Advertisement

ತಲ್ಲೂರು : ಕತ್ತಲ ಸಂಚಾರಕ್ಕೆ ಇನ್ನೂ ಸಿಗದ ಮುಕ್ತಿ…!

07:55 PM Mar 15, 2020 | Sriram |

ತಲ್ಲೂರು: ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಜಂಕ್ಷನ್‌ನಲ್ಲಿ ಇನ್ನೂ ಕೂಡ ಬೀದಿ ದೀಪದ ವ್ಯವಸ್ಥೆಯನ್ನು ಅಳವಡಿಸಿಲ್ಲ. ಕೊಲ್ಲೂರು, ಬೈಂದೂರು, ಕುಂದಾಪುರ ಮತ್ತಿತತರೆಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ ಇದಾಗಿದೆ.

Advertisement

ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ಜಂಕ್ಷನ್‌ ಆಗಿ ರುವ ತಲ್ಲೂರಿನಲ್ಲಿ ಬೀದಿದೀಪವಿಲ್ಲದೆ ರಾತ್ರಿ ವೇಳೆ ಸ್ಥಳೀಯ ವಾಹನ ಸವಾರರು, ಪಾದಚಾರಿಗಳು ರಸ್ತೆ ದಾಟುವ ವೇಳೆ ಭಾರೀ ಸಮಸ್ಯೆ ಅನು ಭವಿಸುವಂತಾಗಿದೆ. ಹೆದ್ದಾರಿ ದಾಟುವ ಜನರು ವೇಗವಾಗಿ ಬರುವ ವಾಹನ ಸವಾರರಿಗೆ ಕಾಣದ ಸ್ಥಿತಿ ಇಲ್ಲಿಯದು.

ಬೀದಿದೀಪದ ಸಮಸ್ಯೆ ಮಾತ್ರವಲ್ಲದೆ, ಇಲ್ಲಿ ಎರಡು ಕಡೆಗಳಲ್ಲೂ ಇನ್ನೂ ಸರ್ವಿಸ್‌ ರಸ್ತೆ ಬೇಡಿಕೆ ಈಡೇರಿಲ್ಲ. ಮೊದಲಿದ್ದ ಬಸ್‌ ನಿಲ್ದಾಣಗಳನ್ನು ಕಾಮಗಾರಿ ಸಲುವಾಗಿ ತೆಗೆದಿದ್ದು, ಈಗ ಕಾಮಗಾರಿ ಪೂರ್ಣಗೊಂಡರೂ, ಬಸ್‌ ನಿಲ್ದಾಣವಿಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸುಡುವ ಬಿಸಿಲಿನಲ್ಲಿ ಬಸ್ಸಿಗಾಗಿ ಕಾಯುವ ಜನ ನಿತ್ಯ ಯಾತನೆ ಪಡುವಂತಾಗಿದೆ.

ಇನ್ನೂ ಹೆದ್ದಾರಿ ಸಮೀಪ ಐಆರ್‌ಬಿಯವರೇ ನಿರ್ಮಿಸಿದ ಕೃತಕ ಕೆರೆಯನ್ನು ಇನ್ನೂ ಮುಚ್ಚಿಲ್ಲ. ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಸೃಷ್ಟಿಸುವ ಸಂಭವವಿದೆ.

ಉದಯವಾಣಿ ವರದಿ
ಹೇರಿಕುದ್ರುವಿನಲ್ಲಿ ಅಂಡರ್‌ಪಾಸ್‌ ಕೆಳಗೆ ಬೆಳಕಿಲ್ಲ, ತಲ್ಲೂರಿನಲ್ಲಿ ಬೀದಿ ದೀಪ ಅಳವಡಿಕೆಗೆ ಬೇಡಿಕೆ, ಹೆಮ್ಮಾಡಿಯಲ್ಲಿ ಸರ್ವಿಸ್‌ ರಸ್ತೆ ಬೇಡಿಕೆ ಕುರಿತಾದ ಸಮಗ್ರ ವರದಿ “ಉದಯವಾಣಿ ಸುದಿನ’ವು ಫೆ.21 ರಂದು ಪ್ರಕಟಿಸಿತ್ತು. ಆದರೆ ಬೀದಿ ದೀಪದ ವ್ಯವಸ್ಥೆ ಬಗ್ಗೆ ಗಮನಹರಿಸಲಾಗುವುದು ಎಂದು ಆಗ ಭರವಸೆ ನೀಡಿದ್ದ ಎಸಿ ಹಾಗೂ ಐಆರ್‌ಬಿ ಸಂಸ್ಥೆಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದು ತಲ್ಲೂರಿನ ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ಬೀದಿದೀಪ ಅಳವಡಿಸಿಲ್ಲ
ಕುಂದಾಪುರದಿಂದ ಶಿರೂರುವರೆಗಿನ 43 ಕಿ.ಮೀ. ವರೆಗಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಿ ಐಆರ್‌ಬಿ ಸಂಸ್ಥೆಯು ಶಿರೂರಿನಲ್ಲಿ ಟೋಲ್‌ ಸಂಗ್ರಹವನ್ನು ಆರಂಭಿಸಿದೆ. ಆದರೆ ಇನ್ನೂ ಕೂಡ ತಲ್ಲೂರಿನಲ್ಲಿ ಬೀದಿ ದೀಪ ಅಳವಡಿಸಿಲ್ಲ. ಹೆಮ್ಮಾಡಿಯಲ್ಲಿ ಸರ್ವಿಸ್‌ ರಸ್ತೆ ಬೇಡಿಕೆ ಈಡೇರಿಲ್ಲ. ಇನ್ನು ಯಾವಾಗ ಮಾಡುವುದು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next