Advertisement
ಕುಂದಾಪುರ: ಈಗ ಪ್ರತಿಯೊಂದು ಕೂಡ ಡಿಜಿಟಲ್ ಆಗಿದೆ. ಸಂಪರ್ಕ, ಸಂವಹನ, ಶಿಕ್ಷಣ, ಉದ್ಯೋಗಗಳೆಲ್ಲವೂ ಮೊಬೈಲ್ ನೆಟ್‌ವರ್ಕ್ ಅನ್ನೇ ಪ್ರಧಾನವಾಗಿ ನಂಬಿಕೊಂಡಿವೆ. ಕೇಂದ್ರ ಸರಕಾರ ಕೂಡ ಡಿಜಿಟಲ್ ಇಂಡಿಯಾದ ಬಗ್ಗೆ ಸಾಕಷ್ಟು ಪ್ರಚಾರ ಮಾಡುತ್ತಿದೆ. ಆದರೆ ಹಲವಾರು ಹಳ್ಳಿಗಳು ಡಿಜಿಟಲ್ ಸೇವೆಗಳಿಲ್ಲದೆ ಸೌಲಭ್ಯಗಳಿಂದ ವಂಚಿತವಾಗಿದೆ. ಅದರಲ್ಲೂ ಮುಖ್ಯವಾಗಿ ಸರಕಾರದ ನಾನಾ ಸೌಲಭ್ಯಗಳ ಡಿಜಿಟಲೀಕರಣದ ಭರಾಟೆಯಲ್ಲಿ ಹಳ್ಳಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕೇಂದ್ರ ಸರಕಾರ ಡಿಜಿಟಲ್ ಇಂಡಿಯಾಗಾಗಿ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಮಾಡಿದೆ. ಈಚಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಳ ಸಂಖ್ಯೆಯನ್ನು ವೃದ್ಧಿಸಲಾಗುತ್ತಿದೆ. ಐಟಿ ಇ-ಗವರ್ನೆನ್ಸ್ ಸೇವೆಗಳು ಇ-ಗವರ್ನೆನ್ಸ್ ಎಂಬ ಪರಿಕಲ್ಪನೆ ಸಾಧಿ ಸಲು ಮತ್ತು ಡಿಜಿಟಲ್ ಸೇವೆಗಳ ಮೂಲಕ ಸರಕಾರದ ಸೌಲಭ್ಯಗಳನ್ನು ನಾಗರಿಕರಿಗೆ ತಲುಪಿಸಲು ಹಲವು ಯೋಜನೆಗಳನ್ನು ಕೇಂದ್ರ ಸರಕಾರ ರೂಪಿಸಿದೆ. ಡಿಜಿಟಲ್ ಇಂಡಿಯಾ ಯೋಜನೆ 2015ರಲ್ಲಿ ಪ್ರಾರಂಭವಾಗಿದೆ. ಭಾರತದ ಡಿಜಿಟಲ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಡಿಜಿಟಲ್ ಸೇವೆಗಳನ್ನು ಜನತಾ ಮಟ್ಟಕ್ಕೆ ತಲುಪಿಸಲು ಕೇಂದ್ರ ಸರಕಾರ ಕೈಗೊಂಡ ಪ್ರಮುಖ ಹೆಜ್ಜೆ. ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತೆ ಅಭಿಯಾನ ಯೋಜನೆ 2017ರಲ್ಲಿ ಪ್ರಾರಂಭಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಿಸಲು ಗುರಿಯಿಡುತ್ತದೆ. ಭಾರತ್‌ನೆಟ್ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಒದಗಿಸುತ್ತದೆ. ಆದರೆ, ಹಲವಾರು ಹಳ್ಳಿಗಳಿಗೆ ಇದು ಇನ್ನೂ ತಲುಪಿಲ್ಲ.
Related Articles
Advertisement
ಎಲ್ಲೆಲ್ಲಿ ಅತೀ ಹೆಚ್ಚು ಸಮಸ್ಯೆ?ಕುಂದಾಪುರದ ಮಡಾಮಕ್ಕಿ, ಅಮಾಸೆಬೈಲು, ಕಮಲಶಿಲೆ, ಯಳಬೇರು, ಬೈಂದೂರು ತಾಲೂಕಿನ ಹಳ್ಳಿಹೊಳೆ, ಯಡಮೊಗೆ, ಹೊಸಂಗಡಿಯ ಭಾಗಿಮನೆ, ಸೆಳ್ಕೋಡು, ಗೋಳಿಹೊಳೆ, ಕಾಲ್ತೋಡು, ಕೆರಾಡಿಯ ಹಯ್ಯಂಗಾರ್, ಬೋಳಂಬಳ್ಳಿ, ಗಂಗಾನಾಡು, ಹೇರೂರು, ಕಾರ್ಕಳ ತಾಲೂಕಿನ ಮಾಳ, ಈದು, ನೂರಾಳಬೆಟ್ಟು, ಹೆಬ್ರಿ ತಾಲೂಕಿನ ನಾಡ್ಪಾಲು, ಕೂಡ್ಲು, ಕಬ್ಬಿನಾಲೆ, ಶೇಡಿಮನೆ ಹೀಗೆ ಅನೇಕ ಕಡೆ ನೆಟ್‌ವರ್ಕ್ ಸಮಸ್ಯೆ ಇದೆ. ನೆಟ್‌ವರ್ಕ್ ಇಲ್ಲದೆ ವರ್ಕೇ ಆಗುವುದಿಲ್ಲ!
