Advertisement
ನೆಂಪುವಿನಿಂದ ನೇರಳಕಟ್ಟೆಯವರೆಗಿನ ಸುಮಾರು 4-5 ಕಿ.ಮೀ. ದೂರದ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ಚರಂಡಿವ್ಯವಸ್ಥೆಯಿಲ್ಲದೆ, ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಇದರಿಂದ ರಸ್ತೆಯ ಬಹುತೇಕ ಕಡೆಗಳಲ್ಲಿ ಡಾಮರೆಲ್ಲ ಎದ್ದು ಹೋಗಿದೆ. ಇದಲ್ಲದೆ ಕೆಲವೆಡೆಯಂತೂ ಬೃಹತ್ ಹೊಂಡಗಳು ರಸ್ತೆ ಮಧ್ಯೆಯಿದ್ದು, ದ್ವಿಚಕ್ರ ಸವಾರರಂತೂ ಪ್ರಯಾಸಪಡುವಂತಾಗಿದೆ.
ಪ್ರಮುಖವಾಗಿ ಇದು ಪ್ರಸಿದ್ಧ ಯಾತ್ರ ಸ್ಥಳಗಳಾದ ಕೊಲ್ಲೂರು ಹಾಗೂ ಶೃಂಗೇರಿಯನ್ನು ಸಂಪರ್ಕಿಸುವ ರಸ್ತೆಯಾಗಿದೆ. ಇದಲ್ಲದೆ ವಂಡ್ಸೆ, ನೆಂಪುವಿನಿಂದ ನೇರಳಕಟ್ಟೆ, ಅಂಪಾರಿಗೆ, ಸೌಕೂರು, ಕಾವ್ರಾಡಿಗೆ ತೆರಳಲು ಜನ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಕೊಲ್ಲೂರಿನಿಂದ ನೇರಳಕಟ್ಟೆ ಮಾರ್ಗವಾಗಿ ಕುಂದಾಪುರಕ್ಕೆ, ಕೊಲ್ಲೂರಿನಿಂದ ಹಾಲಾಡಿ, ಹೆಬ್ರಿಗೆ ಇದೇ ಮಾರ್ಗವಾಗಿ ಅನೇಕ ಬಸ್ ಗಳು ಸಂಚರಿಸುತ್ತವೆ. ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಾಗಿದೆ.
Related Articles
ಹೊಂಡಮಯ ರಸ್ತೆಯಿಂದಾಗಿ ಬೈಕ್, ಇನ್ನಿತರ ದ್ವಿಚಕ್ರ ವಾಹನಗಳಲ್ಲಿ ಅಂತೂ ಸಂಚರಿಸಲು ಸಾಧ್ಯವಿಲ್ಲ. ಜೀವ ಕೈಯಲ್ಲಿಯೇ ಹಿಡಿದುಕೊಂಡು ಸಂಚರಿಸುವಂತಾಗಿದೆ. ಅನೇಕ ಸಮಯದಿಂದ ಈ ರಸ್ತೆ ಅಭಿವೃದ್ಧಿಯಾಗದೇ ಬಾಕಿ ಉಳಿದಿದ್ದು, ಆದಷ್ಟು ಬೇಗ ಈ ರಸ್ತೆಯ ದುರಸ್ತಿ ಮಾಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement