Advertisement

Kundapura ಆಸ್ಪತ್ರೆಗಿಲ್ಲ ಕ್ಯಾಂಟೀನ್‌; ರೋಗಿಗಳು, ಸಹಾಯಕರ ಪರದಾಟ

05:41 PM Aug 22, 2024 | Team Udayavani |

ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ಕ್ಯಾಂಟಿನ್‌ ಸೌಲಭ್ಯ ಇಲ್ಲ. ಇದರಿಂದ  ಒಳರೋಗಿಗಳು, ಅವರ ಸಹಾಯಕರು ಮತ್ತು ಹೊರರೋಗಿಗಳಾಗಿ ಬರುವವರಿಗೆ ಸಮಸ್ಯೆ ಆಗುತ್ತಿದೆ.

Advertisement

ಭಟ್ಕಳ, ಬ್ರಹ್ಮಾವರ, ಬೈಂದೂರು, ಹೆಬ್ರಿ ಸೇರಿದಂತೆ ಸುತ್ತಲ ಅನೇಕ ಊರುಗಳಿಂದ ಇಲ್ಲಿಗೆ ರೋಗಿಗಳು ಆಗಮಿಸುತ್ತಾರೆ. ಈ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಕಾಲವೂ ಚಿಕಿತ್ಸೆ ಲಭ್ಯವಿದೆ. ನಿತ್ಯ ಈ ಆಸ್ಪತ್ರೆಗೆ 450ಕ್ಕೂ ಹೆಚ್ಚು ಹೊರ ಮತ್ತು 110ರಷ್ಟು ಒಳ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ಹೆರಿಗೆಯಲ್ಲೂ ರಾಜ್ಯಮಟ್ಟದಲ್ಲಿ ಅತ್ಯಧಿಕ ಹೆರಿಗೆಯಾದ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿದೆ.

2018ರವರೆಗೆ ಈ ಆಸ್ಪತ್ರೆ ವಠಾರದಲ್ಲಿ  ಇದ್ದ ಕ್ಯಾಂಟೀನನ್ನು ಯಾವುದೋ ಕಾರಣಕ್ಕೆ ತೆರವು ಮಾಡಿದ್ದು, ಬಳಿಕ ಪುನರಾರಂಭ ಆಗಲಿಲ್ಲ. ತಾಯಿ ಮಕ್ಕಳ ಆಸ್ಪತ್ರೆಗೆ ಜಿ.ಶಂಕರ್‌ ಅವರಿಂದ 5 ಕೋ.ರೂ. ವೆಚ್ಚದಲ್ಲಿ ಉಚಿತವಾಗಿ ಕಟ್ಟಡ ನಿರ್ಮಾಣವಾಗಿದೆ. ಈ ಕಟ್ಟಡದಲ್ಲಿ ಕೂಡಾ ಕ್ಯಾಂಟಿನ್‌ ಸೌಲಭ್ಯವನ್ನು ಆಸ್ಪತ್ರೆ ಆಡಳಿತ ಮಾಡಲೇ ಇಲ್ಲ. ಈಗಲೂ ಆಸ್ಪತ್ರೆಯ ಆಹಾರ ವಿಭಾಗ ಹೊರತಾದರೆ ಹಣ ಪಾವತಿಸಿ ಆಹಾರ ಖರೀದಿಗೆ ಆಸ್ಪತ್ರೆ ವಠಾರದಲ್ಲಿ ವ್ಯವಸ್ಥೆ ಇಲ್ಲ.

ಕ್ಯಾಂಟೀನ್‌ಗೆ ಜಾಗ ಇದೆ
ಹಳೆ ಕ್ಯಾಂಟೀನ್‌ ಇದ್ದ ಜಾಗದಲ್ಲಿ ಈಗ ಹಾಲಿನ ಅಂಗಡಿ ಇದೆ. ಆದರೆ ಪಾರ್ಕಿಂಗ್‌ ತಾಣ ಸೇರಿದಂತೆ ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಪ್ರತ್ಯೇಕವಾದ ವಿಶಾಲ ಜಾಗವಿದೆ. ಈ ಹಿಂದೆ ಆಸ್ಪತ್ರೆಯೊಳಗೆ ಕ್ಯಾಂಟೀನ್‌ ರಚನೆ ಪ್ರಸ್ತಾವ‌ ಬಂದಾಗ ಆರೋಗ್ಯದ ಹಿತದೃಷ್ಟಿ, ಸ್ವತ್ಛತೆಯ ದೃಷ್ಟಿಯಿಂದ ಒಳಗೆ ಅವಕಾಶ ನೀಡಿರಲಿಲ್ಲ.

Advertisement

ಪ್ರಯತ್ನ ಇದೆ
ಆಸ್ಪತ್ರೆ ವಠಾರದಲ್ಲಿ ಕ್ಯಾಂಟೀನ್‌ ಬೇಕೆಂಬ ಬೇಡಿಕೆ ಇದೆ. ಪ್ರಸ್ತುತ ನಾನು ಅಧಿಕಾರ ವಹಿಸಿ ಹೆಚ್ಚು ಸಮಯ ಆಗಿಲ್ಲ. ಒಂದೊಂದೇ ಕೆಲಸ ಕಾರ್ಯಗಳ ಕುರಿತು ಗಮನ ಹರಿಸಿ ಕ್ಯಾಂಟೀನ್‌ ಸೌಕರ್ಯ ಮಾಡುವ ಪ್ರಯತ್ನ ನಡೆಯಲಿದೆ.
ಡಾ| ಚಂದ್ರ ಮರಕಾಲ, ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ, ಕುಂದಾಪುರ

ಯಾಕೆ ಬೇಕು ಕ್ಯಾಂಟೀನ್‌?
ರೋಗಿಗಳಿಗೆ ಇಲ್ಲಿ ಉಚಿತ ಆಹಾರ ನೀಡುತ್ತಾರಾದರೂ  ಅವರ ಜತೆಗೆ ಇರುವವರಿಗೆ ಆಹಾರ ಬೇಕು. ಅನೇಕರಿಗೆ ಆಸ್ಪತ್ರೆ ಆಹಾರ ಹೊರತಾದ ಆಹಾರದ ಅಗತ್ಯವಿರುತ್ತದೆ.

ಜ ಬೆಳಗ್ಗೆ 4 ಗಂಟೆಯಿಂದ ನಗರದಲ್ಲಿ ರೋಗಿಗಳ ಜತೆ ಬಂದವರು ಬಿಸಿನೀರು, ಚಹಾಗಾಗಿ ಅಲೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next