ವಂಡ್ಸೆ, ಕೆರಾಡಿ, ಚಿತ್ತೂರು ನಡುವೆ ಇರುವ ಹೊಸೂರು ಗ್ರಾಮದ ಕಾನ್‌ಬೇರು ಎಂಬಲ್ಲಿ ಬಿಎಸ್‌ಎನ್‌ಎಲ್ ಟವರ್ ಕಾಮಗಾರಿ ಕಳೆದ 2 ವರ್ಷಗಳಿಂದ ಕುಂಟುತ್ತಾ ಸಾಗಿದ ಕಾರಣ ಜನ ಕರೆಗಾಗಿ ಮರ, ಗುಡ್ಡ ಏರುವ ಸ್ಥಿತಿ ಬಂದಿದೆ. ಕದಳಿ, ಹೊಸೂರು, ಮೇಲ್‌ಹೊಸೂರು, ಕೆಳ ಹೊಸೂರು ಭಾಗದ 585 ಮನೆಗಳಿಗೆ ನೆಟ್‌ವರ್ಕ್ ಸಿಗುವುದಿಲ್ಲ. ಹಳ್ಳಿಹೊಳೆ ಪರಿಸರದಲ್ಲಿ ಇಡೀ ಊರಿನಲ್ಲಿ ಸ್ಥಳೀಯರೇ ಸೇರಿ ಬಿಎಸ್‌ಎನ್‌ಎಲ್ ಸಹಕಾರದಲ್ಲಿ ಏರ್‌ಫೈಬರ್ ಸಿಸ್ಟಂ ಅಳವಡಿಸಿ ಊರಿಗೆ ಸಿಗ್ನಲ್ ಬರುವಂತೆ ಮಾಡಿದರು. ಇಲ್ಲಿನ ಚಕ್ರಾ ಮೈದಾನ, ದೇವರಬಾಳು, ಕಮ್ಮರಪಾಲು, ಹಳ್ಳಿಬೈಲು ಮೊದಲಾದೆಡೆಯ 23 ಮನೆಗಳು ಇದನ್ನು ಅಳವಡಿಸಿದ್ದು ಮೊದಲ ಪ್ರಯೋಗ ಎನಿಸಿದೆ. ಸಿಗ್ನಲ್ ದೊರೆಯಲು ಯಾವುದೇ ರಾಜಕಾರಣಿ ಪ್ರಯತ್ನ ಮಾಡಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಂಗಡಿಯ ಭಾಗಿಮನೆ ಗ್ರಾಮಸ್ಥರು ಕಳೆದ ವರ್ಷ ಚುನಾವಣ ಬಹಿಷ್ಕಾರಕ್ಕೆ ಮುಂದಾಗಿದ್ದರು. 70ಕ್ಕೂ ಅಧಿಕ ಪರಿಶಿಷ್ಟರ ಮನೆಗಳಿದ್ದು ಅನಾರೋಗ್ಯ ಉಂಟಾದರೆ ಕರೆ ಮಾಡಲು ದೂರದ ಗುಡ್ಡಕ್ಕೆ ಓಡಬೇಕು ಎಂಬ ಸ್ಥಿತಿ ಹೊಂದಿದ್ದಾರೆ. ಹೆಬ್ರಿ ತಾಲೂಕಿನ ಮಡಾಮಕ್ಕಿಯಲ್ಲಿ 5ಜಿ ಯುಗದಲ್ಲೂ ಸಿಗ್ನಲ್ ಸಿಗದೇ ಮಕ್ಕಳು ಕೋವಿಡ್ ಸಂದರ್ಭ ಆನ್‌ಲೈನ್ ಶಿಕ್ಷಣಕ್ಕಾಗಿ ಗುಡ್ಡದ ಮರದ ಬುಡದಲ್ಲಿ ಆನ್‌ಲೈನ್ ಕ್ಲಾಸ್‌ಗೆ ಹಾಜರಾದದ್ದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು. ಇಲ್ಲಿಗೆ ಇನ್ನೂ ನೆಟ್ವರ್ಕ್ ಸಿಕ್ಕಿಲ್ಲ. ಹಂಜ ಹಾಗೂ ಬೆಪ್ಡೆ ಭಾಗದ ಗ್ರಾಮಸ್ಥರಿಗೆ ನೆರವಾಗಲೆಂದು ಹಾಕಿದ ಟವರ್ ನಿರ್ಮಾಣ ಕಾರ್ಯ ಪೂಣìಗೊಂಡಿಲ್ಲ. ನೆಟ್‌ವರ್ಕ್ ಸಮಸ್ಯೆ: ಕಾರಣ ಹಲವು
