Advertisement
ಎಲ್ಲ ಸೌಕರ್ಯಗಳಿದ್ದರೂ ಚೋರಾಡಿ, ಯಡಾಡಿ ಮತ್ಯಾಡಿ -2, ಮುಡುವಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಶೂನ್ಯ ದಾಖಲಾತಿಯಾದ ಕಾರಣ ಬೀಗ ಬಿದ್ದಿದೆ. ಶಾಲೆ ಶುರುವಾದ ಬಳಿಕ ಜೂ. 10ರ ತನಕವೂ ಮಕ್ಕಳ ದಾಖಲಾತಿಗೆ ಕಾಯಲಾಗಿತ್ತು. ಆದರೆ ಹೊಸ ಮಕ್ಕಳು ಬರುವ ಬದಲು, ಇರುವ ಮಕ್ಕಳೂ ಬೇರೆ ಶಾಲೆಗೆ ಸೇರಿದ ಕಾರಣ, ಯಾವುದೇ ಹೊಸ ದಾಖಲಾತಿ ನಡೆಯದೇ ಜೂ. 12ರಿಂದ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲಿದ್ದ ಶಿಕ್ಷಕರನ್ನು ಸಮೀಪದ ಶಿಕ್ಷಕರು ಅಗತ್ಯವಿರುವ ಶಾಲೆಗೆ ನಿಯೋಜಿಸಲಾಗಿದೆ.
ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಸೇರಿಸಿ, ಶಾಲೆ ಉಳಿಸಿ ಎಂದು ದಾಖಲಾತಿ ಪ್ರಯತ್ನ ಮಾಡಲಾಗಿತ್ತು. ಫಲ ಕೊಡಲಿಲ್ಲ. ಮುಂದಿನ ವರ್ಷವಾದರೂ ದಾಖಲಾತಿ ನಡೆದರೆ ಶಾಲೆ ಮತ್ತೆ ತೆರೆದೀತು.
-ಪುರುಷೋತ್ತಮ,ಮುಡುವಳ್ಳಿ ಶಾಲೆಯಲ್ಲಿದ್ದ ಶಿಕ್ಷಕರು
ಪುನಶ್ಚೇತನ ಸಾಧ್ಯ
ಸ್ಥಳೀಯರ ಸಹಕಾರ ಇದ್ದರೆ ಶಾಲೆಯ ಪುನಶ್ಚೇತನ ಸಾಧ್ಯ. ಎಲ್ಲ ಸೌಕರ್ಯಗಳಿರುವ ಸರಕಾರಿ ಶಾಲೆ ನಿಷ್ಪ್ರಯೋಜಕವಾಗಬಾರದು. ಮಕ್ಕಳ ಸೇರ್ಪಡೆಗೆ ಸ್ಥಳೀಯರು ಮನ ಮಾಡಬೇಕು.
-ವಿಶ್ವನಾಥ ಉಡುಪ, ಯಡಾಡಿ ಮತ್ಯಾಡಿ ಶಾಲೆಯಲ್ಲಿದ್ದ ಶಿಕ್ಷಕರು
-ವಿಶ್ವನಾಥ ಉಡುಪ, ಯಡಾಡಿ ಮತ್ಯಾಡಿ ಶಾಲೆಯಲ್ಲಿದ್ದ ಶಿಕ್ಷಕರು
Related Articles
ಪೋಷಕರ ಸಹಕಾರ ಇದ್ದರೆ ಶಾಲೆಯನ್ನು ಮರಳಿ ತೆರೆಯುವುದು ಕಷ್ಟದ ಮಾತಲ್ಲ. ಸರಕಾರಿ ಶಾಲೆಗಳ ಗುಣಮಟ್ಟ ಖಾಸಗಿ ಶಾಲೆಗಳಿಗಿಂತ ಕಡಿಮೆ ಎಂಬ ಭಾವನೆ ಬೇಡ.
-ಬಾಬಣ್ಣ ನಾಯ್ಕ, ಚೋರಾಡಿಯಲ್ಲಿದ್ದ ಶಿಕ್ಷಕರು
– ಲಕ್ಷ್ಮೀ ಮಚ್ಚಿನ
Advertisement