Advertisement

ಕುಂದಾಪುರ ತಾಲೂಕಿನ ವಿವಿಧೆಡೆ ಆಲಿಕಲ್ಲು ಮಳೆ, ಅಪಾರ ಹಾನಿ

06:55 PM Apr 11, 2021 | Team Udayavani |

ಕುಂದಾಪುರ : ತಾಲೂಕಿನ ವಿವಿಧೆಡೆ ರವಿವಾರ ಸಂಜೆ ಆಲಿಕಲ್ಲು, ಗಾಳಿ ಮಳೆಯಾಗಿದೆ. ಕೆಲವೆಡೆ ತೋಟದಲ್ಲಿ ಅಡಿಕೆ ಮರಗಳು, ಬಾಳೆ ಗಿಡಗಳು ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದೆ.

Advertisement

ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಅಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ ಅಮಾಸೆಬೈಲು ಹಾಗೂ ಉಳ್ಳೂರು -74 ಪರಿಸರದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ.

ಗೋಳಿಯಂಗಡಿ ಪೇಟೆಯಲ್ಲಿ ಧಾರಾಕಾರ ಮಳೆ ಸುರಿದು ವಾರದ ಸಂತೆಗೆ ತೊಂದರೆಯಾಗಿತ್ತು. ದಿಢೀರ್‌ ಆಗಮಿಸಿದ ಮಳೆಗೆ ವ್ಯಾಪಾರಿಗಳು ಕಂಗಾಲಾದರು. ಮಾರಾಟಕ್ಕೆ ಇಟ್ಟ ವಸ್ತುಗಳು ಕೊಚ್ಚಿ ಹೋಗತೊಡಗಿತು. ದಿನನಿತ್ಯದ ಬಳಕೆ ಸಹಿತ ಇತರ ವಸ್ತುಗಳು ಮಳೆ ನೀರಿಗೆ ಒದ್ದೆಯಾಗಿವೆ.

ಇದನ್ನೂ ಓದಿ :ಪರ್ಕಳ ಪೇಟೆಯ ಹೆದ್ದಾರಿ ವಿಸ್ತರಣೆ ಕಾಮಗಾರಿ: ಕಟ್ಟಡ ತೆರವಿಗೆ ಸ್ಥಳೀಯರ ವಿರೋಧ

Advertisement

ಮೊಳಹಳ್ಳಿ, ಬಿದ್ಕಲ್‌ ಕಟ್ಟೆ, ಹುಣ್ಸೆಮಕ್ಕಿ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ತೆಕ್ಕಟ್ಟೆ ಪರಿಸರದಲ್ಲಿ ಮಳೆಯಾಗಿದೆ.
ಮಡಾಮಕ್ಕಿ, ಶೇಡಿಮನೆ ಭಾಗದಲ್ಲಿ ಆಲಿಕಲ್ಲು ಮಳೆ. ಬೆಳ್ವೆಯಲ್ಲಿ ಬೀಸಿದ ಭಾರೀ ಗಾಳಿಗೆ ಅಡಿಕೆ ಮರಗಳು ಧರೆಗುರುಳಿವೆ. ಕುಂದಾಪುರ ನಗರದಲ್ಲಿ ಹನಿಯಷ್ಟೇ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next