Advertisement

ದೊಡ್ಡಮಲಳವಾಡಿ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

10:26 PM May 08, 2022 | Team Udayavani |

ಕುಣಿಗಲ್ : ತಾಲೂಕಿನ ಕೊತ್ತಗೆರೆ ಹೋಬಳಿ ದೊಡ್ಡಮಲಳವಾಡಿ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ಕಾರ್ಯಚರಣೆ ನಡೆಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ಕೊತ್ತಗೆರೆ ಹೋಬಳಿ ದೊಡ್ಡಮಳಲವಾಡಿ ಗ್ರಾಮದ ಚಂದ್ರಮ್ಮ ಮತ್ತು ಅನಂತರಾಮಯ್ಯ ಅವರ ಮಗ ಶಾಂತಕುಮಾರ ಹಾಗೂ ಗಿಡದಪಾಳ್ಯ ಗ್ರಾಮದ ಪಾರ್ವತಮ್ಮ ಮತ್ತು ಹನುಮೇಗೌಡ ಅವರ ಮಗಳು ಆರ್.ತಾರಾ ಅವರ ವಿವಾಹ ವರನ ಸ್ವಗೃಹ ದೊಡ್ಡಮಲಳವಾಡಿಯಲ್ಲಿ ಭಾನುವಾರ ಪ್ರಥಮ ಶಾಸ್ತç ಹಾಗೂ ಸೋಮವಾರ ಮುಹೂರ್ತ ನಿಗಧಿಯಾಗಿತ್ತು,

ವಧುವಿಗೆ 17 ವರ್ಷ ಒಂದು ತಿಂಗಳಾಗಿದ್ದು, 18 ವರ್ಷದ ತುಂಬದ ಹಿನ್ನಲೆಯಲ್ಲಿ ಬಾಲ್ಯ ವಿವಾಹವಾಗುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀಬಾಯಿ, ಅಂಗನವಾಡಿ ಕಾರ್ಯಕರ್ತೆ ಚಿಕ್ಕತಾಯಮ್ಮ, ಆಶಾ ಕಾರ್ಯಕರ್ತೆ ರೇಖಾ ಅವರು ಭೇಟಿ ನೀಡಿ, ಬಾಲ್ಯ ವಿವಾಹವಾದರೆ ಕಾನೂನು ಪ್ರಕಾರ ಕಠಿಣ ಕ್ರಮಕ್ಕೆ ಒಳಪಡಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು, ಬಳಿಕ ವಧು ಹಾಗೂ ವರನ ಪೋಷಕರಿಂದ ಮುಚ್ಚಳಿಕೆ ಬರೆಸುಕೊಂಡು ವಿವಾಹವನ್ನು ತಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next