Advertisement

Kundapura: ಕೆಳದಿ ಸಂಸ್ಥಾನದ ನಂಟು ಪತ್ತೆ

02:09 PM Dec 10, 2024 | Team Udayavani |

ಕುಂದಾಪುರ: ಶಿರ್ವದ ಪ್ರಾಚೀನ ಇತಿಹಾಸ ಮತ್ತು ಪುರಾತಣ್ತೀ ಶಾಸ್ತ್ರ ವಿಭಾಗದ ಪ್ರೊ| ಟಿ. ಮುರುಗೇಶಿ ಅವರು ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ತಾಮ್ರಪಟ ಶಾಸನವನ್ನು ಅಧ್ಯಯನ ಮಾಡಿ ಅದರ ಬರಹವನ್ನು ಭಟ್ಟಿ ಇಳಿಸಿದ್ದಾರೆ.

Advertisement

ಕನ್ನಡ ಶಾಸನ
ಶಾಸನ 46 ಸೆ.ಮೀ. ಉದ್ದ, 33 ಸೆ.ಮೀ. ಅಗಲ ಮತ್ತು 3 ಮಿ.ಮೀ. ದಪ್ಪವಿರುವ ಏಕೈಕ ತಾಮ್ರದ ಹಾಳೆಯಾಗಿದೆ. ಆಯತಾಕಾರದ ಈ ತಾಮ್ರಪಟದ ಎರಡೂ ಬದಿ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ, ಶಾಸನದ ಮುಮ್ಮುಖದಲ್ಲಿ ಹದಿನೇಳು ಸಾಲಿನ ಬರವಣಿಗೆ ಇದೆ, ಹಿಮ್ಮುಖದಲ್ಲಿ ಹದಿಮೂರು ಸಾಲುಗಳ ಬರಹವಿದೆ.

ವಿವರ
ಶಾಸನವು ಶೈವಸ್ತುತಿಯೊಂದಿಗೆ ಆರಂಭವಾಗಿದ್ದು, ನಂತರ ಶಾಲಿವಾಹನ ಶಕ ವರುಷ 1666 ನೆ ರುಧಿರೋದ್ಗಾರಿ ಸಂವತ್ಸರದ ಆಷಾಢ ಬ 5 ಯಲ್ಲು ಎಂಬ ಕಾಲಮಾನದ ಉಲ್ಲೇಖವಿದೆ. ಶಾಸನೋಕ್ತ ಕಾಲಮಾನವು ಕ್ರಿ.ಶ. 1744ರ ಜು.4ಕ್ಕೆ ಸರಿಹೊಂದುತ್ತದೆ. ಅನಂತರ ಶ್ರೀಮದ್‌ ಎಡವ ಮುರಾರಿ, ಕೋಟೆ ಕೋಟೆ ಕೋಳಾಹಳ ವಿಶುಧ ವೈದಿಕ ಸಿದ್ಧಾಂತ ಪ್ರತಿಷ್ಠಾಪಕ ಕೆಳದಿ ಸದಾಶಿವರಾಯ ನಾಯಕರ ವಂಶೋದ್ಭವ ಸೋಮಶೇಖರ ನಾಯಕರ ಧರ್ಮಪತ್ನಿ ಚೆನ್ನಮ್ಮಾಜಿಯವರ ಪ್ರಪೌತ್ರರು ಬಸವಪ್ಪ ನಾಯಕರ ಪೌತ್ರರು ಸೋಮಶೇಖರ ನಾಯಕರ ಅನುಜ ವೀರಭದ್ರ ನಾಯಕರ ಪುತ್ರರು ಬಸವಪ್ಪ ನಾಯಕರು. ಈ ಎರಡನೇ ಬಸವಪ್ಪ ನಾಯಕರ ಆಳ್ವಿಕೆಯ ಕಾಲದಲ್ಲಿ ನೀಡಿದ ದಾನ ಶಾಸನವಿದು.

ಧಾರ್ಮಿಕ ಸೌಹಾರ್ದ
ಶಾಸನೋಕ್ತ ಫಕೀರ ದೇವರು, ಡಂಬಳದ ಪ್ರಖ್ಯಾತ ಸೂಫಿ ಸಂತರ ಫಕೀರೇಶ್ವರಿ ಮಠ‌ ಡಂಬಳದಲ್ಲಿದೆ. ಸೂಫಿ ಪಂಥದ ಫಕೀರರಿಗೆ ತನ್ನ ರಾಜಧಾನಿ ಬಿದನೂರಿನಲ್ಲಿ ಮಠವನ್ನು ಕಟ್ಟಿಸಿ ಭಾರೀ ಮೊತ್ತದ ಹಣ ಮತ್ತು ಭೂ ದಾನವನ್ನು ನೀಡಿರುವುದು ಕೆಳದಿ ಅರಸರ ಧಾರ್ಮಿಕ ಸೌಹಾರ್ದತೆಗೆ ಈ ಶಾಸನ ಸಾಕ್ಷಿಯಾಗಿದೆ. ಶಾಸನದ ಕೊನೆಯಲ್ಲಿ ಶ್ರೀ ಸದಾಶಿವ ಎಂಬ ರುಜುವಿದೆ ಎಂದು ಪ್ರೊ| ಮುರುಗೇಶಿ ತಿಳಿಸಿದ್ದಾರೆ.

ಶಾಸನದ ಮಹತ್ವ
ಕೆಳದಿಯ ಎರಡನೇ ಬಸವಪ್ಪ ನಾಯಕರು ಬಿದನೂರಿನ ತಮ್ಮ ರಾಜಧಾನಿಯಲ್ಲಿ ಹೊಸಪೇಟೆಯೊಳಗೆ ತಮ್ಮ ತಾಯಿ ಮಲ್ಲಮ್ಮಾಜಿಯವರ ಹೆಸರಿನಲ್ಲಿ ಒಂದು ಸ್ವತಂತ್ರ ಮಠವನ್ನು ಕಟ್ಟಿಸಿ, ಆ ಮಠವನ್ನು ಡಂಬಳದ ಫಕೀರ ದೇವರಿಗೆ ಕೊಟ್ಟರು. ಗುರುವಪ್ಪ ನವರ ವಿನಂತಿಯ ಮೇರೆಗೆ ಆರು ಲಕ್ಷ ಹಾಗ ಮತ್ತು ಭೂ ಸ್ವಾಸ್ತೆಯನ್ನು ಮಠಕ್ಕೆ ಶಿವಾರ್ಪಿತವಾಗಿ ಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next