Advertisement
ಕುಂದಾಪುರ ತಾಲೂಕಿನ 45 ಗ್ರಾ.ಪಂ. ಪೈಕಿ 20 ಗ್ರಾ.ಪಂ.ಗಳ 30 ಹಾಗೂ ಬೈಂದೂರು ತಾಲೂಕಿನ 15 ಗ್ರಾ.ಪಂ. ಪೈಕಿ 9 ಗ್ರಾ.ಪಂ.ಗಳ 13 ಅಮೃತ ಸರೋವರಗಳ ಬಳಿ ಈ ವೀರ ಯೋಧರ ಶಿಲಾಫಲಕ ಅನಾವರಣಗೊಳ್ಳಲಿದೆ. ಈ ಶಿಲಾಫಲಕದಲ್ಲಿ “ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳು’ ಎನ್ನುವುದಾಗಿ ವೀರ ಯೋಧರಿಗೆ ಗೌರವ ಸೂಚಿಸುವ ಬರವಣಿಗೆಯಿದ್ದು, ಇದರೊಂದಿಗೆ ಬಸವಣ್ಣನವರ ವಚನ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದೇಶವಿದೆ.
ಆಲೂರಿನ ತಾರಿಕೊಡ್ಲು ಕೆರೆ, ಕೊಪ್ಪಾಟೆ ಕೆರೆ, ಹೊರ್ನಿ ಕೆರೆ, ಕಾಳಾವರದ ಕಾಮಕೊಡ್ಲು ಮದಗ, ಬಸ್ರೂರಿನ ಹಲವರ ಕೆರೆ, ಬೀಜಾಡಿಯ ಬೆಳ್ಳಂಕಿಕೆರೆ, ನೀರಸ್ವಾಲೆ ಕೆರೆ, ಬೇಳೂರಿನ ಗುಮ್ಮಿಕೆರೆ, ಚಿತ್ತೂರಿನ ಜೆಡ್ಡುಕೆರೆ, ಹಕ್ಲಾಡಿಯ ಅಂಬಲಾಡಿ ಕೆರೆ, ಕರಣಿಕರ ಮನೆ ಕೆರೆ, ನೂಜಾಡಿ ಹೋರಿ ಹೊಂಡದ ಕೆರೆ, ಕುಂದಬಾರಂದಾಡಿಯ ಕುಂದದಗುಡ್ಡೆ ಕೆರೆ, ಯಡಾಡಿ- ಮತ್ಯಾಡಿ ಮದಗ, ಹೊಸಾಡಿನ ಅರಾಟೆ ತೋಪಿನಕೆರೆ, ಇಡೂರು ಕುಂಜ್ಞಾಡಿಯ ಕಮ್ಮಾರಕಲ್ಲು ಕೆರೆ, ಕಟ್‌ಬೆಲ್ತೂ ರಿನ ಹೊಯಿಗೆ ಕೆರೆ, ಮಸಿಕೊಡ್ಲು ಕೆರೆ, ಕಾವ್ರಾಡಿಯ ಕಾಶಿ ಕೆರೆ, ಬಸ್ರೂರಿನ ಕೊಳ್ಕಿ ಕೆರೆ, ಮೊಳಹಳ್ಳಿಯ ಕೋಡೆಕೆರೆ, ಸಿದ್ದಾಪುರದ ಬ್ರಹ್ಮನ ಕೆರೆ, ತಲ್ಲೂರಿನ ಹೊಸ್ಕೆರೆ, ತೆಕ್ಕಟ್ಟೆಯ ಕನ್ನುಕೆರೆ, ವಂಡ್ಸೆಯ ಕುಪ್ಪ ಗಾಣಿಗ ಕೆರೆ, ಆಜ್ರಿಯ ಹೊಳಂದೂರು ಕೆರೆ, ಕಂದಾವರ 2 ಕೆರೆ, ಗುಜ್ಜಾಡಿಯ ಕೆಸಿಡಿಸಿ ಬಳಿ ಹೊಸಕೆರೆ.
