Advertisement
ಕೋವಿಡ್ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿರುವುದರಿಂದ ಜನರು ಮತ್ತೆ ಕೋವಿಡ್ ಪೂರ್ವ ಕಾಲದಂತೆ ಪ್ರವಾಸ ಹೊರಡುವ ಮನಸ್ಸು ಮಾಡುತ್ತಿದ್ದಾರೆ. ಆದರೆ ಹೆಚ್ಚಿನ ಪ್ರವಾಸಿ ಕೇಂದ್ರಗಳಲ್ಲಿ ಎರಡು ವರ್ಷಗಳಿಂದ ನಿರ್ವಹಣ ಕೆಲಸ ಕಾರ್ಯಗಳೇ ಆಗಿಲ್ಲ. ಕೆಲವು ತಾಣ ಗಳಿಗೆ ಹೋಗುವ ದಾರಿಯೂ ಸರಿಯಾಗಿಲ್ಲ. ಕೇವಲ ನಡೆದಾಡುವ ದಾರಿಯಷ್ಟೇ ಇರುವ ಪ್ರದೇಶಗಳಲ್ಲಿ ಗಿಡಗಂಟಿ ಬೆಳೆದು ದಾರಿ ಕಾಣದಂತಹ ಸ್ಥಿತಿ ಇದೆ. ಆದುದರಿಂದ ಈ ಪ್ರದೇಶಗಳನ್ನು ಮತ್ತೆ ಸ್ವತ್ಛಗೊಳಿಸಬೇಕಾಗಿದೆ. ಕನಿಷ್ಠ ಮೂಲಕ ಸೌಕರ್ಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಅವಶ್ಯವಿರುವಲ್ಲಿಗೆ ದಾರಿ, ಬೆಳಕಿನ ವ್ಯವಸ್ಥೆ ಮಾಡಬೇಕಾಗಿದೆ.
Related Articles
Advertisement
ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಮತ್ತಷ್ಟು ಬೆಳವಣಿಗೆ ಕುರಿತು ಸ್ಥಳೀಯಾಡಳಿತಗಳೂ ಮನಸ್ಸು ಮಾಡಬೇಕಿವೆ. ಪ್ರವಾಸೋದ್ಯಮ ಇಲಾಖೆ ಯೂ ಗಮನ ಹರಿಸಬೇಕಿದೆ. ರಾಜ್ಯ ಸರಕಾರ ಪ್ರವಾಸಿಗರ ಆಕರ್ಷಣೆಗೆ ಕ್ರಮ, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕಿದೆ. ಹಾಗೆ ಜನ ಬಂದಾಗ ಸ್ವತ್ಛತೆಗೆ ಆದ್ಯ ಗಮನ ನೀಡಬೇಕಿದೆ. ಇದಲ್ಲದ ಹೊರತು ಪ್ರವಾಸಿಗರು ಬಂದರೆ ಆ ಊರಿಗೆ ಶಾಪ. ಹಾಗಾಗದಂತೆ ಜಾಗೃತಿಯ ಅವಶ್ಯವೂ ಇದೆ. ನಗರಕ್ಕೆ ಆತುಕೊಂಡಿರುವ ಪಂಚಗಂಗಾವಳಿ, ಕೋಡಿ, ಬಬ್ಬುಕುದ್ರು ಮೊದಲಾದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆ ತಯಾರಾಗಲಿ. ಅದಕ್ಕೆ ಅಗತ್ಯ ಬಜೆಟ್ ಸರಕಾರದಿಂದ ದೊರೆಯಲಿ. ಅಲ್ಲಿನ ವ್ಯವಸ್ಥೆಗಳೆಲ್ಲ ಉತ್ತಮಗೊಳ್ಳಲಿ. ಆಗ ಒಂದಷ್ಟು ಆರ್ಥಿಕ ಚೇತರಿಕೆಯೂ ಕಂಡು ಬಂದೀತು.
-ಸಂ