ಪ್ರಕರಣ 1: ವಂಡ್ಸೆ, ಕೆರಾಡಿ, ಚಿತ್ತೂರು ನಡುವೆ ಇರುವ ಹೊಸೂರು ಗ್ರಾಮದ ಕಾನ್‌ಬೇರು ಎಂಬಲ್ಲಿ ಬಿಎಸ್‌ಎನ್‌ಎಲ್ ಟವರ್ ಕಾಮಗಾರಿ ಕಳೆದ 2 ವರ್ಷಗಳಿಂದ ಕುಂಟುತ್ತಾ ಸಾಗಿದ ಕಾರಣ ಜನ ಕರೆಗಾಗಿ ಮರ, ಗುಡ್ಡ ಏರುವ ಸ್ಥಿತಿ ಬಂದಿದೆ. ಕದಳಿ, ಹೊಸೂರು, ಮೇಲ್‌ಹೊಸೂರು, ಕೆಳ ಹೊಸೂರು ಭಾಗದ 585 ಮನೆಗಳಿಗೆ ನೆಟ್‌ವರ್ಕ್ ಸಿಗುವುದಿಲ್ಲ. ಪ್ರಕರಣ 2:ಹಳ್ಳಿಹೊಳೆ ಪರಿಸರದಲ್ಲಿ ಇಡೀ ಊರಿನಲ್ಲಿ ಸ್ಥಳೀಯರೇ ಸೇರಿ ಬಿಎಸ್‌ಎನ್‌ಎಲ್ ಸಹಕಾರದಲ್ಲಿ ಏರ್‌ಫೈಬರ್ ಸಿಸ್ಟಂ ಅಳವಡಿಸಿ ಊರಿಗೆ ಸಿಗ್ನಲ್ ಬರುವಂತೆ ಮಾಡಿದರು. ಇಲ್ಲಿನ ಚಕ್ರಾ ಮೈದಾನ, ದೇವರಬಾಳು, ಕಮ್ಮರಪಾಲು, ಹಳ್ಳಿಬೈಲು ಮೊದಲಾದೆಡೆಯ 23 ಮನೆಗಳು ಇದನ್ನು ಅಳವಡಿಸಿದ್ದು ಮೊದಲ ಪ್ರಯೋಗ ಎನಿಸಿದೆ. ಪ್ರಕರಣ 3: ಸಿಗ್ನಲ್ ದೊರೆಯಲು ಯಾವುದೇ ರಾಜಕಾರಣಿ ಪ್ರಯತ್ನ ಮಾಡಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಂಗಡಿಯ ಭಾಗಿಮನೆ ಗ್ರಾಮಸ್ಥರು ಕಳೆದ ವರ್ಷ ಚುನಾವಣ ಬಹಿಷ್ಕಾರಕ್ಕೆ ಮುಂದಾಗಿದ್ದರು. 70ಕ್ಕೂ ಅಧಿಕ ಪರಿಶಿಷ್ಟರ ಮನೆಗಳಿದ್ದು ಅನಾರೋಗ್ಯ ಉಂಟಾದರೆ ಕರೆ ಮಾಡಲು ದೂರದ ಗುಡ್ಡಕ್ಕೆ ಓಡಬೇಕು ಎಂಬ ಸ್ಥಿತಿ ಹೊಂದಿದ್ದಾರೆ. ಪ್ರಕರಣ 3: ಹೆಬ್ರಿ ತಾಲೂಕಿನ ಮಡಾಮಕ್ಕಿಯಲ್ಲಿ 5ಜಿ ಯುಗದಲ್ಲೂ ಸಿಗ್ನಲ್ ಸಿಗದೇ ಮಕ್ಕಳು ಕೋವಿಡ್ ಸಂದರ್ಭ ಆನ್‌ಲೈನ್ ಶಿಕ್ಷಣಕ್ಕಾಗಿ ಗುಡ್ಡದ ಮರದ ಬುಡದಲ್ಲಿ ಆನ್‌ಲೈನ್ ಕ್ಲಾಸ್‌ಗೆ ಹಾಜರಾದದ್ದು ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು. ಇಲ್ಲಿಗೆ ಇನ್ನೂ ನೆಟ್ವರ್ಕ್ ಸಿಕ್ಕಿಲ್ಲ. ಹಂಜ ಹಾಗೂ ಬೆಪ್ಡೆ ಭಾಗದ ಗ್ರಾಮಸ್ಥರಿಗೆ ನೆರವಾಗಲೆಂದು ಹಾಕಿದ ಟವರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ನೆಟ್‌ವರ್ಕ್ ಸಮಸ್ಯೆ: ಕಾರಣ ಹಲವು
