Advertisement

Kundapura; ಕರಿಮಣಿ ಎಗರಿಸಿದ ಇಬ್ಬರ ಬಂಧನ

12:52 AM Jan 20, 2024 | Team Udayavani |

ಕುಂದಾಪುರ: ಮದುವೆ ನಿಮಿತ್ತ ಕರಿಮಣಿ ಸರ ಖರೀದಿಸಿ ತಂದು ದೇವಾಲಯದೊಳಗೆ ಹೋಗಿದ್ದಾಗ ಭಕ್ತರ ಸೋಗಿನಲ್ಲಿ ಕಳವುಗೈದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಭಟ್ಕಳದ ವ್ಯಕ್ತಿಯೊಬ್ಬರು ಚಿನ್ನ ಬ್ಯಾಗಿನಲ್ಲಿಟ್ಟು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಪೂಜೆಗೆ ಹೋಗಿದ್ದಾಗ ಬ್ಯಾಗಿನಲ್ಲಿದ್ದ 3.5 ಲಕ್ಷ ರೂ. ಮೌಲ್ಯದ ಚಿನ್ನಾಣಭರಣವಿದ್ದ ಪರ್ಸ್‌ ಕಳವುಗೈಯಲಾಗಿತ್ತು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಜ. 14ರಂದು ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರ ತಂಡವು ಸಿಸಿ ಟಿವಿ ಮತ್ತು ಇತರ ತಾಂತ್ರಿಕ ದಾಖಲೆ ವಿಶ್ಲೇಷಣೆ ಮೂಲಕ ಪ್ರಕರಣ ದಾಖಲಾದ ಮೂರು ದಿನದಲ್ಲಿ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಹುಬ್ಬಳ್ಳಿ ಬೆಂಡಗೇರಿ ಮೂಲದ ವರಾದ ಬೀಬಿ ಜಾನ್‌ (58), ಪಾರವ್ವ (54) ಅವರನ್ನು ಬಂಧಿಸಿದ್ದು ಕಳವುಗೈದ 3.5 ಲಕ್ಷ ರೂ. ಮೌಲ್ಯದ 51.9 ಗ್ರಾಂ ತೂಕದ ಚಿನ್ನದ ಕರಿಮಣಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.

ಜಿಲ್ಲಾ ಎಸ್ಪಿ ಡಾ| ಅರುಣ್‌ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಪರಮೇಶ್ವರ ಹೆಗಡೆ, ಎಸ್‌.ಟಿ. ಸಿದ್ಧಲಿಂಗಪ್ಪ ಅವರ ನಿರ್ದೇಶನದಲ್ಲಿ ಕುಂದಾಪುರ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ನೇತೃತ್ವದಲ್ಲಿ, ಕುಂದಾಪುರ ನಗರ ಠಾಣೆ ನಿರೀಕ್ಷಕ ಯು.ಬಿ. ನಂದಕುಮಾರ್‌, ಉಪನಿರೀಕ್ಷಕ ವಿನಯ್‌ ಎಂ. ಕೊರ್ಲಹಳ್ಳಿ, ಕ್ರೈಂ ವಿಭಾಗದ ಪಿಎಸ್‌ಐ ಪ್ರಸಾದ್‌ ಕುಮಾರ್‌ ಕೆ., ಸಿಬಂದಿ ಸಂತೋಷ್‌ ಕುಮಾರ್‌, ಶ್ರೀಧರ್‌, ರಾಮ ಪೂಜಾರಿ, ಮೋನಿಕಾ, ಪದ್ಮಾವತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next