Related Articles
ಗೋಳಿಹೊಳೆಯ ಕಾಂಬ್ಳಿಕೆರೆ, ನಡುಮನೆ ಕೆರೆ, ಹೇರೂರಿನ ತುಂಬಿಕೆರೆ, ಅಣ್ಣೋಳೆಕೆರೆ, ಕಾಲ್ತೋ ಡಿನ ನೀರ್‌ಕೊಡ್ಲು ಮದಗ, ಮೆಟ್ಟಿನಹೊಳೆ ಕೆರೆ, ಕಿರಿಮಂಜೇಶ್ವರದ ಹಕ್ರೆಮಠ ಕೆರೆ, ನಾಡದ ಬೆಳ್ಳಾಡಿ ಮೇಲ್ಕೆರೆ ಕೆರೆ, ಬಡಾಕೆರೆಯ ಅಂಗನವಾಡಿ ಬಳಿಯ ಕೆರೆ, ಶಿರೂರಿನ ಕುಂಬ್ರಿಕೊಡ್ಲು ಕೆರೆ, ಮರವಂತೆಯ ಗೋರಿಕೆರೆ, ಜಡ್ಕಲ್- ಮುದೂರಿನ ಹಳಕಟ್ಟೆ ಕೆರೆ, ಉಪ್ಪುಂದದ ತೆಂಕ ಕೆರೆಗಳ ಬಳಿ ಈ ಶಿಲಾಫಲಕ ಅನಾವರಣಗೊಳ್ಳಲಿದೆ.
Advertisement
ವಿವಿಧ ಕಾರ್ಯಕ್ರಮ ಇದರೊಂದಿಗೆ ದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ನಿರ್ಮಾಣವಾಗಲಿರುವ “ಅಮೃತ್ ವಾಟಿಕಾ’ (ಅಮೃತ ಉದ್ಯಾನ) ಕ್ಕೆ ಪ್ರತೀ ಪಂಚಾಯತ್‌ನಿಂದ ಮಣ್ಣನ್ನು ಸಂಗ್ರಹಿಸಿ ದಿಲ್ಲಿಗೆ ಕಳುಹಿಸುವ ಕಾರ್ಯ, ಪ್ರತೀ ಪಂಚಾಯತ್ ಸೂಕ್ತವೆನಿಸಿದ 75 ಗಿಡ ನೆಟ್ಟು ಅಮೃತ ಉದ್ಯಾನವನ ನಿರ್ಮಿಸಬೇಕು. “ಪಂಚ ಪ್ರಾಣ ಪ್ರತಿಜ್ಞಾ’, “ವಸುಧಾ ವಂದನ್’ (ಭೂಮಿಗೆ ನಮಸ್ಕಾರ), “ವೀರೋಂಕಾ ವಂದನ್’ (ವೀರರಿಗೆ ವಂದನೆ) ಕಾರ್ಯವೂ ಪಂಚಾಯತ್‌ಗಳಲ್ಲಿ ನಡೆಯಲಿದೆ.
ಎಲ್ಲ ಗ್ರಾ.ಪಂ.ಗಳಲ್ಲಿ ಶಿಲಾಫಲಕಒಟ್ಟು 43 ಕೆರೆಗಳ ಬಳಿ ಶಿಲಾಫಲಕ ಅನಾವರಣಗೊಳ್ಳಲಿದೆ. ಅಮೃತ ಸರೋವರ ಇಲ್ಲದ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಎಲ್ಲಿಯಾದರೂ ಒಂದು ಕಡೆ ಹಾಕುವಂತೆ ತಿಳಿಸಲಾಗಿದೆ. ಬಹುತೇಕ ಎಲ್ಲ ಕಡೆಗಳಲ್ಲಿ ಆ. 15 ರಂದು ಈ ಕಾರ್ಯ ಆಗಲಿದೆ. ಇದರೊಂದಿಗೆ ಎಲ್ಲ ಗ್ರಾ.ಪಂ.ಗಳಲ್ಲಿ ಮೂಲಭೂತ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಗ್ರಾಮಸ್ಥರಿಗೆ ಕಾನೂನು ಅರಿವು ಸಹಿತ ವಿವಿಧ ಕಾರ್ಯಕ್ರಮ ನಡೆಯಲಿದೆ.
ಭಾರತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ,
ಕುಂದಾಪುರ ಹಾಗೂ ಬೈಂದೂರು