Advertisement

Kundapura: ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ದೇಗುಲ; ಸೆ. 7-9: ಶ್ರೀ ಗಣೇಶ ಚತುರ್ಥಿ

07:46 PM Sep 05, 2024 | Team Udayavani |

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಸೆ. 7ರಿಂದ 9ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.

Advertisement

ಸೆ.7ರಂದು ಬೆಳಗ್ಗೆ 8 ಗಂಟೆಯಿಂದ ಶ್ರೀ ಮಹಾಗಣಪತಿ ಹೋಮ ಸಂಕಲ್ಪ, ಮಧ್ಯಾಹ್ನ 12ಕ್ಕೆ ಅಷ್ಟೋತ್ತರ ಸಹಸ್ರ ನಾಳಿಕೇರ (1008 ತೆಂಗಿನಕಾಯಿ) ಮಹಾಗಣಪತಿ ಹವನದ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಕದ್ರಿ ರಮೇಶನಾಥ್‌ ಮತ್ತು ಬಳಗದಿಂದ ವಿಶೇಷ ವಾದ್ಯಗೋಷ್ಠಿ, ಸಂಜೆ 6ಕ್ಕೆ ರಂಗಪೂಜೆ, ಸೆ. 8ರಂದು ಬೆಳಗ್ಗೆ 10ಕ್ಕೆ 108 ಶ್ರೀ ಸತ್ಯಗಣಪತಿ ವ್ರತ ಹಾಗೂ ಕಥಾ ನಿರೂಪಣೆ, ಮೋದಕ ಹವನ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಸಂಜೆ 6ಕ್ಕೆ ಸಾಲಿಗ್ರಾಮದ ನಟರಾಜ ನೃತ್ಯ ನಿಕೇತನ ತಂಡದಿಂದ ವಿದುಷಿ ಭಾಗೀರಥಿ ಎಂ. ರಾವ್‌ ನಿರ್ದೇಶನದಲ್ಲಿ ನೃತ್ಯ ಸೌರಭ ಪ್ರದರ್ಶನಗೊಳ್ಳಲಿದೆ.
ಸೆ.9ರಂದು ಬೆಳಗ್ಗೆ 9ಕ್ಕೆ ಲಕ್ಷ ದೂರ್ವಾರ್ಚನೆ, ಸಿಂಧೂರಾರ್ಚನೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ಸಂಜೆ 6.30ರಿಂದ ಹಟ್ಟಿಯಂಗಡಿ ಮೇಳದಿಂದ ರಂಜಿತ್‌ ಕುಮಾರ್‌ ಶೆಟ್ಟಿ ನಿರ್ದೇಶನದಲ್ಲಿ “ಪವಿತ್ರ ಬಂಧನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಧಾರ್ಮಿಕ ಸಭೆ
ಸಂಜೆ 4ಕ್ಕೆ ಹಟ್ಟಿಯಂಗಡಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್‌.ಟಿ. ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಸಮ್ಮಾನ ನೆರವೇರಿಸಲಿದ್ದಾರೆ. ಮಾನವ ಹಕ್ಕು ಆಯೋಗದ ಸದಸ್ಯ ಟಿ. ಶ್ಯಾಮ ಭಟ್‌ ಸಹಾಯಧನ ವಿತರಿಸಲಿದ್ದಾರೆ. ಬಿ. ಅರುಣ್‌ ಕುಮಾರ್‌ ಬೆಂಗಳೂರು ಹಾಗೂ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ ಕುಮಾರ್‌ ಬಹುಮಾನ ವಿತರಿಸುವರು. ಜೋತಿಷಿ ನಾರಾಯಣ ರಂಗ ಭಟ್‌, ಯಕ್ಷಗಾನ ಕಲಾವಿದ ಆನಂದ ಶೇರುಗಾರ್‌ ಉಪ್ಪಿನಕುದ್ರು ಅವರಿಗೆ ಸಮ್ಮಾನ, ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next