– ಕೆಲವು ಕಡೆ ಮೊಬೈಲ್ ಟವರ್‌ಗಳೇ ಇಲ್ಲ. ಹೀಗಾಗಿ ನೆಟ್‌ವರ್ಕ್ ಚಾನ್ಸೇ ಇಲ್ಲ. – ಕೆಲವು ಕಡೆ ಟವರ್‌ಗಳು ಇವೆ. ಆದರೆ, ನೆಟ್‌ವರ್ಕ್ ತೀರಾ ದುರ್ಬಲವಾಗಿದೆ. – ಹೆಚ್ಚಿನ ಕಡೆ ಟವರ್‌ಗಳಿವೆ. ವಿದ್ಯುತ್ ಕಡಿತವಾದಾಗ ನೆಟ್‌ವರ್ಕ್ ಕೂಡ ಕಟ್. – ಒಂದು ಕಡೆ ಒಂದು ಕಂಪೆನಿ ನೆಟ್‌ವರ್ಕ್, ಇನ್ನೊಂದು ಕಡೆ ಇನ್ನೊಂದು ನೆಟ್‌ವರ್ಕ್. – ನೆಟ್‌ವರ್ಕ್ ಏನೋ ಸಿಗುತ್ತದೆ. ಆದರೆ, ದುರ್ಬಲವಾಗಿದ್ದರಿಂದ ಕಾಯುವುದೇ ಶಿಕ್ಷೆ. ಎಲ್ಲದಕ್ಕೂ ಬೇಕು ನೆಟ್‌ವರ್ಕ್!
– ಗ್ರಾಮೀಣ ಭಾಗದಲ್ಲಿ ಆರೋಗ್ಯ ಮತ್ತಿತರ ಸಮಸ್ಯೆಗಳು ಉಂಟಾದರೆ ಸಂಪರ್ಕಕ್ಕೆ ಮೊಬೈಲ್ ಬೇಕೇಬೇಕಾಗಿದೆ. – ಹಳ್ಳಿಗಳಲ್ಲಿ ಸರಕಾರಿ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಮೊಬೈಲ್ ಸಂಪರ್ಕ ಮತ್ತು ನೆಟ್ವರ್ಕ್ ಬೇಕಾಗಿದೆ. – ಕೃಷಿ ಮಾಹಿತಿ, ಆನ್‌ಲೈನ್ ತರಗತಿಯ ಶಿಕ್ಷಣ, ವರ್ಕ್ ಫ್ರಮ್ ಹೋಮ್ ಸೌಲಭ್ಯದ ಬಳಕೆಗೆ ಇದು ಅನಿವಾರ್ಯ. – ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಎಲ್ಲ ಸೌಲಭ್ಯಗಳು ಆನ್‌ಲೈನ್ ಆಧರಿತವಾಗಿವೆ. ಮಾಹಿತಿಗಳನ್ನು ಸ್ಥಳದಿಂದಲೇ ಅಪ್‌ಲೋಡ್ ಮಾಡಬೇಕಾಗಿರುತ್ತದೆ. – ನೆಟ್‌ವರ್ಕ್ ಇಲ್ಲದೆ ಸಹಕಾರಿ ಸಂಘ, ಬ್ಯಾಂಕ್, ಪಡಿತರ ಅಂಗಡಿಗಳು, ಪಂಚಾಯತ್ ಕಚೇರಿಗಳು ನಿತ್ಯ ಸಂಕಟ ಎದುರಿಸುತ್ತವೆ. – ಆಧಾರ್ ಪಾನ್‌ಲಿಂಕ್, ಆಧಾರ್ ಪಡಿತರ ಲಿಂಕ್ , ಆಧಾರ್-ಆರ್‌ಟಿಸಿ ಲಿಂಕ್ ಸೇರಿದಂತೆ ವೈಯಕ್ತಿಕವಾಗಿ ಮಾಡಬಹುದಾದ ಕೆಲಸಗಳಿಗೆ ಪೇಟೆಗೇ ಹೋಗಬೇಕು. – ಸರಕಾರಿ ಕಚೇರಿಗಳಲ್ಲಿ ನೆಟ್‌ವರ್ಕ್ ಸರಿ ಇಲ್ಲ ಎಂಬ ಕಾರಣಕ್ಕಾಗಿಯೇ ದಿನವಿಡೀ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. -ಲಕ್ಷ್ಮೀ ಮಚ್ಚಿನ