Advertisement
ಅವನತಿ ಸ್ಥಿತಿ: ಒಂದು ಕಾಲದಲ್ಲಿ ಪಟ್ಟಣದ ಚಿಕ್ಕಕೆರೆ ನೀರು ಕೃಷಿ, ಕುಡಿಯಲು ಬಳಸಲಾಗುತಿತ್ತು. ಆದರೆ ಇಂದು ಕೆರೆ ಒತ್ತುವರಿ, ಮತ್ತೂಂದೆಡೆ ಮುಚ್ಚಿದ ರಾಜ ಕಾಲುವೆ, ಸಮರ್ಪಕ ನಿರ್ವಹಣೆ ಇಲ್ಲದ ಚರಂಡಿ ನೀರು ಕೆರೆಗೆ ಹರಿಯುತ್ತಿದೆ. ಅಲ್ಲದೆ ಕೋಳಿ ತ್ಯಾಜ್ಯ ಹಾಗೂ ಪುರಸಭೆ ಕಸ ಸುರಿಯುವ ತ್ಯಾಜ್ಯ ಸಂಗ್ರಹ ಘಟಕವಾಗಿ ಕೆರೆ ಅವನತಿ ಸ್ಥಿತಿಗೆ ತಲುಪಿದೆ.
Related Articles
Advertisement
ವಿದೇಶಿ ಪಕ್ಷಿಗಳಿಗೆ ಕಂಟಕ: ಚಿಕ್ಕಕೆರೆಗೆ ವಿದೇಶಿ ಪಕ್ಷಿಗಳು ಸಂತಾನೋತ್ಪತಿಗೆ ಪ್ರತಿ ವರ್ಷ ವಲಸೆ ಬರು ತ್ತವೆ. ಕೆರೆಯಂಗಳದಲ್ಲಿ ಪಕ್ಷಿಗಳೇ ತುಂಬಿ ಅವುಗಳ ಕಲರ ನೋಡುಗರ ಕಣ್ಮನ ಸೆಳೆಯುತ್ತಿದ್ದವು. ಈಗ ಕೆರೆಯಂಗಳದಲ್ಲಿ ಕೋಳಿ ತ್ಯಾಜ್ಯ ಕಸ ಹಾಗೂ ಚರಂಡಿ ನೀರು ತುಂಬಿ ಪಕ್ಷಿಗಳು ಮೃತಪಡುತ್ತವೆ.
ಕೋಳಿ ತಾಜ್ಯ, ಕಸ: ಪಟ್ಟಣದಲ್ಲಿ ನಾಯಿಕೊಡೆಗಳಂತೆ ಕೋಳಿ ಅಂಗಡಿಗಳು ಹೆಚ್ಚಿವೆ. ಇಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯವನ್ನು ಸಂಜೆ ವೇಳೆ ಕೆರೆ ಅಂಗಳದಲ್ಲಿ ಸುರಿಯುತ್ತಿದ್ದಾರೆ. ಇದರ ಜೊತೆಗೆ ಪುರಸಭೆಯವರೂ ಗವಿಮಠದ ಬಳಿ ಇರುವ ಘನತ್ಯಾಜ್ಯ ಘಟಕಕ್ಕೆ ಸುರಿಯಬೇಕಾದ ಕಸವನ್ನು ಕೆರೆಗೆ ಸುರಿದು ಹೋಗು ತ್ತಿದ್ದಾರೆ. ಈ ಬಗ್ಗೆ ಹೇಮಾವತಿ ಅಧಿಕಾರಿಗಳು ನೋಟಿಸ್ ನೀಡಿದರೂ ಪುರಸಭೆ ಎಚ್ಚೆತ್ತುಕೊಂಡಿಲ್ಲ. ಗುಜ್ಜಾರಿ ಮೊಹಲ್ಲಾ ಬಡಾವಣೆಯ ಚರಂಡಿ ನೀರು ಸಂಪೂರ್ಣವಾಗಿ ಕೆರೆ ಸೇರುತ್ತಿದೆ. ಇದರಿಂದ ಚಿಕ್ಕಕೆರೆ ತ್ಯಾಜ್ಯ ತೊಟ್ಟಿಯಾಗಿದೆ.
ಕಾವೇರಿ ನೀರಾವರಿ ನಿಗಮಕ್ಕೆ ಒಳಪಡುವ ಈ ಕೆರೆಯನ್ನು ರಕ್ಷಣೆ ಮಾಡುವ ಹಾಗೂ ಅಭಿವೃದ್ಧಿ ಪಡಿಸುವ ಕೆಲಸಕ್ಕೆ ಇಲಾಖ ಅಧಿಕಾರಿಗಳು ಮುಂದಾಗ ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ವಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕುಣಿಗಲ್ ಚಿಕ್ಕಕೆರೆಯನ್ನು ಮೂಡಲ್ ಕುಣಿಗಲ್ ಕೆರೆ ಮಾದರಿ ಯಲ್ಲಿ ಅಭಿವೃದ್ಧಿ ಮಾಡುವಂತೆ ಹಾಗೂ ಒತ್ತುವರಿ ತೆರವುಗೊಳಿಸಬೇಕೆಂಬುದು ನಾಗರಿಕರ ಒತ್ತಾಯ.
● ಕೆ.ಎನ್.ಲೋಕೇಶ್