Advertisement
ಸಾಮಾನ್ಯವಾಗಿ ಹೆಮ್ಮಾಡಿ ಸೇವಂತಿಗೆ ಸೀಸನ್ ಎಪ್ರಿಲ್ ಆರಂಭದವರೆಗೆ ಇರುತ್ತದೆ. ಆದರೆ ಈ ಬಾರಿ ಬಹುತೇಕ ಬೇಗನೆ ಮುಗಿದಿದ್ದು, ಕೋವಿಡ್ 19 ಲಾಕ್‌ಡೌನ್‌ನಿಂದ 4-5 ಮಂದಿ ಕೃಷಿಕರಿಗೆ ಮಾತ್ರ ಸ್ವಲ್ಪ ತೊಂದರೆಯಾಗಿತ್ತು. ಮುಂದಿನ ಋತು ಆಗಸ್ಟ್‌ನಲ್ಲಿ ಆರಂಭವಾದರೂ, ಸುಡುಮಣ್ಣು ತಯಾರಿಯೆಲ್ಲ ಈಗಿನಿಂದಲೇ ಆರಂಭವಾಗುತ್ತದೆ ಎನ್ನುವುದಾಗಿ ಸೇವಂತಿ ಬೆಳೆಗಾರರಾದ ರಾಜು ಹೇಳಿದರು.
ಈ ಬಾರಿ ಮೋಡ, ಅಕಾಲಿಕ ಮಳೆ, ಚಳಿ ಕಡಿಮೆ ಇದ್ದ ಕಾರಣ ಸೇವಂತಿಗೆ ಸೀಸನ್ ಅಷ್ಟೇನು ಫಲಪ್ರದವಾಗಿರಲಿಲ್ಲ. ಹೆಚ್ಚಿನ ಬೆಳೆಗಾರರಿಗೆ ನಷ್ಟವೇ ಆಗಿದೆ. ಸರಕಾರ ಸೇವಂತಿಗೆ ಬೆಳೆಗಾರರಿಗೂ ಕೂಡ ನಷ್ಟ ಪರಿಹಾರ ನೀಡಬೇಕು ಎಂದು ಹೆಮ್ಮಾಡಿ ಬೆಳೆಗಾರರ ಸಂಘದ ಅಧ್ಯಕ್ಷ ಮಹಾಬಲ ದೇವಾಡಿಗ ಒತ್ತಾಯಿಸಿದ್ದಾರೆ.