Advertisement

Kunigal: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸ್ನೇಹಿತನ ಕೊಲೆಗೈದಿದ್ದ ಇಬ್ಬರ ಬಂಧನ

09:56 PM May 31, 2024 | Team Udayavani |

ಕುಣಿಗಲ್ : ಕ್ಷುಲಕ ಕಾರಣಕ್ಕಾಗಿ ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ, ಕೊಲೆ ಗೈದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಲಿಯೂರುದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ಕಸಬಾ ಹೋಬಳಿ ಬೂದಾನಹಳ್ಳಿ ಗ್ರಾಮದ ಪ್ರದೀಪ್‌ನ ಕೊಲೆಯ ಪ್ರಕರಣವನ್ನು ಭೇದಿಸಿದ ಹುಲಿಯೂರುದುರ್ಗ ಪೊಲೀಸರು ಈ ನಿಟ್ಟಿನಲ್ಲಿ ಲಕ್ಷ್ಮಿಪುರದ ಶಂಕರ್ (31), ಬೂದಾನಹಳ್ಳಿ ಗ್ರಾಮದ ನಾಗೇಶ್ (30) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಕಂಠ ಪೂರ್ತಿ ಕುಡಿಸಿ, ಟವಲ್‌ನಿಂದ ಕತ್ತು ಸುತ್ತಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿ ತಲೆ ಮರಿಸಿಕೊಂಡಿದ್ದ ಇಬ್ಬರು ಆರೋಪಿಗಳ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಮುಳುವಾದ ಬೈಗುಳ?

ಪ್ರದೀಪ್, ಶಂಕರ್ ಮತ್ತು ನಾಗೇಶ್ ಮೂವರು ಸ್ನೇಹಿತರಾಗಿದ್ದರು, ಅವರು ಆಗಾಗ ಸೇರಿಕೊಂಡು ರಾತ್ರಿ ವೇಳೆಯಲ್ಲಿ ಮದ್ಯಪಾನ ಮಾಡುತ್ತಿದ್ದರು. ಕುಡಿದ ಅಮಲಿನಲ್ಲಿ ಪ್ರದೀಪನು ಶಂಕರ್ ಮತ್ತು ನಾಗೇಶನನ್ನು ಅವಾಚ್ಯವಾದ ಶಬ್ದಗಳಿಂದ ನಿಂಧಿಸುತ್ತಿದ್ದ ಎನ್ನಲಾಗಿದೆ.

Advertisement

ಕುಪಿತಗೊಂಡ ಶಂಕರ್ ಮತ್ತು ನಾಗೇಶ,  ಪ್ರದೀಪನನ್ನು ಕೊಲೆ ಮಾಡಲೇ ಬೇಕೆಂದು ತಿರ್ಮಾನಿಸಿ, ಮೇ 27 (ಸೋಮವಾರ) ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಲಕ್ಷ್ಮಿಪುರ ಅರಣ್ಯ ಪ್ರದೇಶದಲ್ಲಿ ಮದ್ಯಪಾನ ಮಾಡಲು ಕರೆದುಕೊಂಡು  ಹೊಗಿದ್ದಾರೆ.

ಶಂಕರ್, ಮತ್ತು ನಾಗೇಶ್ ಅವರು ಕುಡಿಯುವ ರೀತಿಯಲ್ಲಿ ನಾಟಕ ಮಾಡಿ, ಮದ್ಯ ಸೇವಿಸಿರಲಿಲ್ಲ. ಪ್ರದೀಪನಿಗೆ ಕಂಠ ಪೂರ್ತಿ ಕುಡಿಸಿ ಬಳಿಕ ಟವಲ್‌ನಿಂ ಆತನ ಕುತ್ತಿಗೆಯನ್ನು ಜೀರಿ, ಉಸಿರು ಗಟ್ಟಿಸಿ, ಕೊಲೆ ಮಾಡಿದ್ದಾರೆ. ಪ್ರಾಣ ಬಿಟ್ಟಿದ್ದಾನೋ ಇಲ್ಲವೋ ಎಂಬ ಅನುಮಾನದಲ್ಲಿ ಮತ್ತೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಮೃತಪಟ್ಟಿರುವುದನ್ನು ದೃಢ ಪಡಿಸಿಕೊಂಡು ಶವವನ್ನು ಲಕ್ಷ್ಮಿಪುರ ಅರಣ್ಯದಲ್ಲಿ ಬಿಟ್ಟು ಮನೆಗೆ ಹೋಗಿದ್ದಾರೆ.

ಪ್ರಕರಣ ದಾಖಲು : ಪ್ರಕರಣ ದಾಖಲಿಸಿಕೊಂಡ ಹುಲಿಯೂರುದುರ್ಗ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್‌ಪಿ ಓಂಪ್ರಕಾಶ್ ಮಾರ್ಗದರ್ಶನದಲ್ಲಿ, ಸಿಪಿಐ ಮಾದ್ಯನಾಯಕ್, ಪಿಎಸ್‌ಐ ಪ್ರಶಾಂತ್ ಅವರ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next