Advertisement

ಕುಂದಾಪುರ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

03:45 AM Jul 06, 2017 | Team Udayavani |

ಕುಂದಾಪುರ: 1984-85ನೇ ಸಾಲಿನ ಭಂಡಾರ್‌ಕಾರ್ ಕಾಲೇಜಿನ ಹಳೆ ವಿದ್ಯಾರ್ಥಿಗಳು ಸ್ಥಾಪಿಸಿದ ವಂದೇ ಮಾತರಂ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘದ 7ನೇ ವಾರ್ಷಿಕ ಮಹಾಸಭೆ ಜೂ.25ರಂದು ಕುಂದಾಪುರದ ರೋಟರಿ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ  ಜರಗಿತು.

Advertisement

ಸಂಘದ ಅಧ್ಯಕ್ಷ ಎಂ. ರಾಜಗೋಪಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಈ ವರ್ಷ ಉತ್ತಮ ಪ್ರಗತಿಯನ್ನು ದಾಖಲಿಸಿದ್ದು ನೋಟು ಅಮಾನ್ಯ ಪರಿಸ್ಥಿತಿಯನ್ನು ನಿಭಾಯಿಸಿ ರೂ. 3.20 ಲಕ್ಷ  ನಿವ್ವಳ ಲಾಭವನ್ನು ಗಳಿಸಿದೆ ಎಂದರಲ್ಲದೇ ಈ ಬಾರಿ  ಶೇರುದಾರರಿಗೆ ಶೇ.8 ಡಿವಿಡೆಂಡ್‌ ಘೋಷಣೆ ಮಾಡಿದರು. 

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಪುತ್ರನ್‌ ಆಡಳಿತ ಮಂಡಳಿಯ ವರದಿ ಮಂಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಒಜಲಿನ್‌ ರೆಬೆಲ್ಲೊ, ನಿರ್ದೇಕರಾದ ವಸಂತ ಶೆಟ್ಟಿ, ಶಿವಮೂರ್ತಿ ಭಂಡಾರಕರ್‌, ನಾಗರಾಜ ಶೇರಿಗಾರ್‌ ಉಪಸ್ಥಿತರಿದ್ದರು. 

ನಿರ್ದೇಶಕ ಮಂಜುನಾಥ ಗಾಣಿಗ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ಹಾಗೂ ನಿರ್ದೇಶಕ  ವಿನಯ ಪಾçಸ್‌ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ರಾಜೀವ್‌ ಕೋಟ್ಯಾನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next