Advertisement
ಪ್ರಸ್ತುತ ಕುಂಟಿನಿ ಕಿ.ಪ್ರಾ. ಶಾಲೆ ಏಕೋಪಾಧ್ಯಾಯ ಶಾಲೆಯಂತಾಗಿದೆ. ಐದು ತರಗತಿಗಳಲ್ಲಿ ಒಟ್ಟು 56 ವಿದ್ಯಾರ್ಥಿಗಳಿದ್ದಾರೆ. ಕಳೆದ ನಾಲ್ಕೈದು ತಿಂಗಳಿನಿಂದ ಇತ್ತೀಚಿನವರೆಗೂ ಶಾಲೆಯ ಮುಖ್ಯೋಪಾಧ್ಯಾಯರೇ ತರಗತಿಗಳನ್ನು ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಒಬ್ಬ ಅತಿಥಿ ಶಿಕ್ಷಕಿಯ ನೇಮಕವಾಗಿದೆಯಾದರೂ ಸಮಸ್ಯೆ ಬಗೆಹರಿದಿಲ್ಲ. ಮುಖ್ಯ ಶಿಕ್ಷಕರಿಗೆ ವಿವಿಧೆಡೆ ಸಭೆಗಳಿಗೆ ತೆರಳಬೇಕಾಗಿ ಬಂದಲ್ಲಿ ಶಾಲೆಯಲ್ಲಿ ಅತಿಥಿ ಶಿಕ್ಷಕರು ಮಾತ್ರ ಲಭ್ಯರಿರುತ್ತಾರೆ.ಶಾಲೆಯಲ್ಲಿ ಒಟ್ಟು ಮೂರು ಜನ ಶಿಕ್ಷಕರಿದ್ದರು. ಒಬ್ಬರಿಗೆ ಪುಂಜಾಲಕಟ್ಟೆ ಶಾಲೆಗೆ ವರ್ಗಾವಣೆಯಾದರೆ ಮತ್ತೂಬ್ಬ ಶಿಕ್ಷಕರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದರು. ಬಳಿಕ ಮುಖ್ಯ ಶಿಕ್ಷಕರೇ ಎಲ್ಲವನ್ನೂ ನಿಭಾಯಿಸುತ್ತಿದ್ದರು.
ಶಿಕ್ಷಕರ ವರ್ಗಾವಣೆಯಾದ ಬಳಿಕ ಮುಖ್ಯಶಿಕ್ಷರು ಒಬ್ಬರೇ ಎಲ್ಲ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಇಲಾಖೆಯ ಸಭೆಗಳು ಇದ್ದ ದಿನ ಅಲ್ಲಿಗೆ ತೆರಳಬೇಕಾದ ಕಾರಣ ಶಾಲೆಯಲ್ಲಿ ಇರಲಾಗದೆ ಬೇರೆ ಕಡೆಯಿಂದ ಶಿಕ್ಷಕರನ್ನು ನಿಯೋಜಿಸಿ ಕೊಳ್ಳುತ್ತಿದ್ದರು. ಮಕ್ಕಳಿಗೆ ಶಾಲಾ ಪಠ್ಯ ಪುಸ್ತಕ ತರಬೇಕಾದರೂ ಇದೇ ಸ್ಥಿತಿ. ಈ ಸ್ಥಿತಿಯಲ್ಲಿ ಎಸ್.ಡಿ.ಎಂ.ಸಿ. ವತಿಯಿಂದ ತಾತ್ಕಾಲಿಕ ಶಿಕ್ಷಕಿಯನ್ನು ನೇಮಿಸಲಾಯಿತು. ಬಳಿಕ ಶಿಕ್ಷಣ ಇಲಾಖೆ ವತಿಯಿಂದ ಅತಿಥಿ ಶಿಕ್ಷಕಿಯನ್ನು ನೇಮಿಸಲಾಗಿದೆ. ಶಾಲೆಯಲ್ಲಿ ಬಾಲಕರ ಶೌಚಾಲಯಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲ. ಶಾಲೆಯ ಸುತ್ತ ಅರ್ಧ ಮಾತ್ರ ಆವರಣ ಗೋಡೆ ಇದ್ದು ಉಳಿದರ್ಧ ಕಾಮಗಾರಿ ನಡೆಯಬೇಕಿದೆ. ಅಲ್ಲದೆ ಪೀಠೊಪಕರಣಗಳ ಕೊರತೆಯೂ ಈ ಶಾಲೆಯಲ್ಲಿದೆ.
– ಚಂದ್ರಶೇಖರ್ ಎಸ್.ಅಂತರ
Related Articles
ಕುಂಟಿನಿ ಕಿ.ಪ್ರಾ. ಶಾಲೆಗೆ ಸ್ಥಳೀಯ ಮಕ್ಕಳು ಹೋಗುತ್ತಾರೆ. ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ದೊರೆಯುತ್ತಿದೆ. ಆದರೆ ಇತ್ತೀಚಿನದಿನಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಶಿಕ್ಷಣ ಇಲಾಖೆಯು ಈ ಬಗ್ಗೆ ಕ್ರಮಕೈಗೊಂಡು ಶೀಘ್ರ ಪೂರ್ಣಕಾಲಿಕ ಶಿಕ್ಷಕರನ್ನು ನೇಮಿಸಬೇಕು.
– ಗಂಗಾಧರ ಶೆಟ್ಟಿ,ಕುಂಟಿನಿ ಮನೆ, ಉಜಿರೆ
Advertisement