Advertisement
ಜಾಲ್ಸೂರು ಗ್ರಾಮದ ಕುಂದ್ರುಕೋಡಿಯ ಕೆ. ನಾರ್ಣಪ್ಪ ಅವರ ಮನೆ ಸಮೀಪ ಮೆಸ್ಕಾಂ ಟಿ.ಸಿ.ಯೊಂದನ್ನು ಅಳವಡಿಸಿದೆ. ಯಾವುದೇ ಮುನ್ಸೂಚನೆ ಕೊಡದೆ ಹಾಕಲಾಗಿರುವ ಈ ಟಿ.ಸಿ. ಮನೆಯಿಂದ ಗರಿಷ್ಠ 6 ಮೀ. ಅಂತರದಲ್ಲಿದೆ. ಟಿ.ಸಿ. ತೆರವಿಗೆ ಕಳೆದ ಒಂದು ವರ್ಷದಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಸ್ಪಂದಿಸುತ್ತಿಲ್ಲ ಎನ್ನುವುದು ನಾರ್ಣಪ್ಪ ಅವರ ಅಳಲು. ಈ ಹಿಂದೆ ಅಳವಡಿಸಿದ್ದ ಸ್ಥಳದಿಂದ ಟಿ.ಸಿ. ತೆರವುಗೊಳಿಸಿ ಇಲ್ಲಿಗೆ ವರ್ಗಾಯಿಸಿದ್ದಾರೆ. ಮೊದಲಿನ ಟಿ.ಸಿ. 15 ಮೀಟರ್ ದೂರದಲ್ಲಿತ್ತು. ಅಲ್ಲಿ ಜನವಸತಿ ಇರಲಿಲ್ಲ. ಈಗ ನಾರ್ಣಪ್ಪ ಅವರ ಮನೆಯ ಪಕ್ಕದಲ್ಲೇ ಹಾಕಿದ್ದಾರೆ. ಮೊದಲು ಟಿ.ಸಿ. ಇದ್ದ ಸ್ಥಳದಲ್ಲಿ ಕಟ್ಟಡವೊಂದು ನಿರ್ಮಾಣವಾಗಿದೆ.
ಕುಂದ್ರುಕೋಡಿಯಲ್ಲಿ ಅಳವಡಿಸಿರುವ ಟಿ.ಸಿ. ತೆರವುಗೊಳಿಸಲು ಮೆಸ್ಕಾಂಗೆ ಪತ್ರ ಬರೆಯಲಾಗಿದೆ. ಫೋನ್ ಮೂಲಕ ಸುಳ್ಯ ಶಾಸಕರಿಗೆ ಮನವಿ ಮಾಡಿದ್ದಾರೆ. ಜಾಲ್ಸೂರು ಗ್ರಾ.ಪಂ.ಗೂ ದೂರು ಕೊಡಲಾಗಿದೆ. ವಿಭಾಗೀಯ ಅಭಿಯಂತರು, ಮೆಸ್ಕಾಂ ಉಪವಿಭಾಗ ಸುಳ್ಯ, ಅಧೀಕ್ಷಕ ಎಂಜಿನಿಯರ್ ವಿದ್ಯುತ್ ನಿರ್ವಹಣೆ ಮತ್ತು ಪಾಲನೆ ವೃತ್ತ ಮಂಗಳೂರು, ಕಾರ್ಯಪಾಲಕ ಅಭಿಯಂತರು ಮೆಸ್ಕಾಂ ಮಂಗಳೂರು, ಇ.ಇ. ಪುತ್ತೂರು ಮೆಸ್ಕಾಂ, ಎ.ಇ. ಸುಳ್ಯ ಮೆಸ್ಕಾಂ, ಜೆ.ಇ.ಸುಳ್ಯ ಮೆಸ್ಕಾಂ ಇವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ತೆರವುಗೊಳಿಸಿಲ್ಲ.
Related Articles
Advertisement
ಸ್ಥಳಕ್ಕೆ ಭೇಟಿ ನೀಡಿದ ಮೆಸ್ಕಾಂಟಿ.ಸಿ. ತೆರವುಗೊಳಿಸಲು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತೆರವುಗೊಳಿಸುವ ಭರವಸೆ ನೀಡಿದ್ದರು. ಕಳೆದ ಶನಿವಾರ ಕೆಲಸಗಾರರು ಟಿ.ಸಿ. ತೆರವುಗೊಳಿಸಲು ಆಗಮಿಸಿದ್ದಾರೆ. ಬೇರೆ ಜಾಗಕ್ಕೆ ವರ್ಗಾವಣೆ ಮಾಡಲು ಕೇಳಿದಾಗ ಜಾಗದ ಮಾಲಕರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಅಧಿಕಾರಿಗಳಿಂದ ಧನಾತ್ಮಕ ಪ್ರತಿಕ್ರಿಯೆ ದೊರತಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಟ್ರಾನ್ಸ್‌ಫಾರ್ಮರ್ ಇದುವರೆಗೆ ತೆರವುಗೊಳಿಸಲಿಲ್ಲ ಎಂದು ನಾರ್ಣಪ್ಪ ಹೇಳಿದ್ದಾರೆ. ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಮೆಸ್ಕಾಂ ತತ್‌ಕ್ಷಣ ಕಾರ್ಯಪ್ರರ್ವತ್ತರಾಗಬೇಕಿದೆ. ಶೀಘ್ರ ಟಿ.ಸಿ. ತೆರವು
ಟಿ.ಸಿ. ಸ್ಥಳ ಬದಲಿಕೆಗೆ ಸ್ಥಳೀಯರ ಆಕ್ಷೇಪವಿದೆ. ಹೀಗಾಗಿ ಬೇರೆ ಜಾಗವನ್ನು ನೋಡಿ ತೆರವು ಕಾರ್ಯ ಮಾಡಬೇಕಿದೆ. ಆದಷ್ಟು ಬೇಗ ಟಿ.ಸಿ. ಅಲ್ಲಿಂದ ತೆರವುಗೊಳಿಸಲಾಗುವುದು. – ಹರೀಶ್ ಎ.ಇ. ಮೆಸ್ಕಾಂ, ಸುಳ್ಯ ಶಿವಪ್ರಸಾದ್ ಮಣಿಯೂರು