Advertisement

Kundapura: ಕಾಲು ಜಾರಿ ಹೊಳೆಗೆ ಬಿದ್ದು ಮಹಿಳೆ ಮೃತ್ಯು

10:54 PM Apr 14, 2024 | Team Udayavani |

ಕುಂದಾಪುರ: ಕೋಣಿಯ ಮಲ್ಲನಬೆಟ್ಟು ಹೊಳೆಗೆ ಸಿಗಡಿ ಮೀನು ಹೆಕ್ಕಲು ಹೋಗಿದ್ದ ಕೋಣಿಯ ವನಜಾ (53) ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಎ. 14ರಂದು ಬೆಳಗ್ಗೆ ಸಂಭವಿಸಿದೆ.

Advertisement

ನೀರಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಪತಿ ವಾಸು ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next