಡಿ ಪಟ್ಟಿಯಲ್ಲಿ ಇರುವ ಹಲವರು ತ್ರಿಬಲ್ ರೈಟಿಂಗ್ ಸೇರಿದಂತೆ ಅಲ್ಲಲ್ಲಿ ಕಟ್ಟೇ ಮೇಲೆ ಕುಳೀತು ಹರಟೆ ಹೊಡುವುದು ಕಂಡು ಬಂದಿದೆ, ಇನ್ನೂ ಮುಂದೆ ಇದನ್ನು ಮುಂದುವರಿಸಿದರೇ ಸಹಿಸುವುದಿಲ್ಲ, ನಮಗೆ ಸಾರ್ವಜನಿಕರು ನೆಮ್ಮದಿಯಿಂದ ಬಧುವ ವಾತಾವರಣ ಮಾಡಬೇಕಾಗಿದೆ, ಮನ ಬಂದಂತೆ ಮಧ್ಯರಾತ್ರಿ ವೇಳೆಯಲ್ಲಿ ಹೊರಗಡೆ ಹೋಡಾಡುವಂತ್ತಿಲ್ಲ, ರಾತ್ರಿ ವೇಳೆ ಮನೆಯಲ್ಲಿ ಇರಬೇಕೆಂದು ಎಚ್ಚರಿಸಿದರು,
ವ್ಹೀಲಿಂಗ್‌ಗೆ ಬ್ರೇಕ್ : ಬೈಕ್‌ನಲ್ಲಿ ಮೂರು ಮಂದಿ ಸಂಚಾರ ಮಾಡಿದಲ್ಲಿ, ಅಥವಾ ವ್ಹೀಲಿಂಗ್ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ದ ಮುಲಾಜಿಲ್ಲದೇ ನಿರ್ದಾಕ್ಷೀಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿದ ಸಿಪಿಐ ಯಾವುದೇ ಕ್ರಮಿನಲ್ ಚಟುವಟಿಕೆಗಳಿಂದ ದೂರವಿರಬೇಕು, ಬೇಲ್ ಮೇಲೆ ಹೊರ ಬಂದಿರುವ ರೌಡಿಗಳು ಎಚ್ಚರಕೆಯಿಂದ ಇರಬೇಕೆಂದು ತಾಕೀತು ಪಡಿಸಿದರು ತಮ್ಮ ವರ್ತನೇ ಈ ಕೂಡಲೇ ಬದಲಾಯಿಸಿಕೊಳ್ಳಿ ಇಲ್ಲದಿದ್ದರೇ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸಲಾಗುವುದೆಂದು ಖಡಕ್ ಎಚ್ಚರಕೆ ನೀಡಿದರು.
ಜೀವನ ಬದಲಾಯಿಸಿಕೊಳ್ಳಿ : ರೌಡಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ತಪ್ಪುಗಳನ್ನು ತಿದ್ದುಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು, ಪ್ರಾಮಾಣಿಕತೆಯಿಂದ ದುಡಿದು ಹೆಂಡತಿ, ಮಕ್ಕಳು, ತಂದೆ, ತಾಯಿಯನ್ನು ಚನ್ನಾಗಿ ನೋಡಿಕೊಳ್ಳಿ ಜೀವನದಲ್ಲಿ ಬದಲಾಗುತ್ತೇವೆ ಎನ್ನುವವರಿಗೆ ಅವಕಾಶ ನೀಡಲಾಗುವುದು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿ ಸಿರಿವಂತಿಕೆಯ ಅಹಂಕಾರ ಅಥವಾ ಮತ್ತೊಬ್ಬರ ಮಾತು ಕೇಳಿ ಕೃತ್ಯವನ್ನು ಎಸಗಿ ಅರಾಮಾಗಿ ಇರುತ್ತೇನೆ ಎಂಬ ಭ್ರಮೆ ಬಿಡಬೇಕು ತಪ್ಪು ಮಾಡುವ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡಿದರೇ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಗುರುಪ್ರಸಾದ್ ಹೇಳಿದರು.
ಬೆದರಿಕೆ ನಡೆಯುವುದಿಲ್ಲ : ಜನ ಸಾಮಾನ್ಯರನ್ನು ಬೆದರಿಸುವುದು ಬಿಡಬೇಕು, ಪೊಲೀಸರು ಕರೆದಾಗ ಠಾಣೆಗೆ ಹಾಜರಾಗುವುದು ಕಡ್ಡಾಯ ತಪ್ಪಿಸಿಕೊಳ್ಳಬಾರದೆಂದು ಸೂಚಿಸಿದ ಗುರುಪ್ರಸಾದ್ ತಲೆ ಕೂದಲು ವಿಕಾರ ರೂಪವಾಗಿ ಬಿಡುವುದು ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದನ್ನು ಬಿಟ್ಟು ಸಮಾಜದಲ್ಲಿ ಸಭ್ಯತೆಯಿಂದ ಜೀವಿಸಬೇಕೆಂದು ಸಲಹೆ ನೀಡಿದರು,
ಈ ವೇಳೆ ಕ್ರೈಂ ಸಿಬ್ಬಂದಿಗಳಾದ ಪ್ರಶಾಂತ್, ರಂಗನಾಥ್, ಕಿರಣ್ ಇದ್ದರು.
ಇದನ್ನೂ ಓದಿ : ಹೆಲಿಕಾಪ್ಟರ್ ಪತನ: ಪ್ರತ್ಯಕ್ಷದರ್ಶಿಯ ಮೊಬೈಲ್ ಫೊರೆನ್ಸಿಕ್ ಪರೀಕ್ಷೆಗೆ